ತುರುವೇಕೆರೆ: ಹಿಂದುಳಿದ ವರ್ಗಕ್ಕೆ ಸೇರಿದ 102 ಸಮುದಾಯಗಳಿಗೂ ನಿಗಮ ಸ್ಥಾಪಿಸಿ ಪ್ರತಿ ನಿಗಮಕ್ಕೂ 500ಕೋಟಿ ಅನುದಾನ ಒದಗಿಸಬೇಕೆಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಸರ್ಕಾರ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಗ್ರಹಿಸಿದ್ದಾರೆ.ಎ ಬಿ ಸಿ ನ್ಯೂಸ್ ಆನ್ ಲೈನ್ ಚಾನಲ್ ರವರೊಂದಿಗೆ ಪತ್ರಿಕೆಯೊಂದಿಗೆ ಮಾತನಾಡಿದ
ಆವರು, ರಾಜ್ಯದ ಮುಂದುವರೆದ ಪ್ರಮುಖ ಜನಾಂಗಗಳಾದ ಒಕ್ಕಲಿಗರು ಹಾಗೂ ವೀರಶೈವ ಲಿಂಗಾಯಿತ ಸಮುದಾಯಗಳಿಗೆ ನಿಗಮ ಸ್ಥಾಪಿಸಿ ತಲಾ 500 ಕೋಟಿ ರೂ.ಗಳ ಅನುದಾನ ಒದಗಿಸಿರುವುದು ಸಂತೋಷದ ವಿಷಯವಾಗಿದೆ, ಹಿಂದುಳಿದ ವರ್ಗಕ್ಕೆ 102 ಸಮುದಾಯಗಳು ಸೇರಲಿದ್ದು ಯಾವುದೇ ಸರ್ಕಾರಗಳು ಈ ಸಮುದಾಯಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿಲ್ಲ ಸರ್ವತೋಮುಖ ಅಭಿವೃದ್ಧಿಗೆ ಹಣವನ್ನು ಒದಗಿಸಿಲ್ಲ. ಈಗ ಒಕ್ಕಲಿಗ ಹಾಗೂ ಲಿಂಗಾಯತ ಅಭಿವೃದ್ಧಿ ಸ್ಥಾಪನೆಯ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಸಮುದಾರವನ್ನು ಸಮಾನವಾಗಿ ಕಾಣುವುದಾಗಿ ಅಭಿವೃದ್ಧಿ ಮಾಡುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದಾರೆ.
ಅದರಂತೆ ಹಿಂದುಳಿದ ವರ್ಗಕ್ಕೆ ಸೇರಿದ ಎಲ್ಲಾ 102 ಸಮುದಾಯಗಳಿಗೆ ನಿಗಮ ಸ್ಥಾಪಿಸಿ ಪ್ರತಿ ನಿಗಮಕ್ಕೂ 500ಕೋಟಿ ಅನುದಾನ ಒದಗಿಸಿ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕೆಂದು ಒತ್ತಾಯಿಸಿದ್ದಾರೆ. ರಾಜ್ಯದ ಮತ್ತೊಂದು ಪ್ರಮುಖ ಸಮುದಾಯವಾದ ಕುರುಬ
ಸಮುದಾಯಕ್ಕೂ ನಿಗಮ ಸ್ಥಾಪನೆ ಮಾಡಬೇಕು. ಹಿಂದುಳಿದ ವರ್ಗದ ನೇಕಾರರು, ತಿಗಳರು, ಮಡಿವಾಳರು, ವಿಶ್ವಕರ್ಮ ಸಮುದಾಯ ಸೇರಿದಂತೆ ಹಲವು ಸಮುದಾಯಗಳಲ್ಲಿ ಬಡವರ್ಗ, ಶ್ರಮಿಕ ವರ್ಗದವರೇ ಹೆಚ್ಚಿದ್ದಾರೆ. . ಅವರೆಲ್ಲರ ಪ್ರಗತಿಯಾಗಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಆ ಹಿಂದುಳಿದ ಸಮುದಾಯದ ಬಂಧುಗಳು ತೊಡಗಿಸಿಕೊಳ್ಳಬೇಕೆಂಬುದು ಪ್ರಜಾಪ್ರಭುತ್ವದ ಆಶಯವಾಗಿದೆ. ಸರ್ವರಿಗೂ ಸಮಾನವಾಗಿ ಬಾಳುವ ಹಕ್ಕನ್ನು ಸಂವಿಧಾನ ನೀಡಿದ್ದು, ಅದಕ್ಕೆ ತಕ್ಕಹಾಗೆ ಸರ್ವ ಸಮುದಾಯದ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಮುದಾಯಗಳಲ್ಲಿ ತಾರತಮ್ಯ ಮಾಡದೇ ಎಲ್ಲಾ ಸಮುದಾಯಗಳನ್ನು ಏಕದಷ್ಟಿಯಿಂದ ಕಂಡು ಸಮಾನವಾಗಿ ಅಭಿವೃದ್ಧಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯದ 69 ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಗಾಗಿ ನಿಗಮ ಸ್ಥಾಪನೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ಎಲ್ಲಾ ಸಮುದಾಯಗಳ ನಿಗಮವನ್ನು ಸರ್ಕಾರ ಸ್ಥಾಪಿಸಿ ತಲಾ 500ಕೋಟಿ ಅನುದಾನವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.