ರಾಜ್ಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರದ ಕುರಿತು ನನ್ನ ಅನಿಸಿಕೆ…
ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ರೈತರ ಮಕ್ಕಳಿಗೆ ಶೇಕಡಾ 50 ರಷ್ಟು ಮೀಸಲಾತಿ ಹೆಚ್ಚಿಸಿರುವುದು ಸ್ವಾಗತರ್ಹ. ಸಾವಯವ ಇಂಗಾಲ ಮತ್ತು ಸಾವಯವ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ನೀಡಿರುವುದು ಮಣ್ಣಿನ ಫಲವತ್ತತೆ ಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.ಕಿರು ಆಹಾರ ಸಂಸ್ಕರಣೆ ಉದ್ದಿಮೆ, ತೋಟಗಾರಿಕೆ ತಂತ್ರಜ್ಞಾನ ಪಾರ್ಕ್, ನವೋಧ್ಯಮಗಳ ಆಹಾರ ಪಾರ್ಕ್,ರೇಷ್ಮೆ ಭವನ ನಿರ್ಮಾಣ, ಕೃಷಿ ಯಾಂತ್ರಿಕರಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಹಾಗೆಯೇ ದಾವಣಗೆರೆಗೆ ಕೃಷಿ ಮತ್ತು ತೋಟಗಾರಿಕೆ ಕಾಲೇಜು ನೀಡದಿರುವುದು ಬೇಸರದ ಸಂಗತಿ.
ಬಸವನಗೌಡ ಎಂ. ಜಿ
ತೋಟಗಾರಿಕೆ ವಿಜ್ಞಾನಿಗಳು
ಐ ಸಿ ಎ ಆರ್ -ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ