ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಹೋರಿ ದೀಪಾವಳಿಯ ಹಬ್ಬದ ಸಂದರ್ಭಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಗೆದ್ದು ಹಲವು ಬಾರಿ ಸ್ಪರ್ಧೆಯಲ್ಲಿ ಬಹುಮಾನವನ್ನು ಗೆದ್ದುಕೊಂಡು ಮಾಲೀಕರಾದ ಪ್ರಶಾಂತ ರವರಿಗೆ ಬಹುಮಾನವನ್ನು ತಂದುಕೊಡುತ್ತಿತ್ತು.
ಡಾಕ್ಟರ್ ಪ್ರಶಾಂತ ರವರು ಹೋರಿಯನ್ನು ತಮ್ಮ ಮಗನಂತೆ ಮನೆಯಲ್ಲಿ
ನೋಡಿಕೊಳ್ಳುತ್ತಿದ್ದರು.ಈ
ಹೋರಿ ಅಪಾರ ಅಭಿಮಾನ ಬಳಗ ಹೊಂದಿತ್ತು .ಶಿಕಾರಿಪುರ ತಾಲೂಕಿನ ಕಣ್ಮಣಿ ಈಸೂರು ದಂಗೆ ಎಂದು ಹೆಸರುವಾಸಿಯಾದ 18ವರ್ಷದ ಹೋರಿ ಗುರುವಾರ ಸಂಜೆ ಮೃತಪಟ್ಟಿತು
ದಂತವೈದ್ಯ ರಾದ ಡಾಕ್ಟರ್ ಪ್ರಶಾಂತ್ ರವರು ಎಬಿಸಿನ್ಯೂಸ್ ಆನ್ಲೈನ್ ಚಾನೆಲ್ ರವರಿಗೆ ಮಾತನಾಡಿ ಈ ಹೊರಿ ತಮಿಳುನಾಡಿನ ಮೂಲದ್ದು ಇದನ್ನು ಹುಬ್ಬಳ್ಳಿ ಮೂಲದವರು ಶಿಕಾರಿಪುರದಲ್ಲಿ ತಂದು ನನಗೆ ತಂದು ಕೊಟ್ಟಿದ್ದರು.
ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಎಲ್ಲೇ ನಡೆದರೂ ಅಲ್ಲಿ ಈಸೂರು ದಂಗೆ
ಹೋರಿ ಇರುತ್ತಿತ್ತು ಹೋರಿ ಸ್ಪರ್ಧೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಂಚೆ ತನ್ನ ಕೊರಳಿಗೆ 10 ಕೆಜಿ ಎಷ್ಟು ಕೊಬ್ಬರಿ ಮತ್ತು ತನ್ನ ದೇಹಕ್ಕೆ ತ್ರಿವರ್ಣಧ್ವಜ ಬಾವುಟವನ್ನು ಅಲಂಕರಿಸಿಕೊಂಡು ಸ್ಪರ್ಧೆಗಿಳಿದರೆ ಹೋರಿಯನ್ನು ಮುಟ್ಟುವ ಪೈಲ್ಪಾನರಿಗೆ ಸಾಧ್ಯವಾಗಿರಲಿಲ್ಲ.
ಎಂದು ಮಾಲೀಕರು ಕಣ್ಣೀರು
ಹಾಕುತ್ತಾ ನೋವಿನಿಂದ ಹೇಳಿದರು. ಹೋರಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಗಳಿಸಿದ ಬಹುಮಾನಗಳು ಈ ರೀತಿ ಇವೆ
ಬೈಕುಗಳು 5 ಚಿನ್ನ 50 ಗ್ರಾಂ ಫ್ರಿಡ್ಜು 7 ಣv8
ಬೀರು 25 ಇನ್ನು ಮುಂತಾದ ಬಹುಮಾನಗಳನ್ನು ಗೆದ್ದು ಈಸೂರು ಗ್ರಾಮಕ್ಕೆ ತಂದುಕೊಟ್ಟಿತ್ತು. ಈಸೂರು ದಂಗೆ ಎಂಬವರು ಸಾವಿನ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿದುಕೊಂಡು ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಹಾವೇರಿ ಇನ್ನೂ ಹಲವಾರು ಜಿಲ್ಲೆಗಳಿಂದ ಬಂದು ಶುಕ್ರವಾರ ಈಸೂರು ಗ್ರಾಮದ ಪ್ರತಿಯೊಂದು ಮನೆಯ ಮಹಿಳೆಯರು ತಮ್ಮ ಮನೆಯ ಮುಂದೆ ರಂಗೋಲಿಯನ್ನು ಹಾಕಿ ಹೂವಿನಿಂದ ಅಲಂಕರಿಸಿ ಊರಿನ ಮತ್ತು ಬಂದ ಜನರು ಬೇರೆ ಬೇರೆ ಊರುಗಳಿಂದ ಬಂದ ಸಾವಿರಾರು ಜನರು ಟ್ರ್ಯಾಕ್ಟರ್ ನಲ್ಲಿ ಹೋರಿಯನ್ನು ಶೃಂಗಾರ ಮಾಡಿಕೊಂಡು ಪುಷ್ಪಾರ್ಚನೆ ಮಾಡುವುದರ
ಮೂಲಕ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಈ ಹೋರಿಯ ಮಾಲೀಕರ ತೋಟದ ಮನೆಯಲ್ಲಿ ಸಾವಿರಾರು ಜನರು ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಚಕ್ರವಿಲ್ಲದ ತ್ರಿವರ್ಣ ಧ್ವಜವನ್ನು ಮೃತಪಟ್ಟ ಹೋರಿಗೆ ಹಾಕಿ
ಅಂತಿಮ ನಮನ ಸಲ್ಲಿಸಿದರು.