ಚುನಾವಣೆ

ಮೇ-2021 ರ ಮಾಹೆಯವರೆಗೆ ಅವಧಿ
ಮುಕ್ತಾಯಗೊಳ್ಳಲಿರುವ ಹಾಗೂ ಗ್ರಾಮ
ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ
ಇರುವ/ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ
ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಕೆಳಕಂಡ
ತಾಲ್ಲೂಕುಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ರಾಜ್ಯ
ಚುನಾವಣಾ ಆಯೋಗವು ಅಧಿಸೂಚನೆಯನ್ನು ಹೊರಡಿಸಿದೆ.
ದಾವಣಗೆರೆ ತಾಲ್ಲೂಕಿನ ಅವಧಿ ಪೂರ್ಣಗೊಂಡಿರುವ
ಬೇತೂರು(ಗ್ರಾ.ಪಂ ಸಂಖ್ಯೆ 37) ಕನಗೊಂಡನಹಳ್ಳಿ(40)
ಕುಕ್ಕವಾಡ(41) ಮತ್ತು ಮಾಯಕೊಂಡ(42) ಗ್ರಾ.ಪಂ
ಗಳಿಗೆ ಉಪ ಚುನಾವಣೆ ನಡೆಯಲಿದೆ.
ಹರಿಹರ ತಾಲ್ಲೂಕಿನ ಎಳೆಹೊಳೆ(23) ಗ್ರಾ.ಪಂ ನ
ಮಳಲಹಳ್ಳಿ(ಕ್ಷೇತ್ರ ಸಂಖ್ಯೆ 5) ಕ್ಷೇತ್ರಕ್ಕೆ(ಮೀಸಲಾತಿ-
ಅನುಸೂಚಿತ ಪಂಗಡ) ಉಪ ಚುನಾವಣೆ ನಡೆಯಲಿದೆ.
ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ(7) ಸುಂಕದಕಟ್ಟೆ
ಕ್ಷೇತ್ರ(3)ದ ಅಭ್ಯರ್ಥಿಯು ಮರಣದಿಂದ ತೆರವಾದ ಸದಸ್ಯರ
ಸ್ಥಾನವನ್ನು(ಮೀಸಲಾತಿ-ಸಾಮಾನ್ಯ) ತುಂಬಲು ಉಪಚುನಾವಣೆ
ನಡೆಸಲಾಗುವುದು.
ನ್ಯಾಮತಿ ತಾಲ್ಲೂಕಿನ ಗುಡ್ಡೇಹಳ್ಳಿ(6)
ಗ್ರಾಮಪಂಚಾಯಿತಿಯ ಜೀನಹಳ್ಳಿ-1(3)(ಅನುಸೂಚಿತ ಜಾತಿ,

ಸಾಮಾನ್ಯ(ಮಹಿಳೆ)). ಜೀನಹಳ್ಳಿ-2(4) (ಅನುಸೂಚಿತÀ
ಪಂಗಡ(ಮಹಿಳೆ), ಸಾಮಾನ್ಯ, ಸಾಮಾನ್ಯ(ಮಹಿಳೆ))
ಕ್ಷೇತ್ರಗಳ ಖಾಲಿ ಇರುವ 5 ಸದಸ್ಯರ ಸ್ಥಾನಗಳನ್ನು
ತುಂಬಲು ಉಪಚುನಾವಣೆ ನಡೆಸಲಾಗುವುದು.
ಈ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ
ನಡೆಸಲು ಘೋಷಿಸಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು
ಪಂಚಾಯತ್ ರಾಜ್ ಅಧಿನಿಯಮದನ್ವಯ ಚುನಾವಣಾ
ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪ್ರಕಟಿಸಲಾಗಿದೆ.
ಮಾ.15 ರಂದು ಜಿಲ್ಲಾಧಿಕಾರಿಗಳು ಚುನಾವಣಾ
ಅಧಿಸೂಚನೆಯನ್ನು ಹೊರಡಿಸುವ ದಿನಾಂಕ. ಮಾ.19 ರಂದು
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ
ದಿನಾಂಕವಾಗಿರುತ್ತದೆ. ಮಾ.20 ರಂದು ನಾಮಪತ್ರಗಳನ್ನು
ಪರಿಶೀಲಿಸುವ ದಿನವಾಗಿರುತ್ತದೆ. ಮಾ.22 ರಂದು
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ
ದಿನ. ಮಾ.29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ
ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸುವ ದಿನ.
ಮಾ.30 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ
ಮರು ಮತದಾನ ಅವಶ್ಯವಿದ್ದರೆ, ಮತದಾನವನ್ನು
ನಡೆಸಬೇಕಾದ ದಿನ. ಮಾ.31 ರಂದು ಬೆಳಿಗ್ಗೆ 8 ಗಂಟೆಯಿಂದ
ಮತ ಎಣಿಕೆ ಕಾರ್ಯ ನಡೆಸುವ ಮತ್ತು ಚುನಾವಣಾ
ಮುಕ್ತಾಯ ದಿನಾಂಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರ್ಚುವಲ್ ಉದ್ಯೋಗ ಮೇಳ

Leave a Reply

Your email address will not be published. Required fields are marked *