2021-2022 ನೇ ಸಾಲಿನ ಪರಿಶಿಷ್ಟ ಜಾತಿ ಹಾಗೂ ಅನೈರ್ಮಲ್ಯಕರ
ವೃತ್ತಿಯಲ್ಲಿ ತೊಡಗಿರುವ ಪೋಷಕರ ಪ್ರತಿಭಾವಂತ
ಗಂಡು ಮಕ್ಕಳಿಗೆ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ
ವಿದ್ಯಾರ್ಥಿವೇತನ ನೀಡಿ  ಶ್ರೀ ರಾಮಕೃಷ್ಣ ವಿದ್ಯಾಶಾಲೆ, ಮೈಸೂರು
ಇಲ್ಲಿ 8ನೇ ತರಗತಿಗೆ ಸೇರಿಸುವ ಸಲುವಾಗಿ ಅರ್ಜಿಗಳನ್ನು
ಆಹ್ವಾನಿಸಲಾಗಿದೆ.
  ಮಾ.24 ರಂದು ಸೋಮವಾರ ಶ್ರೀ ರಾಮಕೃಷ್ಣ ವಿದ್ಯಾಶಾಲೆ,
 ಯಾದವಗಿರಿ, ಮೈಸೂರಿನಲ್ಲಿ ಆಯ್ಕೆಯ ಪರೀಕ್ಷೆ
ನಡೆಯಲಿದ್ದು, ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ದಾವಣಗೆರೆ,
ಹರಿಹರ, ಹೊನ್ನಾಳಿ, ಜಗಳೂರು, ಚನ್ನಗಿರಿಯ ಸಹಾಯಕ
ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಅಥವಾ
ಉಪನಿರ್ದೇಶಕರ ಕಚೇರಿ, ದಾವಣಗೆರೆ ಇಲ್ಲಿ ಪಡೆಯಬಹುದು.
ಅರ್ಜಿ ಸಲ್ಲಿಸಲು ಮಾ.31 ಕಡೆಯ ದಿನವಾಗಿರುತ್ತದೆ.
ಅರ್ಜಿ ಹಾಕಿದ ಪ್ರತಿಯನ್ನು ಉಪನಿರ್ದೇಶಕರು ಸಮಾಜ
ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ 37 ಮೊದಲನೇ ಮಹಡಿ,
ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಅಗತ್ಯ

ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ
ಉಪ ನಿರ್ದೇಶಕಿ ಕೌಸರ್ ರೇಷ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *