ರಂಗಭೂಮಿ ಮಹಿಳೆಯನ್ನು ಸೂಕ್ಷ್ಮವಾಗಿ

ಪ್ರತಿನಿಧಿಸಬೇಕು: ಡಾ.ರಜನಿ ಪೈ

ಶಿವಮೊಗ್ಗ, ಮಾ.6 : ಮಾಧ್ಯಮಗಳಲ್ಲಿ
ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸ್ವತಂತ್ರವಾಗಿ ಯೋಚನೆ
ಮಾಡುವ ಸೃಜನಶೀಲ ಮಹಿಳೆಯರನ್ನು ಅಸಹ್ಯವಾಗಿ ಟ್ರೋಲ್
ಮಾಡಲಾಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ರಂಗಭೂಮಿ
ಬಹಳ ಎಚ್ಚರದಿಂದ ಸೂಕ್ಷ್ಮವಾಗಿ ಆಕೆಯನ್ನು
ಪ್ರತಿನಿಧಿಸಬೇಕು ಎಂದು ಮಾನಸ ಸಮೂಹ ಸಂಸ್ಥೆಗಳ
ನಿರ್ದೇಶಕಿ ಡಾ.ರಜನಿ ಪೈ ಅವರು ತಿಳಿಸಿದರು.
ಅವರು ಶನಿವಾರ ಶಿವಮೊಗ್ಗ ರಂಗಾಯಣ ಆಯೋಜಿಸಿರುವ
ಜೀವನ್ಮುಖಿ ಮಹಿಳಾ ರಂಗೋತ್ಸವಕ್ಕೆ ಚಾಲನೆ ನೀಡಿ
ಮಾತನಾಡಿದರು.
ನಾಟಕದಂತಹ ಪ್ರಬಲ ಮಾಧ್ಯಮದ ಮೂಲಕ ಸ್ತ್ರೀ ಕೇಂದ್ರಿತ
ಅನುಭವಗಳನ್ನು ಶೋಧಿಸುವ ಅಗತ್ಯವಿದೆ. ರಂಗದ
ಮೇಲೆ ಮಹಿಳೆಯರು ಇರುವುದಕ್ಕಿಂತ, ರಂಗದ ಮೇಲೆ
ಇಂದಿನ ಸ್ತ್ರೀ ಸಮುದಾಯದ ವಾಸ್ತವ ಸ್ಥಿತಿತಗಳು
ಪ್ರಧಾನವಾಗಬೇಕು. ಮಹಿಳೆಯನ್ನು ಸಮಗ್ರವಾಗಿ
ಮತ್ತು ನೈಜವಾಗಿ ತೋರಿಸದಿದ್ದರೆ ಅಂತಹ ಸಂಸ್ಕøತಿಯನ್ನು
ಅರೋಗ್ಯಪೂರ್ಣ ಎನ್ನಲು ಸಾಧ್ಯವಿಲ್ಲ ಎಂದರು.
ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿದ್ದರೂ,
ಅವರನ್ನು ಗಮನಿಸಲಾಗುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ
ಅವರ ಇರುವಿಕೆಯನ್ನು ಕಡೆಗಣಿಸಲಾಗುತ್ತಿದೆ. ಇದರಿಂದ
ಮಹಿಳೆಗೆ ಸಿಗಬೇಕಾದ ಮಹತ್ವ ಸಿಗದೆ ಹೋಗುವ
ಅಪಾಯವಿದೆ. ಮಹಿಳೆಯರ ಬಹುಮುಖ ಪ್ರತಿಭೆ ಹಾಗೂ
ಸಾಧನೆಗಳನ್ನು ಸಾಧ್ಯವಾದ ರೀತಿಯಲ್ಲಿ ಆಚರಿಸುವ ಅಗತ್ಯವಿದೆ
ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಹಾನಗರ ಪಾಲಿಕೆ
ಮೇಯರ್ ಸುವರ್ಣಾ ಶಂಕರ್ ಅವರು ಮಾತನಾಡಿ, ಹಿಂದಿನ

ಕಾಲದಲ್ಲಿ ನಾಟಕಗಳೇ ಮನೋರಂಜನೆಯ ಕೇಂದ್ರವಾಗಿತ್ತು.
ಇಂದಿಗೂ ನಾಟಕ ಪ್ರಬಲ ಮಾಧ್ಯಮವಾಗಿದ್ದು, ಸಮಾಜಕ್ಕೆ
ಉತ್ತಮ ಸಂದೇಶಗಳನ್ನು ತಲುಪಿಸಲು ಪರಿಣಾಮಕಾರಿಯಾಗಿದೆ
ಎಂದರು.
ರಂಗ ಸಮಾಜದ ಸದಸ್ಯ ಹಾಲಸ್ವಾಮಿ ಅವರು ಆಶಯ
ನುಡಿಗಳನ್ನು ಆಡಿದರು. ಶಿವಮೊಗ್ಗ ರಂಗಾಯಣ ನಿರ್ದೇಶಕ
ಸಂದೇಶ ಜವಳಿ ಅವರು ಮಾತನಾಡಿ, ಮಹಿಳಾ ದಿನಾಚರಣೆ ಅಂಗವಾಗಿ
ನಾಟಕೋತ್ಸವ ಆಯೋಜಿಸಲಾಗಿದೆ. ನಾಟಕೋತ್ಸವದಲ್ಲಿ ಸ್ತ್ರೀ
ಸಂವೇದನೆಯ ನಾಟಕಗಳು, ಏಕವ್ಯಕ್ತಿ ಪ್ರದರ್ಶನ, ವಿಚಾರ
ಗೋಷ್ಟಿ, ಕಿರುಚಿತ್ರ ಪ್ರದರ್ಶನ, ರಂಗಗೀತೆಗಳ
ಕಾರ್ಯಕ್ರಮ ನಡೆಯಲಿದೆ ಎಂದರು.
ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಅವರು
ಸ್ವಾಗತಿಸಿದರು.

Leave a Reply

Your email address will not be published. Required fields are marked *