ದಾವಣಗೆರೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಬೆ.ವಿ.ಕಂ.ನ
ಸಿಬ್ಬಂದಿಯೆಂದು ಹೇಳಿಕೊಂಡು ವಿದ್ಯುತ್ ಬಿಲ್ ಪಾವತಿಸುವುದಾಗಿ
ಹಣ ಕೇಳಿ ಪಡೆದು ಬಿಲ್ ಪಾವತಿಸದೇ ವಂಚನೆ ಮಾಡಿರುವ
ಕೆಲವು ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿರುತ್ತವೆ. ಈ
ನಿಟ್ಟಿನಲ್ಲಿ ವಿದ್ಯುತ್ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು
ಕೆಳಕಂಡ ಕೆಲವು ಸೂಚನೆಗಳನ್ನು ಪಾಲಿಸಲು
ಕೋರಲಾಗಿದೆ.
ವಿದ್ಯುತ್ ಬಿಲ್ಲನ್ನು ಬೆ.ವಿ.ಕಂ ನ ಅಧಿಕೃತ
ಕೌಂಟರ್‍ಗಳಲ್ಲಿಯೇ ಪಾವತಿಸಬೇಕು. ಬೆ.ವಿ.ಕಂ. ನಿಂದ ಕೆಲಸ
ನಿರ್ವಹಣೆಗಾಗಿ ಸಿಬ್ಬಂದಿ ತಮ್ಮಲ್ಲಿಗೆ ಬಂದಾಗ ಗುರುತಿನ
ಚೀಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
ವಿದ್ಯುತ್ ಬಿಲ್ಲನ್ನು ಆನ್‍ಲೈನ್‍ನಲ್ಲಿ ಪಾವತಿಸುವುದರ ಮೂಲಕ
ಈ ತರಹದ ವಂಚನೆಗಳನ್ನು ತಪ್ಪಿಸಬಹುದು. ಪೇ-ಟಿಎಮ್,
ಗೂಗಲ್ ಪೇ ಹಾಗೂ ಬೆವಿಕಂ.ನ “ಬೆಸ್ಕಾಂ ಮಿತ್ರ” ಆ್ಯಪ್ ನ
ಮೂಲಕ ವಿದ್ಯುತ್ ಬಿಲ್ ಪಾವತಿಸುವುದು ಕ್ಷೇಮಕರ.
ಯಾರಾದರೂ ಅನುಮಾನಾಸ್ಪದವಾಗಿ ವರ್ತಸಿದಲ್ಲಿ ಕೂಡಲೇ
ಬೆ.ವಿ.ಕಂ ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 08912-250210
ಹಾಗೂ ಮೊಬೈಲ್ ನಂ. 9483549210 ಗೆ ತಿಳಿಸಬೇಕೆಂದು ಬೆಸ್ಕಾಂ
ನಗರ ಉಪ ವಿಭಾಗ-1 ಸಹಾಯಕ ಕಾರ್ಯನಿರ್ವಾಹಕ
ಇಂಜಿನಿಯರ್ ರಾಮಚಂದ್ರಪ್ಪ ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *