ದಾವಣಗೆರೆ ಜಿಲ್ಲಾ ಗೃಹರಕ್ಷಕದಳ ಮಂಜೂರಾತಿಗೆ
ಸಂಖ್ಯಾಬಲವನ್ನು ಕಾಯ್ದುಕೊಳ್ಳಲು ಜಿಲ್ಲೆಯ ವಿವಿಧ
ತಾಲ್ಲೂಕು ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ ಒಟ್ಟು 57
ಸ್ಥಾನಗಳಿಗೆ ನೂತನ ಗೃಹರಕ್ಷಕರ ನೇಮಕಾತಿಗೆ ವಿವಿಧ
ಘಟಕಗಳಿಂದ ಈಗಾಗಲೇ ಅರ್ಜಿ ಸಲ್ಲಿಸಿ ಪುರಸ್ಕøತಗೊಂಡಿರುವ
161 ಅಭ್ಯರ್ಥಿಗಳಿಗೆ ಮಾ. 15 ರ ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ
ಪೊಲೀಸ್ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ
ದೈಹಿಕ ಪರೀಕ್ಷೆ ಏರ್ಪಡಿಸಲಾಗಿದೆ.
ಪೊಲೀಸ್ ಅಧೀಕ್ಷಕರು ಹಾಗೂ ಅಧ್ಯಕ್ಷರು
ಗೃಹರಕ್ಷಕದಳ ಆಯ್ಕೆ ಸಮಿತಿಯವರು ದೈಹಿಕ
ಪರೀಕ್ಷೆಗೆ ದಿನಾಂಕ ನಿಗದಿಪಡಿಸಿದ್ದು, ಅಭ್ಯರ್ಥಿಗಳು
ಅರ್ಜಿಯೊಂದಿಗೆ ಸಲ್ಲಿಸಿರುವ ಮೂಲ ದಾಖಲೆಗಳೊಂದಿಗೆ
ಹಾಜರಾಗಬೇಕು. ದೈಹಿಕ ಪರೀಕ್ಷೆಗೆ ಹಾಜರಾಗುವಂತೆ 161
ಅಭ್ಯರ್ಥಿಗಳಿಗೆ ಈಗಾಗಲೆ ಪೋಸ್ಟ್ಕಾರ್ಡ್ ಮೂಲಕ ಸೂಚನೆ
ನೀಡಲಾಗಿದೆ. ಗೃಹರಕ್ಷಕ ದಳ ಸದಸ್ಯತ್ವವು ಸಂಪೂರ್ಣವಾಗಿ
ನಿಷ್ಕಾಮ ಸೇವೆ ತತ್ವವನ್ನಾಧರಿಸಿದ ಸಮವಸ್ತ್ರಧಾರಿ, ಶಿಸ್ತುಬದ್ಧ
ಸಮಾಜ ಸೇವೆ ಸಂಸ್ಥೆಯಾಗಿದ್ದು ಯಾವುದೇ ರೀತಿಯ ಮಾಸಿಕ
ವೇತನ/ಸೇವಾ ಭದ್ರತೆ ಇರುವುದಿಲ್ಲ. ಅಲ್ಲದೇ ಸದಸ್ಯತ್ವವು
3 ವರ್ಷಕ್ಕೊಮ್ಮೆ ನವೀಕರಿಸಲಾಗುತ್ತದೆ ಎಂದು ದಾವಣಗೆರೆ
ಹೋಂ ಗಾಡ್ರ್ಸ್ ಕಮಾಂಡೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.