ಸಿಬ್ಬಂದಿಗಳಿಗೆ ತರಬೇತಿ
ದಾವಣಗೆರೆ,ಮಾ.10
ನಗರದ ಜಿಲ್ಲಾ ಕಮಾಂಡೆಂಟ್ ಕಛೇರಿ, ಗೃಹ ರಕ್ಷಕ
ದಳ ಆವರಣ, ದಾವಣಗೆರೆ ಇವರ ವತಿಯಿಂದ ಗೃಹ ರಕ್ಷಕ
ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತಂಬಾಕು ಹಾಗೂ
ಅದರಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮತ್ತು
ಕೋಟ್ಪಾ ಕಾಯ್ದೆಯ-2003 ರ ಪರಿಣಾಮಕಾರಿ ಅನುಷ್ಠಾನ
ಕುರಿತು ಇತ್ತೀಚೆಗೆ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗೃಹ ರಕ್ಷಕ ದಳ, ಜಿಲ್ಲಾ
ಕಮಾಂಡೆಂಟ್ ಡಾ. ಬಿ.ಹೆಚ್.ವೀರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ,
ಮಾನವ ದೇಹದ ಪ್ರತಿ ಭಾಗಕ್ಕೂ ಕಾಯಿಲೆಯನ್ನು ತರುವ
ಏಕೈಕ ಗ್ರಾಹಕರ ಪದಾರ್ಥ ಎಂದರೆ ತಂಬಾಕು
ಆಗಿರುವುದರಿಂದ, ಸಾರ್ವಜನಿಕರಲ್ಲಿ ಅದರ ದುಷ್ಪರಿಣಾಮದ
ಬಗೆಗೆ ಅರಿವು ಇರಬೇಕು ಹಾಗೂ ಕೋಟ್ಪಾ-2003 ರ ಕಾಯ್ದೆ
ಪರಿಣಾಮಕಾರಿ ಅನುಷ್ಠಾನ ಮಾಡುವುದು ನಮ್ಮೆಲ್ಲರ ಹೊಣೆ
ಎಂದು ತಿಳಿಸಿದರು. ಸಭೆಯಲ್ಲಿ ಸುಮಾರು 70 ಗೃಹರಕ್ಷಕ
ದಳದ ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ತರಬೇತಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ
ಜಿಲ್ಲಾ ಸಲಹೆಗಾರಾದ ಸತೀಶ್ ಕಲಹಾಳ್ ತಂಬಾಕು ಹಾಗೂ ಅದರಿಂದ
ಉಂಟಾಗುವ ದುಷ್ಪರಿಣಾಮಗಳು ಮತ್ತು ಕೋಟ್ಪಾ
ಕಾಯ್ದೆಯ-2003 ರ ಪರಿಣಾಮಕಾರಿ ಅನುಷ್ಠಾನ ಕುರಿತು
ತರಬೇತಿ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ
ಸಮಾಜ ಕಾರ್ಯಕರ್ತರಾದ ದೇವರಾಜ್.ಕೆ.ಪಿ ಹಾಗೂ ಶ್ರೀಮತಿ
ಸರಸ್ವತಿ, ಸಿಬ್ಬಂದಿ ಅಧಿಕಾರಿ, ಗೃಹ ರಕ್ಷಕ ದಳ ಸೇರಿದಂತೆ
ಇನ್ನಿತರರು ಭಾಗವಹಿಸಿದ್ದರು. ಗೃಹ ರಕ್ಷಕ ದಳ
ಘಟಕದ ಅಧಿಕಾರಿ ಕೆ.ಎಸ್.ಅಮರೇಶ ಕಾರ್ಯಕ್ರಮವನ್ನು
ನಿರೂಪಿಸಿ ಸ್ವಾಗತಿಸಿದರು.