ಮದುವೆ ಎಂಬುದು ಎರಡು ಜೀವಿಗಳ ನಡುವಿನ
ಮಧುರ ಬಾಂಧವ್ಯ, ಪರಸ್ಪರರನ್ನು ಅರಿತು ಬಾಳುವ
ಸಂಬಂಧಗಳ ಮೂಲಕ ಸಮಾಜದಲ್ಲಿ ಮಾದರಿಯಾಗಿ ಬಾಳುವ,
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು, ಶರಣ ಸಂಸ್ಕøತಿ,
ಇಂಥ ಶರಣ ಸಂಸ್ಕøತಿಯನ್ನು ಚಿಕ್ಕಜೋಗಿಹಳ್ಳಿಯ ಶರಣೆ
ತಾರಾವತಿ ಮತ್ತು ಶರಣ ವೀರೇಶ್ ಎನ್.ಬಿ. ದಂಪತಿಗಳು ತಮ್ಮ
ಪುತ್ರ ಶರಣ ವಿನಯ್ ಎನ್.ವಿ. ಮತ್ತು ಅರ್ಪಿತಾ ಕೆ.ಆರ್. ಇವರ ವಿವಾಹ
ಆಮಂತ್ರಣ ಪತ್ರಿಕೆಯನ್ನು 98 ಪುಟಗಳ ಪುಸ್ತಕವನ್ನಾಗಿ
ಹಂಚಿ, ಪುಸ್ತಕ ಸಂಸ್ಕøತಿಯನ್ನು ಮನೆ ಮನೆಗೆ ತಲುಪಿಸಿದ್ದಾರೆ.
ಈ ಆಮಂತ್ರಣ ಪತ್ರಿಕೆ ತೆರೆಯುತ್ತಿದ್ದಂತೆ
ಅವರದೇ ತಾಲ್ಲೂಕ್ ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಬಸವಕಾಲದ
ಶರಣರ ಲೇಖನಗಳ ಸಂಗ್ರಹವಾಗಿದೆ. ಅಲ್ಲಮ ಪ್ರಭು,
ಅಕ್ಕಮಹಾದೇವಿ, ಸತ್ಯಕ್ಕ, ಮುಕ್ತಾಯಕ್ಕ, ಅಜಗಣ್ಣ, ಇಕ್ಕದ
ಮಾರಯ್ಯ, ಕೊಳದ ಮಾರವ್ವ, ಮಾತೆ ಪಿಟ್ಟವ್ವ, ಮುಂತಾದ
ಶರಣರ, ವಚನಗಕಾರರ ಬಗ್ಗೆ ಸಂಪೂರ್ಣ ಮಾಹಿತಿಯನ್ನು
ಒದಗಿಸಿದ್ದಾರೆ. ಜೊತೆಗೆ 100ಕ್ಕೂ ಹೆಚ್ಚು ವಚನಕಾರರ,
ವಚನಗಾರ್ತಿಯರ ಅಂಕಿತ ನಾಮಗಳನ್ನು ಪ್ರಕಟಿಸಿದ್ದಾರೆ.
ಮುಖಪುಟದಲ್ಲಿ ಬಸವೇಶ್ವರರ ಭಾವಚಿತ್ರ
ಅಚ್ಚಾಗಿದು,್ದ ಜೊತೆಗೆ ವಧು ವರರ ಭಾವಚಿತ್ರ ಸಮೇತ
ಶುಭವಿವಾಹದ ವಿವರಗಳಿವೆ. ಹಿಂಪುಟದಲ್ಲಿ ಇಡೀ ಕುಟುಂಬದ
ಭಾವಚಿತ್ರ ಜೊತೆಗೆ ಸುಖಾಗಮನ ಬಯಸುವವರ
ಪರಿಚಯವಿದೆ. ಶಿಕಾರಿಪುರದ ಬಸವ ಆಶ್ರಮದ ಮಾತೆ
ಶರಣಾಂಭಿಕೆಯವರು ಶುಭ ಸಂದೇಶ ನೀಡಿ, ಆಮಂತ್ರಣ
ಪತ್ರಿಕೆಯ ವೈಶಿಷ್ಟ್ಯವನ್ನು ವಿವರಿಸಿದ್ದಾರೆ. ಕಾಯಕ
ದಾಹೋಸದಿಂದ ಗುರುಲಿಂಗ ಜಂಗಮ ಸಾಕ್ಷಿಯಾಗಿ
ಬದುಕುತ್ತಿದ್ದಾರೆಂದು ಆರ್ಶೀವಚನದ ನುಡಿಯನ್ನು
ಒಳಪುಟದಲ್ಲಿ ಸಮರ್ಪಿಸಿದ್ದಾರೆ.
ಸಾಮಾನ್ಯವಾಗಿ ಆಮಂತ್ರಣ ಪತ್ರಿಕೆ ವಿವಾಹ ನಂತರ
ಎಲ್ಲಿಯೋ ಹೋಗುತ್ತದೆ. ಓದುಗರಿಗೆ ಒಂದು ವೇದಿಕೆ ನಿರ್ಮಾಣ
ಒಂದು ಪುಸ್ತಕ ಕೊಟ್ಟು, ಜ್ಞಾನ ಪೀಪಾಸಿಗೆ ಸ್ಪೂರ್ತಿಯಾದ ಈ
ಶರಣ ದಂಪತಿಗಳಿಗೆ ವಂದಿಸಿ ನೂತನ ದಂಪತಿಗಳಿಗೆ ಆರ್ಶೀವಾದ
ಮಾಡೋಣ ಬನ್ನಿ.

ವಿವಾಹ ಸ್ಥಳ:- ಚಿಕ್ಕಮಗಳೂರು (ಜಿ) ಬೀರೂರು,
ತರಳಬಾಳು ಕಲ್ಯಾಣ ಮಂಟಪದಲ್ಲಿ 21-03-2021ರ ಭಾನುವಾರ
ಬೆಳಿಗ್ಗೆ 9:40ರಿಂದ 10:25ಕ್ಕೆ.
ಆರತಕ್ಷತೆ:- ಶಿವಮೊಗ್ಗ (ಜಿ) ಶಿಕಾರಿಪುರ (ತಾ)
ಚಿಕ್ಕಜೋಗಿಹಳ್ಳಿಯಲ್ಲಿ 23-03-2021ರ ಮಂಗಳವಾರ
ಮಧ್ಯಾಹ್ನ 12ಕ್ಕೆ ನೆರವೇರಲಿದೆ.
ಇಂಥಹ ಸಾಹಿತ್ಯ ಯಾತ್ರೆಗಳು, ಪುಸ್ತಕ ಸಂಸ್ಕøತಿಗಳು ಪ್ರತಿ
ಊರಲ್ಲೂ ನಡೆಯಲಿ ಎಂದು ಆಶಿಸೋಣ.

ಚಿಕ್ಕಜೋಗಿಹಳ್ಳಿ ನಾಗರಾಜ್.
ಹೊನ್ನಾಳಿ

Leave a Reply

Your email address will not be published. Required fields are marked *