ಪಾಲಿಕೆ

ವಾಟ್ಸ್‍ಆ್ಯಪ್ ನಂಬರ್ ಪೋಸ್ಟರ್ ಬಿಡುಗಡೆ ಮಾಡಿದ

ಮೇಯರ್

ಗ್ರಾಹಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು
ಮಹಾನಗರಪಾಲಿಕೆ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದು,
ಗ್ರಾಹಕರು ತಮ್ಮ ಸಮಸ್ಯೆಗಳನ್ನು ತಕ್ಷಣವೇ ತಿಳಿಸಲು
ವಾಟ್ಸ್‍ಆ್ಯಪ್ ನಂಬರ್‍ನ್ನು ನೀಡಲಾಗಿದೆ.
ಶುಕ್ರವಾರ ಮಹಾನಗರಪಾಲಿಕೆಯ ಮಹಾಪೌರರಾದ
ಎಸ್.ಟಿ.ವೀರೇಶ್ ತಮ್ಮ ಕಚೇರಿಯಲ್ಲಿ ಸಾರ್ವಜನಿಕ ಕುಂದು
ಕೊರತೆ-ಡಿಜಿಟಲ್ ತಂತ್ರಜ್ಞಾನ ವಾಟ್ಸ್‍ಆ್ಯಪ್ ಚಾಲನೆ ಪೋಸ್ಟರ್
ಬಿಡುಗಡೆ ಮಾಡಿ 8277234444 ವಾಟ್ಸ್‍ಆ್ಯಪ್ ನಂಬರ್‍ಗೆ ಚಾಲನೆ
ನೀಡಿದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಬಳಕೆ
ಹೆಚ್ಚಾಗಿದ್ದು, ಸಾಮಾನ್ಯ ಜನರು ಸಹ ಮೊಬೈಲ್‍ಗಳನ್ನು
ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ವಾಟ್ಸ್‍ಆ್ಯಪ್ ಸಂವಹನ
ಮಾಧ್ಯಮವಾಗಿ ವ್ಯಾಪಕ ಬಳಕೆಯಲ್ಲಿದ್ದು, ಗ್ರಾಹಕರ
ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಹಾಗೂ ಸಾರ್ವಜನಿಕರ
ಅಹವಾಲುಗಳನ್ನು ನೇರವಾಗಿ ಸ್ವೀಕರಿಸಲು ಆಧುನಿಕ
ತಂತ್ರಜ್ಞಾನದ ಮೊರೆ ಹೋಗಲು ತೀರ್ಮಾನಿಸಿದ್ದೇವೆ
ಎಂದರು.
ಮಹಾನಗರಪಾಲಿಕೆಯ ಸ್ಥಿರ ದೂರವಾಣಿ 234444 ಇದ್ದು,
ಸಾರ್ವಜನಿಕರ ಚಿರಪರಿಚಿತ ಸಂಖ್ಯೆಯು ಆಗಿದೆ. ಆದ್ದರಿಂದ ಇದೇ
ನಂಬರ್‍ಗೆ 8277 ಎಂಬ ನಾಲ್ಕು ಸಂಖ್ಯೆಗಳನ್ನು ಅಳವಡಿಸಲಾಗಿದೆ.
ಸಾರ್ವಜನಿಕರು ತಮ್ಮ ದೂರುಗಳನ್ನು 8277234444
ನಂಬರ್‍ಗೆ ವಾಟ್ಸ್‍ಆ್ಯಪ್ ಮಾಡಬಹುದು ಎಂದು ತಿಳಿಸಿದರು.
ನಗರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು,
ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣವೇ ಸ್ಪಂದಿಸಲು
ಹಾಗೂ ನಗರದಾದ್ಯಂತ ಯಾವುದೇ ಸೌಲಭ್ಯಗಳ
ಪೂರೈಕೆ ಸ್ಥಗಿತಗೊಂಡಿದ್ದಲ್ಲಿ ಮಹಾನಗರ ಪಾಲಿಕೆ ನೀಡಿರುವ
ವಾಟ್ಸ್‍ಆ್ಯಪ್ ನಂಬರ್‍ಗೆ ಮೆಸೇಜ್, ಫೋಟೋಗಳನ್ನು
ಕಳಿಸಿಕೊಡಬಹುದು. ಅಥವಾ ಕರೆ ಮಾಡಿ ಸಮಸ್ಯೆಗಳನ್ನು
ಹಂಚಿಕೊಳ್ಳಬಹುದು. ಸಾರ್ವಜನಿಕರು ತಿಳಿಸುವ
ಸಮಸ್ಯೆಗಳನ್ನು ಪಾಲಿಕೆ ವ್ಯಾಪ್ತಿಯ ಕಂಟ್ರೋಲ್ ರೂಂ
ನಿರ್ವಹಿಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ
ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆಯನ್ನು
ಬಗೆಹರಿಸುತ್ತಾರೆ.
ಈಗಾಗಲೇ ಕೆಲ ವಾರ್ಡ್‍ಗಳಲ್ಲಿ ಇದರ ಪ್ರಯೋಗ
ಮಾಡಿದ್ದು ಯಶಸ್ವಿಯಾಗುತ್ತಿರುವುದರ ಹಿನ್ನೆಲೆಯಲ್ಲಿ ಈ
ಯೋಜನೆಯನ್ನು ನಗರದಾದ್ಯಂತ ವಿಸ್ತರಿಸುತ್ತಿದ್ದೇವೆÉ.
ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು ಮೊದಮೊದಲು
ನಿಭಾಯಿಸಲು ಕಷ್ಟವೆನಿಸಬಹುದು. ಆದರೆ ಇದನ್ನು ಸವಾಲಾಗಿ

ಸ್ವೀಕರಿಸಿ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ. ಸಾರ್ವಜನಿಕರ
ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸುತ್ತೇವೆ ಎಂದು
ಭರವಸೆ ನೀಡಿದರು.
ದಾವಣಗೆರೆ ಜಿಲ್ಲೆಯು ವಾಸಯೋಗ್ಯ ನಗರವೆಂದು
ದೇಶದಲ್ಲಿ 9ನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ.
ಆದರೆ ಉಳಿದ ವಿಚಾರಗಳಲ್ಲಿ ಹಿಂದೆ ಉಳಿದಿದೆ. ಹಾಗೂ
ಮಂಗಳೂರಿನಲ್ಲಿ ಸ್ವಚ್ಛ ಅಭಿಯಾನದಡಿ ಸುಮಾರು 440
ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ
ಯಶಸ್ವಿಯಾಗಿದ್ದು, ಇದೀಗ ಸ್ವಚ್ಛ ದಾವಣಗೆರೆಯನ್ನು
ಮಾಡಲು ಹಿರಿಯ ತಜ್ಞರು, ಆಡಳಿತಾಧಿಕಾರಿಗಳು, ಮಾಧ್ಯಮ
ವರ್ಗದವರು,
ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರೊಂದಿಗೆ ಚರ್ಚಿಸಿ
ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು
ಎಂದರು.
ವಾರ್ಡ್ ವಿಸಿಟ್ : ವಾರಕ್ಕೆ ನಾಲ್ಕು ಬಾರಿ ಮುಖಂಡರು,
ಆಡಳಿತಾಧಿಕಾರಿಗಳು, ಹಿರಿಯ ಅಧಿಕಾರಿಗಳು, ಆಯಾ ವಾರ್ಡ್‍ಗಳ
ಕಾರ್ಪೋರೇಟರ್‍ಗಳು ಖುದ್ದಾಗಿ ಸ್ಥಳ ವೀಕ್ಷಣೆ ಮಾಡಲು
ಮುಂದಾಗಿದ್ದು, ಸ್ಥಳದಲ್ಲೇ ಸಮಸ್ಯೆಗಳನ್ನು ಪರಿಶೀಲಿಸಿ
ಸಾಧ್ಯವಾದಲ್ಲಿ ಸ್ಥಳದಲ್ಲೇ ಬಗೆಹರಿಸಲು ಯತ್ನಿಸುತ್ತೇವೆ.
ಇಲ್ಲದಿದ್ದಲ್ಲಿ ಸಮಯವಕಾಶ ತೆಗೆದುಕೊಂಡು
ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು.
ತಿಂಗಳ ಅಂತ್ಯದಲ್ಲಿ ಬಜೆಟ್ ಮಂಡನೆ : ಮಾರ್ಚ್ ತಿಂಗಳ
ಅಂತ್ಯದಲ್ಲಿ ಬಜೆಟ್ ಮಂಡನೆ ಮಾಡಲಿದ್ದು, ಅಧಿಕಾರಿಗಳು
ಸೇರಿದಂತೆ ನಗರದ ಸಮಸ್ತ ಜನರು ನಗರಾಭಿವೃದ್ಧಿಗೆ
ಸೂಕ್ತ ಸಲಹೆ, ಸೂಚನೆಗಳನ್ನು ವಾಟ್ಸ್‍ಆ್ಯಪ್ ನಂಬರ್‍ಗೆ
ತಲುಪಿಸಬಹುದು ಅಥವಾ ಬರಹದ ಮೂಲಕ ಕಚೇರಿಗೆ ತಂದು
ಕೊಡಬಹುದು. ನಿಮ್ಮ ಸಲಹೆಗಳನ್ನು ಪರಿಶೀಲಿಸಿ ಬಜೆಟ್‍ನಲ್ಲಿ
ಅನುಮೋದಿಸಲು ಯತ್ನಿಸುತ್ತೇವೆ ಎಂದು ತಿಳಿಸಿದರು.
ಸನ್ಮಾನ, ಸಮಾರಂಭಗಳಿಗೆ ಕರೆಯಬೇಡಿ : ಮೇಯರ್
ಅವಧಿ ಒಂದು ವರ್ಷ ಮಾತ್ರ ಇದ್ದು, ಈ ಸಂಪೂರ್ಣ
ಅವಧಿಯನ್ನು ಸಾರ್ವಜನಿಕರ ಸೇವೆಗೆ ಮೀಸಲಿಡುತ್ತೇನೆ.
ಸಮಯದ ಅಭಾವವಿರುವುದರಿಂದ ಸಮರ್ಪಕ ಸೇವೆ
ಸಲ್ಲಿಸಲು ಕಷ್ಟವಾಗುತ್ತದೆ. ಆದ್ದರಿಂದ ಸಾರ್ವಜನಿಕರು
ಸನ್ಮಾನ, ಸಭೆ-ಸಮಾರಂಭಗಳಿಗೆ ನನ್ನನ್ನು ಕರೆದು
ಪ್ರಶಸ್ತಿ-ಪುರಸ್ಕಾರಗಳನ್ನು ನೀಡಬೇಡಿ. ನನ್ನ ಅವಧಿ
ಮುಗಿದ ನಂತರ ನಾನು ಮಾಡಿದ ಸೇವೆಯನ್ನು ಪರಿಶೀಲಿಸಿ
ನಂತರ ಸನ್ಮಾನಿಸಿ ಹಾಗೂ ಹಾರ, ಬೊಕ್ಕೆ ಎಂದು ನೀಡುವ ಬದಲು
ಪುಸ್ತಕಗಳನ್ನು ಕೊಡಿ ಎಂದು ಮನವಿ ಮಾಡಿದರು.
ಈಗಾಗಲೇ 2 ಸಾವಿರ ಪುಸ್ತಕಗಳು ಕಚೇರಿಗೆ ಬಂದಿದ್ದು,
ಅವುಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ
ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯರಾದ
ಕೆ.ಎಂ.ವೀರೇಶ್, ಶಿವಪ್ರಕಾಶ್, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ
ಸುನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *