ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಇವರು ಮಾ.5 ರಿಂದ
7 ರವೆರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.5 ರ ಶುಕ್ರವಾರ ಸಂಜೆ 3 ಗಂಟೆಗೆ ಬೆಂಗಳೂರಿನಿಂದ
ಹೊರಟು ರಾತ್ರಿ 8 ಗಂಟೆಗೆ ಹೊನ್ನಾಳಿಗೆ ಆಗಮಿಸಿ ವಾಸ್ತವ್ಯ
ಮಾಡುವರು.
ಮಾ.6 ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯಿಂದ
ಹೊರಟು 10.30 ಕ್ಕೆ ನ್ಯಾಮತಿ ತಾಲ್ಲೂಕಿನ ಸುರಹೊನ್ನೆ
ಗ್ರಾಮಕ್ಕೆ ತಲುಪಿ, ಅಲ್ಲಿ ನಡೆಯುವ ಸರ್ಕಾರಿ ಶಾಲಾ ಹೆಚ್ಚುವರಿ
ಕಟ್ಟಡ ಕಾಮಗಾರಿ ನಿರ್ಮಾಣದ ಶಂಕುಸ್ಥಾಪನೆ
ಕಾರ್ಯಕ್ರಮವನ್ನು ನೆರವೇರಿಸುವರು. 11.30 ಕ್ಕೆ ಹೊನ್ನಾಳಿ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವ
ಉದ್ಯೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಪಟ್ಟಣದಲ್ಲಿ ಮಧ್ಯಾಹ್ನ 1
ಗಂಟೆಗೆ ನಡೆಯುವ ಸಾಮಾಜಿಕ ಭದ್ರತಾ ಯೋಜನೆಯಡಿ
ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ,
ಮಧ್ಯಾಹ್ನ 1.45 ಕ್ಕೆ ನ್ಯಾಮತಿಯ ಅರಬಗಟ್ಟೆ ಗ್ರಾಮದಲ್ಲಿ
ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ
ಭಾಗÀವಹಿಸುವರು. ಮಧ್ಯಾಹ್ನ 3 ಗಂಟೆಗೆ ಅರಬಗಟ್ಟೆಯ
ಮುಕ್ತೇನಹಳ್ಳಿಯಲ್ಲಿ ಸರ್ಕಾರಿ ಪ್ರೌಢ ಶಾಲೆಯ ಹೊಸ
ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. 4.30 ಕ್ಕೆ
ಹೊನ್ನಾಳಿಗೆ ಪ್ರಯಾಣಿಸಿ ಸ್ಥಳೀಯ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ರಾತ್ರಿ 7.30 ಕ್ಕೆ ನ್ಯಾಮತಿ ತಾಲ್ಲೂಕಿನ
ಸುರಹೊನ್ನೆ ಗ್ರಾಮದಲ್ಲಿ ಸುರೇಶ್ ಇವರ ಮನೆಯಲ್ಲಿ
ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾತ್ರಿ
8.30 ಕ್ಕೆ ಹೊನ್ನಾಳಿಗೆ ಆಗಮಿಸಿ ಇಲ್ಲಿ ವಾಸ್ತವ್ಯ ಮಾಡುವರು.
ಮಾ. 7 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯ
ಹೊಳೆಮಠದಲ್ಲಿ ನಡೆಯುವ ಅಭಿಷೇಕ ಮತ್ತು
ಧರ್ಮಸಭೆಯಲ್ಲಿ ಪಾಲ್ಗೊಳ್ಳುವರು. 11.30 ಕ್ಕೆ
ಹೆಚ್.ಕಡದಕಟ್ಟೆ ಗ್ರಾಮದಲ್ಲಿ ನಡೆಯುವ ಸ್ಥಳೀಯ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ
ಸೊರಟೂರು ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿ ಉದ್ಘಾಟನೆ
ನೆರವೇರಿಸುವರು. ಮಧ್ಯಾಹ್ನ 1.30 ಕ್ಕೆ ಹೊನ್ನಾಳಿಯಲ್ಲಿ
ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು
ಸ್ವೀಕರಿಸುವರು. ಸಂಜೆ 4 ಗಂಟೆಗೆ ಹೊನ್ನಾಳಿಯಿಂದ

ಬೆಂಗಳೂರಿಗೆ ನಿರ್ಗಮಿಸುವರು ಎಂದು ಮುಖ್ಯಮಂತ್ರಿಗಳ
ರಾಜಕೀಯ ಕಾರ್ಯದರ್ಶಿಯವರ ವಿಶೇಷ ಕರ್ತವ್ಯಾಧಿಕಾರಿ
ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *