ದಾವಣಗೆರೆ,ಮಾ.9:
ಭಾರೀ ವಾಹನ ಚಾಲನಾ ಅನುಜ್ಞಾ ಪತ್ರಗಳನ್ನು
ನವೀಕರಿಸುವ ಸಂದರ್ಭದಲ್ಲಿ ಒಂದು ದಿನದ ಪುನಶ್ಚೇತನ
ತರಬೇತಿ ಪ್ರಮಾಣ ಪತ್ರ ಸಲ್ಲಿಸುವುದು
ಕಡ್ಡಾಯವಾಗಿದ್ದು, ನವೀಕರಣ ಸಂದರ್ಭದಲ್ಲಿ ಪ್ರಮಾಣ
ಪತ್ರ ಹಾಜರುಪಡಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು
ಸ್ವೀಕರಿಸಲಾಗುವುದಿಲ್ಲ.
ಬೆಂಗಳೂರಿನ ಸಿಂಗನಾಯ್ಕನಹಳ್ಳಿ, ಧಾರವಾಡದ
ಗಾಮನಗಟ್ಟಿ ಹಾಗೂ ಮಂಗಳೂರಿನ ಕೈಗಾರಿಕಾ
ಪ್ರದೇಶದಲ್ಲಿ ಭಾರೀ ವಾಹನ ಚಾಲಕರ ತರಬೇತಿ
ಶಾಲೆಗಳಿದ್ದು(ಹೆವಿ ವೆಹಿಕಲ್ಸ್ ಡ್ರೈವರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್)
ಈ ತರಬೇತಿ ಶಾಲೆಗಳಲ್ಲಿ ಒಂದು ದಿನದ ಪುನಃಶ್ಚೇತನ
ತರಬೇತಿ ಪಡೆದು ಪ್ರಮಾಣ ಪತ್ರ ಸ್ವೀಕರಿಸಬೇಕು.
ನವೀಕರಣ ಸಂದರ್ಭದಲ್ಲಿ ಈ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ
ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುವುದು ಎಂದು
ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ