ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವವನ್ನು ವಹಿಸಿದ ದಿಡಗೂರು ರುದ್ರೇಶ್ ಮತ್ತು ರಾಜ್ಯ ಸಂಚಾಲಕರಾದ ಗುರುಮೂರ್ತಿ ಅವರು ಹಾಗೂ ದಲಿತ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸೇರಿ ಇಂದು ಟಿಬಿ ಸರ್ಕಲ್ ವೃತ್ತದಿಂದ ಪಾದಯಾತ್ರೆಯ ಮೂಲಕ ಪ್ರತಿಭಟನೆಯ ರ್ಯಾಲಿಯನ್ನು ಮಾಡಲಾಯಿತು .ಈ ಪ್ರತಿಭಟನೆಯ ಉದ್ದೇಶಗಳು ಈ ರೀತಿ ಇದೆ
ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಫೀ ಮತ್ತು ವಿರ್ವಾಧಿವೇತನ ಬಿಡುಗಡೆ ಮಾಡಬೇಕು ದಲಿತ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ನಿಗದಿಪಡಿಸಿದ ಮೊತ್ತವನ್ನು ರದ್ದುಪಡಿಸಿ 3
ಲಕ್ಷ 5ಲಕ್ಷದವರೆಗೆ ಹೆಚ್ಚಿಸಿಬೇಕು ಎಸಿ ಕಛೇರಿಯನ್ನು ಹೊನ್ನಾಳಿಗೆ ಸ್ವಳಾಂತರಿಸಬೇಕು. ಡಾ ಬಿ ಆರ್
ಅಂಬೇಡ್ಕರ್ ಸರ್ಕಲ್. ನಾಮಕರಣ ಮಾಡಲು ಒತ್ತಾಯಿಸಿ
ವಿಷಯಕ್ಕೆ ಸಂಬಂಧಿಸಿದಂತೆ ರಾಜಾರಾಂತ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳು ಎಮ್ .ಬಿ.ಬಿ ಎಸ್. ಬಿ. ಬಿ.ಎಸ್, ಬಿ. ಎ,ಎಂ,ಎಸ್ ವಿದ್ಯಾಭ್ಯಾಸ ಮಾಡುತಿದ್ದು ಸರ್ಕಾರಿ ಕೋಟದಡಿ ಖಾಸಗಿ ಕಾಲೇಜಿಗೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫೀ ಭರ್ತಿಮಾಡಿರುವದಿಲ್ಲ. ಆ ಕಾರಣಕ್ಕೆ ಸಂಬಂದಿಸಿದ ಕಾಲೇಜುಗಳನ್ನು ಪರೀಕ್ಷೆಗೆ ಅವಕಾಶ ಕೊಟ್ಟಿರುವುದಿಲ್ಲ.ಸರಕಾರ ಕೂಡಲೇ ಸಂಬಂಧಿಸಿದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಮಾಡಬೇಕು ಸುಮಾರು 30 ವರ್ಷಗಳಿಂದ ದಲಿತ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು 3 ಲಕ್ಷದಿಂದ 5 ಲಕ್ಷದವರೆಗೆ ಸಹಾಯ ಮಂಜೂರು ಮಾಡಿದ್ದು ಈಗಿನ ಸರಕಾರ ರದ್ದು ಪಡಿಸಿ 1ಲಕ್ಷಕ್ಕೆ ಮಿತಿಗೊಳಿಸಿದೆ. ಈ ಮೊತ್ತವನ್ನು ಹೆಚ್ಚಿಸಬೇಕು.
ಪಿಟಿಸಿಎಲ್ ಕಾಯ್ದೆಯಲ್ಲಿ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಮೂಲದಾಖಲೆಗಳಲ್ಲಿ ದರಖಾಸ್ತು ಎಂದು ಗೊತ್ತಿದ್ದರು ವಿನಾದರೆಣಂದು ಕಾರಣ ನೀಡಿ ದಲಿತರ ಕೇಸುಗಳನ್ನು ವಜಾಮಾಡಿ ಎದುರುದಾರರಿಗೆ ಅನುಕೂಲ ಮಾಡಿರುವ ಸಾಕಷ್ಟು ಉದಾಹರಣೆಗೆಳು ಇವೆ. (ಎಸಿ&ಡಿಸಿ) ನ್ಯಾಯಾಲಯಗಳಿಗೆ ಸ್ಪಷ್ಟವಾದ ನಿರ್ದೇಶನ ನೀಡಬೇಕು ದರಕಾಸ್ತು ಮಂಜೂರಾದ ಜಮೀನುಗಳಿಗೆ ಪಿಟಿಸಿಎಲ್ ಎಂದು ತೀರ್ಮಾನಿಸಬೇಕು.
94 ಸಿ ಮತ್ತು ಬಗರ್ ಹುಕುಂ ಜಮೀನುಗಳಗೆ ಸಮಿತಿಯ ಸಭೆಯ ಕರೆದು ಶೀಘ್ರದಲ್ಲೇ ಹಕ್ಕು ಪತ್ರ ವಿತರಿಸಬೇಕು ಪಿಟಿಸಿಎಲ್ ಕಾಯ್ದೆಯಲ್ಲಿ ನ್ಯಾಯ ಸಿಗುವಂತಾಗಬೇಕು. ದಲಿತ ಸಂಘರ್ಷ ಸಮಿತಿಯು ಭ್ರಷ್ಟಾಚಾರದ ಸೂಕ್ತ ತನಿಖೆಗೆ ವತ್ತಾಯಿಸಿದ್ದು, ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ತಕ್ಷಣ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕೂಲಂಬಿ ಗ್ರಾಮದಲ್ಲಿ 100 ದಲಿತ ಮನೆಗಳಿದ್ದು ಅವರು ವಾಸಮಾಡುವುದು ಒಂದು ಗೂಡಿನಂತಿದೆ. ಮತ್ತು ದಲಿತರ ಕಛೇರಿಯಲ್ಲಿ ಸೊಳ್ಳೆ ಮತ್ತು ಅನಾರೋಗ್ಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದಕ್ಕೆ ಜಮೀನು ಖರೀದಿಸಿ ನಿವೇಶನವನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ದಿನಾಂಕ 10-3-2021ರಂದು ಸಮಿತಿಯು ಮನವಿ ಸಲ್ಲಿಸುತ್ತದೆ.
ಬೇಡಿಕೆಗಳು
1ಹೊನ್ನಾಳಿ ನಗರದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಸರ್ಕಲ್ ಎಂದು ನಾಮಕರಣ ಮಾಡಲು ಮಾರ್ಚ್ 30ರವರೆಗೆ ತೀರ್ಮಾನಿಸಬೇಕು
2)ದಿನಾಂಕ 13 -11 -2020 ಸಬ್ ರಿಜಿಸ್ಟ್ರಾರ್ ಕಚೇರಿಯ ಭ್ರಷ್ಟಾಚಾರ ಮತ್ತು ದಿನಾಂಕ 20- 1- 2021 ರಂದು ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಇವರ ಭ್ರಷ್ಟಾಚಾರ ಬಗ್ಗೆ ಪ್ರತಿಭಟನಾ ಧರಣಿ ಮನವಿಕೊಟ್ಟಿದ್ದು ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ವರದಿ.
3)ದಲಿತರ ಸ್ವಯಂ ಉದ್ಯೋಗ ಕೈಗೊಳ್ಳಲು ರದ್ದುಪಡಿಸಿರುವ ಸಹಾಯಧನ ಮೊತ್ತವನ್ನು 5 ಲಕ್ಷದವರೆಗೆ ಹೆಚ್ಚಿಸಬೇಕು ಹಿಂದಿನಂತೆ
4)ಶೀಘ್ರದಲ್ಲೇ ಉಪವಿಭಾಗ ಕಚೇರಿ ಏಸಿ ಕಚೇರಿ ಕಾರ್ಯಾರಂಭ ಮಾಡಬೇಕು
5)ಬಗರ್ ಹುಕುಂ ಸಾಗುವಳಿ ದಾರರಿಗೆ ಶೀಘ್ರದಲ್ಲೇ ಹಕ್ಕು ಪತ್ರ ವಿತರಿಸಬೇಕು
6)ಎಂಬಿಬಿಎಸ್, ಬಿಎ,ಎಂಎಸ್, ಬಿ.ಇ ವಿದ್ಯಾರ್ಥಿಗಳಿಗೆ ಕಾಲೇಜ್ ಫೀಸ್ ಮತ್ತು ವಿದ್ಯಾರ್ಥಿವೇತನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಬೇಕು
7)ತಾಲೂಕಿನಲ್ಲಿ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆ ಮಾಡಿಸಿ ಗಡಿ ಗುರುತಿಸಿ ಸಾಗುವಳಿದಾರರಿಗೆ ಕಂದಾಯ ಭೂಮಿಯನ್ನು ಬಿಟ್ಟುಕೊಡಬೇಕು.
ಕರ್ನಾಟಕ ದಲಿತ ಸಂಘರ್ಷ ಸಂಘರ್ಷ ಸಮಿತಿಯ ಹೋರಾಟಗಾರರು ಮಾನ್ಯ ದಂಡಾಧಿಕಾರಿಗಳಾದ
ಬಸವರಾಜ್
ಬಸವರಾಜ್ ಕೊಟ್ಟೂರು ರವರಿಗೆ ಮನವಿ ಪತ್ರವನ್ನು ಕೊಟ್ಟು ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ನವರಿಗೆ ಈ ಮನವಿ ಪತ್ರವನ್ನು ತಲುಪಿಸುವಂತೆ ಒತ್ತಾಯ ಮಾಡಿದರು. ಈ ಪ್ರತಿಭಟನೆಯಲ್ಲಿ ಭಾಗಿಯಾದ ಮುಖಂಡರುಗಳು ರಾಜ್ಯ ಸಂಚಾಲಕರಾದ ಗುರುಮೂರ್ತಿ ಶಿವಮೊಗ್ಗ ಅವರು ದಿಡಗೂ ರುದ್ರೇಶ್ ಕುರುವ ಮಂಜುನಾಥ್
ಪರಮೇಶಪ್ಪ ಬೆನಕನಹಳ್ಳಿ ಜಿಲ್ಲಾ ಸಂಚಾಲಕರಾದ ಕುಂದುವಾಡ ಮಂಜುನಾಥ್
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್ ನಾಗಪ್ಪ ರಾಜಪ್ಪ ಇನ್ನು ಮುಂತಾದ ಮುಖಂಡರುಗಳು ಭಾಗಿಯಾಗಿದ್ದರು.