ಎಪಿಎಂಸಿ ದಾವಣಗೆರೆ ತಾಲ್ಲೂಕು
ಚುನಾವಣಾ ವೇಳಾಪಟ್ಟಿ ಪ್ರಕಟ

ದಾವಣಗೆರೆ ಮಾ.2
  ಸರ್ಕಾರದ ನಿರ್ದೇಶನದಂತೆ ಹಾಗೂ ಕರ್ನಾಟಕ ಕೃಷಿ
ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು
ಅಭಿವೃದ್ದಿ) ನಿಯಮಗಳ 1968 ರ ನಿಯಮ 7 ಮತ್ತು 42
ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ ದಾವಣಗೆರೆ ಜಿಲ್ಲೆಯ
ದಾವಣಗೆರೆ ತಾಲ್ಲೂಕಿನ ಕೃಷಿ ಸಹಕಾರ ಸಂಸ್ಕರಣ ಸಂಘ
ಕ್ಷೇತ್ರದಿಂದ ತೆರವಾಗಿರುವ ಸದಸ್ಯ ಸ್ಥಾನಕ್ಕೆ
ಉಪಚುನಾವಣೆಯನ್ನು ನಡೆಸಿ ಸದಸ್ಯರನ್ನು ಚುನಾಯಿಸಲು
ಚುನಾವಣಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ.
ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು : ಕೃಷಿ
ಸಹಕಾರ ಸಂಸ್ಕರಣ ಕ್ಷೇತ್ರ್ರ ಸ್ಥಾನ-01, ಮೀಸಲಾತಿ ಸಾಮಾನ್ಯ
ಅಭ್ಯರ್ಥಿ.
ಚುನಾವಣಾ ವೇಳಾಪಟ್ಟಿ: ಮಾ.04 ನಾಮಪತ್ರಗಳನ್ನು
ಸಲ್ಲಿಸಲು ಕೊನೆಯ ದಿನವಾಗಿದ್ದು, ಬೆಳಿಗ್ಗೆ 11 ರಿಂದ ಮಧ್ಯಾಹ್ನ 3
ಗಂಟೆಯವರೆಗೆ ಚುನಾವಣಾಧಿಕಾರಿಗಳು, ಕೃಷಿ ಉತ್ಪನ್ನ
ಮಾರುಕಟ್ಟೆ ಸಮಿತಿ ದಾವಣಗೆರೆ ಹಾಗೂ ತಹಶೀಲ್ದಾರ್,
ದಾವಣಗೆರೆ ಇವರ ಕಾರ್ಯಾಲಯದಲ್ಲಿ ನಾಮಪತ್ರಗಳನ್ನು
ಸಲ್ಲಿಸಬಹುದು. ಮಾ.05 ರಂದು ನಾಮಪತ್ರಗಳನು
ಪರಿಶೀಲಿಸುವ ದಿನಾಂಕವಾಗಿದೆ. ಮಾ.08 ರಂದು
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ
ದಿನವಾಗಿರುತ್ತದೆ. ಮಾ.18 ರಂದು ಬೆಳಿಗ್ಗೆ 8 ರಿಂದ ಸಂಜೆ 4
ಗಂಟೆಯವರೆಗೆ ಮತದಾನ ಅವಶ್ಯವಿದ್ದರೆ
ಮತದಾನವನ್ನು ನಡೆಸಲಾಗುವುದು. ಮಾ.20 ರಂದು
ಮತಗಳ ಎಣಿಕೆ ನಡೆಸಲಾಗುವುದು.
 ಚುನಾವಣಾ ವೇಳಾಪಟ್ಟಿಯಂತೆ ನಿಯಮಾನುಸಾರ
ಚುನಾವಣೆ ಪ್ರಕ್ರಿಯನ್ನು ಪ್ರಾರಂಭಿಸಲು
ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *