ಶಿವಮೊಗ್ಗ ಜಿಲ್ಲಾ ಗಂಗಾಮತಸ್ಥರ ಸಂಘ ತನ್ನ 50ನೇ
ವರ್ಷದ ನೆನಪಿಗೆ ಸುವರ್ಣ ಸಂಭ್ರಮ ಆಚರಿಸುತ್ತಿದ್ದು, ಇದರ ಸವಿನೆನಪಿ
ವಿಶೇಷ ಸ್ಮರಣಸಂಚಿಕೆ ಹೊರತರುತ್ತಿದೆ ಎಂದು ಸ್ಮರಣೆ ಸಂಚಿಕೆ ಗೌರವ
ಸಂಪಾದಕ ಎ.ಹಾಲೇಶಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಮರಣ ಸಂಚಿಕೆ “ಸುವರ್ಣ
ಸಂಭ್ರಮ” ಹೆಸರಲ್ಲಿ ಹೊರಬರುತ್ತಿದೆ. ಇದಕ್ಕಾಗಿ ಸಮಾಜದ ಹಿರಿ-ಕಿರಿಯ
ಬರಹಗಾರರಿಂದ ವಿಶೇಷ ಬರಹಗಳನ್ನು ಆಹ್ವಾನಿಸಲಾಗುತ್ತಿದೆ. ಬರಹಗಳು
ಸಮಾಜ ನಡೆದು ಬಂದ ಹಾದಿ ಸಾಧಕರ ಪರಿಚಯ, ಸಾಹಿತ್ಯ, ಶಿಕ್ಷಣ, ಧಾರ್ಮಿಕ,
ಸಾಮಾಜಿಕ, ರಾಜಕೀಯ ಸಾಧನೆ ಹೀಗೆ ವಿವಿಧ ಸಮಾಜಮುಖಿ ಬರಹಗಳಾಗಿರಬೇಕು.
ಬರಹಗಳು 250 ಪದಗಳಿಗೆ ಮೀರಿರಬಾರದು. ನುಡಿ-ಲಿಪಿಯಲ್ಲಿ ಟೈಪ್ ಮಾಡಿ
ಕಳುಹಿಸಿದರೆ ಉತ್ತಮ ಬರಹಗಳು ಕೈಸೇರಲು ಏ.30 ಕೊನೆಯ
ದಿನಾಂಕವಾಗಿರುತ್ತದೆ ಎಂದರು.
ಗಂಗಾಮತ ಸಮಾಜವು ಶೈಕ್ಷಣಿಕ ಹಾಗೂ ಇತರ ಎಲ್ಲಾ
ರಂಗಗಳಲ್ಲಿಯೂ ಹಿಂದೆ ಉಳಿದಿದೆ ಸಮಾಜದ ಸಂಘಟನೆ ಮತ್ತು ಸಾಧಕರ
ಪರಿಚಯ ಇವುಗಳನ್ನು ನೆನಪಿಸಿಕೊಳ್ಳುವ ಹಿನ್ನಲೆಯಲ್ಲಿ ಈ ವಿಶೇಷ ಸಂಚಿಕೆ
ರೂಪಿಸಲಾಗುತ್ತಿದೆ. ಇದಕ್ಕಾಗಿ ಸಂಪಾದಕ ಮಂಡಳಿಯನ್ನು ರಚಿಸಲಾಗಿದೆ.
ಸಮಾಜದ ಲೇಖಕರು ತಮ್ಮ ಲೇಖನಗಳನ್ನು suvಚಿಡಿಟಿಚಿsಚಿmbಡಿಚಿmಚಿ2020@gmಚಿiಟ.ಛಿom
ಕ್ಕೆ ಕಳುಹಿಸಬೇಕು ಅಥವಾ ಸುವರ್ಣ ಸಂಭ್ರಮ ಸ್ಮರಣ ಸಂಚಿಕೆ ಶಿವಮೊಗ್ಗ ಜಿಲ್ಲಾ
ಗಂಗಾಮತಸ್ಥರ ಸಂಘ, ಬಾಪೂಜಿ ನಗರ ಇಲ್ಲಿಗೆ ಸ್ಪುಟವಾಗಿ ಕೈ
ಬರವಣಿಗೆಯಲ್ಲೂ ಬರೆದು ಕಳುಹಿಸಬಹುದಾಗಿದೆ ಎಂದರು.
ಹೆಚ್ಚಿನ ವಿವರಗಳಿಗೆ: 94801 51123, 94486 81555, 94834 93666
ಸಂಪರ್ಕಿಸಬಹುದಾಗಿದೆ ಎಂದರು.
ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಡಿ.ಬಿ.ಕೆಂಚಪ್ಪ ಮಾತನಾಡಿ, ಮಾ.2 ರಂದು
ಬೆಳಿಗ್ಗೆ 11 ಗಂಟೆಗೆ ಬಾಪೂಜಿ ನಗರದಲ್ಲಿರುವ ಜಿಲ್ಲಾ ಗಂಗಾಮತ
ವಿದ್ಯಾರ್ಥಿನಿಲಯದ 2ನೇ ಮಹಡಿ ಕಟ್ಟಡದ ಉದ್ಘಾಟನಾ ಸಮಾರಂಭವನ್ನು
ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸುವರು.
ಬಿ.ವೈ.ರಾಘವೇಂದ್ರ ಅವರು ಗಂಗಾಮತ ಸಮಾಜದ ಚುನಾಯಿತ
ಪ್ರತಿನಿಧಿಗಳನ್ನು ಸನ್ಮಾನಿಸುವರು. ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್,
ಮೇಯರ್ ಸುವರ್ಣಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್, ಪಾಲಿಕೆ
ಸದಸ್ಯೆ ಸುನೀತಾ ಅಣ್ಣಪ್ಪ, ಸಾಗರ ನಗರಸಭಾ ಅಧ್ಯಕ್ಷೆ ಮಧುರ ಶಿವಾನಂದ್
ಸೇರಿದಂತೆ ಸಮಾಜದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಎಂದರು.
ಸಮಾಜದ ಮುಖಂಡ, ನಿವೃತ್ತ ಪ್ರಾಂಶುಪಾಲ ಜಿ.ಶೇಖರಪ್ಪ ಮಾತನಾಡಿ,
ಗಂಗಾಮತ ಸಮಾಜವು ಎಲ್ಲಾ ರಂಗಗಳಲ್ಲಿಯೂ ಹಿಂದೆ ಉಳಿದಿದೆ. ಸಮಾಜ
ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಬಾಪೂಜಿ ನಗರದಲ್ಲಿ
ವಿದ್ಯಾರ್ಥಿನಿಲಯವನ್ನು ಆರಂಭಿಸಲಾಗಿದ್ದು, ಈಗ ಅದರ 2ನೇ ಮಹಡಿ ಕಟ್ಟಡ
ಉದ್ಘಾಟನೆಯಾಗಲಿದೆ ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗ್ರಾ.ಪಂ.ಗೆ ನೂತನವಾಗಿ
ಆಯ್ಕೆಯಾಗಿರುವ ಸಮಾಜದ ಗ್ರಾ.ಪಂ.ಸದಸ್ಯರನ್ನು ಸನ್ಮಾನಿಸಲಾಗುವುದು
ಮತ್ತು ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಿಸುವ
ಯೋಜನೆಯಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಆರ್.ಮೇಘರಾಜ್,
ಕೆ.ವಿ.ಅಣ್ಣಪ್ಪ, ಬಿ.ಡಿ.ರವಿಕುಮಾರ್, ಹೆಚ್.ಎಂ.ರಂಗನಾಥ್, ಹೆಚ್.ಎಸ್.ಚಂದ್ರಶೇಖರ್,
ಎಂ.ಹೆಚ್.ಸತ್ಯನಾರಾಯಣ, ವಕೀಲ ಬಿ.ಹೆಚ್.ಚನ್ನಪ್ಪ, ಜಿ.ನಾಗಪ್ಪ, ಜಿ.ಕೆಂಚಪ್ಪ,
ಆರುಂಡಿ ಶ್ರೀನಿವಾಸ ಮೂರ್ತಿ, ಪ್ರೊ.ಸತ್ಯನಾರಾಯಣ, ಹೆಚ್.ಕೆ.ಸಿಂಚನ ಸೇರಿದಂತೆ
ಹಲವರಿದ್ದರು.

Leave a Reply

Your email address will not be published. Required fields are marked *