ಬೀಳಗಿ
ದಾವಣಗೆರೆ ಮಾ.11
ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ
ಮೂರನೇ ಹಂತದ ಕೋವಿಡ್-19 ಲಸಿಕೆ ನೀಡುವ
ಅಭಿಯಾನವನ್ನು ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ
ಗುರುವಾರ 2ನೇ ಹಂತದ ಲಸಿಕಾಕರಣವನ್ನು
ಹಮ್ಮಿಕೊಳ್ಳಲಾಗಿತ್ತು.
ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ 2ನೇ ಹಂತದ
ಕೋವಿಡ್ ಲಸಿಕೆಯನ್ನು ಪಡೆದರು.
ಈ ವೇಳೆ ಲಸಿಕೆ ಪಡೆದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಮಾತನಾಡಿ, ಕೋವಿಡ್‍ಶೀಲ್ಡ್ ಲಸಿಕೆಯ 2ನೇ ಡೋಸ್‍ನ್ನು
ಪಡೆದಿದ್ದು ನನಗೆ ಯಾವುದೇ ತೊಂದರೆಯಾಗಿಲ್ಲ.
ಸಾರ್ವಜನಿಕರು ಕೂಡ ಯಾವುದೇ ಭಯವಿಲ್ಲದೆ ಲಸಿಕೆ
ಪಡೆಯಲು ಮುಂದಾಗಬೇಕು. ಮಾರ್ಚ್ 1 ರಿಂದ ಮೂರನೇ
ಹಂತ ಅಭಿಯಾನ ಪ್ರಾರಂಭವಾಗಿದ್ದು, 60 ವರ್ಷಕ್ಕಿಂತ
ಮೇಲ್ಪಟ್ಟ ಎಲ್ಲರಿಗೂ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಇತರೆ
ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಕೋವಿಡ್ ಲಸಿಕೆ
ನೀಡಲಾಗುತ್ತಿದೆ. ಅಂತಹವರು ತಮ್ಮ ಆಧಾರ್ ಕಾರ್ಡ್‍ನೊಂದಿಗೆ
ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯಬೇಕು ಎಂದರು.
ಲಸಿಕಾ ಅಭಿಯಾನ ಯಶಸ್ವಿಯಾಗಬೇಕಾದರೆ ಜನರ
ಪಾಲ್ಗೊಳ್ಳುವಿಕೆ ಮುಖ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ಬಂದು
ಲಸಿಕೆ ಪಡೆದುಕೊಳ್ಳುವ ಮೂಲಕ ಅಭಿಯಾನವನ್ನು
ಯಶಸ್ವಿಗೊಳಿಸಬೇಕು. ವೈದ್ಯರು ಸಹ ಹಗಲು
ರಾತ್ರಿಯೆನ್ನದೇ ಸತತವಾಗಿ ಕೋವಿಡ್ ವಿರುದ್ಧ
ಹೋರಾಡುತ್ತಿದ್ದಾರೆ. ಲಸಿಕಾಕರಣದ ಬಗೆಗೆ ಸಾಮಾಜಿಕ
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ
ಗಮನಹರಿಸದೆ ಲಸಿಕೆ ಪಡೆದುಕೊಳ್ಳಲು ಮುಂದಾಗಬೇಕು
ಎಂದು ತಿಳಿಸಿದರು.
ಜಿಲಾ ್ಲಪೊಲೀಸ್ ವರಿಷ್ಠಾಧಿಕಾರಿ ಕೆ. ಹನುಮಂತರಾಯ
ಮಾತನಾಡಿ, ಕೋವಿಡ್ ಶೀಲ್ಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು,
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ
ಸಾಮಥ್ರ್ಯವನ್ನು ಹೊಂದಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ಹಿರಿಯ
ನಾಗರೀಕರು ಮತ್ತು ಜನಸಾಮಾನ್ಯರು ಲಸಿಕೆ
ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಡಿಎಚ್‍ಒ ಡಾ.ನಾಗರಾಜ್,
ಜಿಲ್ಲಾ ಸರ್ಜ್‍ನ್ ಡಾ.ಜಯಪ್ರಕಾಶ್, ಡಿಎಸ್‍ಒ ಡಾ.ರಾಘವನ್, ಡಿಎಚ್‍ಇಒ
ಸುರೇಶ್ ಬಾರ್ಕಿ, ಡಿವಿಬಿಡಿಸಿಯ ಡಾ.ನಟರಾಜ್, ನಿವಾಸಿ ವೈದ್ಯಾಧಿಕಾರಿ ಡಾ.
ಎಂ.ಎಲ್ ಪಾಟೀಲ್ ಹಾಗೂ ಮೇಟ್ರಮ್ ಡಾ. ಆಶಾ ಕಾಂಬ್ಳೆ ಮತ್ತು
ನರ್ಸ್‍ಗಳಾದ ಶಾರದಮ್ಮ, ಜಯಮ್ಮ, ನಿರ್ಮಲಾ ಮತ್ತು
ಫ್ಲಾರೆನ್ಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.