ಚುರುಕು : ಡಿಸಿ
ದಾವಣಗೆರೆ,ಮಾ.10
ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜಿಲ್ಲೆಯಲ್ಲಿ ಮಾರ್ಚ್ 1
ರಿಂದ ಆರಂಭವಾಗಿದ್ದು, ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೆ
ಇರುವುದರಿಂದ ವಿಶೇಷ ಅಭಿಯಾನದ ಮೂಲಕ ಜಾಗೃತಿ
ಮೂಡಿಸಿ ಲಸಿಕಾಕರಣವನ್ನು ಹೆಚ್ಚಿಸಲಾಗುವುದು ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ
ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ
ಜಿಲ್ಲೆಯಲ್ಲಿ ಇಲ್ಲಿಯವರೆಗೆ 1.60 ಲಕ್ಷ ಜನರಿಗೆ ಲಸಿಕೆ
ನೀಡಬೇಕಾಗಿತು. 1,315 ಜನರಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಈ ಬಗ್ಗೆ
ಜನರಿಗೆ ಜಾಗೃತಿ ಮೂಡಿಸಿ ಹೆಚ್ಚು ಹೆಚ್ಚು ಜನ ಲಸಿಕೆ ಪಡೆಯಲು
ಪ್ರೋತ್ಸಾಹಿಸಲಾಗುವುದು ಎಂದರು.
ಐ.ಇ.ಸಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ
ಗ್ರಾಮಂತರ ಪ್ರದೇಶ ಹಾಗೂ ದಾವಣಗೆರೆ ಹಳೆ
ಭಾಗಗಳಲ್ಲಿ ಟಾಂಟಾಂ, ಡಂಗುರ ಹಾಗೂ ಬೀದಿನಾಟಕಗಳ
ಮೂಲಕ ಸ್ಥಳೀಯ ಸಂಸ್ಥೆ ಹಾಗೂ ಆರೋಗ್ಯ ಇಲಾಖೆ
ಕಾರ್ಯಕರ್ತರನ್ನು ಬಳಸಿಕೊಂಡು ಗುರಿ ತಲುಪಲು
ಪ್ರಯತ್ನಿಸಲಾಗುವುದು.
ಎಲ್ಲಾ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಮಹಿಳಾ
ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೋಮವಾರದಿಂದ
ಶನಿವಾರದವರೆಗೆ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ
ಕೇಂದ್ರಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ
ಮತ್ತು ಶನಿವಾರದಂದು ಉಚಿತವಾಗಿ ಅರ್ಹ ಫಲಾನುಭವಿಗಳಾದ
45-59 ವರ್ಷದ ಇತರೆ ಖಾಯಿಲೆಗಳಿಂದ ಬಳಲುತ್ತಿರುವವರಿಗೆ
ಹಾಗೂ 60 ವರ್ಷ ಮೇಲ್ಪಟ್ಟಿರುವವರು, ಆರೋಗ್ಯ ಮತ್ತು
ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್-19 ಲಸಿಕೆಯನ್ನು
ನೀಡಲಾಗುವುದು ಎಂದರು.
ಎಬಿಎಆರ್‍ಕೆ ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಾದ
ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳಾದ ಜೆಜೆಎಂಸಿ
ವೈದ್ಯಕೀಯ ವಿದ್ಯಾಲಯ, ಎಸ್‍ಎಸ್‍ಐಎಂಎಸ್ ಆಸ್ಪತ್ರೆ, ಸಿಟಿ ಸೆಂಟ್ರಲ್
ಹಾಗೂ ಆರೈಕೆ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ ರೂ. 250
ನ್ನು ಪಾವತಿಸಿ ಮೊದಲನೇ ಮತ್ತು ಎರಡನೇ ಡೋಸ್
ಲಸಿಕೆಯನ್ನು ಪಡೆಯಬೇಕು. ಹಾಗೂ ಸಾರ್ವಜನಿಕರು ಈ
ಲಸಿಕಾಕರಣಕ್ಕೆ ಸಹಕರಿಸಿ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು
ಪಡೆದು ಕೋವಿಡ್-19 ನಿರ್ಮೂಲನೆಗೆ ಕೈಜೋಡಿಸಬೇಕು
ಎಂದು ತಿಳಿಸಿದರು.
ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಜಿಲ್ಲೆಗೆ
2800 ಪ್ರತಿದಿನ ಕೋವಿಡ್ ಟೆಸ್ಟ್ ಗುರಿ ಇದ್ದು ಅದರಲ್ಲಿ 64
ಪ್ರತಿಶತ ಸಾಧನೆ ಮಾಡಲಾಗಿದೆ. ನಿನ್ನೆ ಶೇ. 71 ರಷ್ಟಾಗಿದೆ.
ಅದನ್ನು ಮತ್ತಷ್ಟು ಹೆಚ್ಚು ಮಾಡಲು
ಪ್ರಯತ್ನಿಸಲಾಗುವುದು. ಜನ ನಿಬಿಡ ಪ್ರದೇಶಗಳಲ್ಲಿ
ಟೆಸ್ಟ್‍ಗಳನ್ನು ಹೆಚ್ಚು ಮಾಡುವುದರೊಂದಿಗೆ ಅಗತ್ಯ
ಮಾನವ ಸಂಪನ್ಮೂಲವನ್ನು ಹೆಚ್ಚಿಸಲಾಗುವುದು.
ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ
ನಗರ ಪಿಹೆಚ್‍ಸಿ ಗಳಲ್ಲಿ ನೇರವಾಗಿ ಲಸಿಕೆ ನೀಡುವ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಲಸಿಕೆ
ಪಡೆಯಲು ಆಧಾರ್ ಕಾರ್ಡ್ ಇದ್ದರೆ ಸಾಕು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಹೆಚ್‍ಒ ನಾಗರಾಜ್, ಡಾ.ರಾಘವನ್,
ಡಾ.ಮೀನಾಕ್ಷಿ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ,
ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ ಸೇರಿದಂತೆ
ಮತ್ತಿತರರು ಇದ್ದರು.