ದಾವಣಗೆರೆ ಜಿಲ್ಲೆ ಇಂದು ಹೊನ್ನಾಳಿ ತಾಲೂಕಿನ ಪಂಚಮಸಾಲಿ ಸಮಾಜದ ಹೊನ್ನಾಳಿ ತಾಲೂಕು ಘಟಕದ ವತಿಯಿಂದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಯನ್ನು ಕೊಡಬೇಕೆಂದು ನಗರದಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ ದಿಂದ ಸಮಾಜದ ಮುಖಂಡರುಗಳು ಯುವಕರುಗಳು ಪಾದಯಾತ್ರೆಯ ಮೂಲಕ ಘೋಷಣೆಯನ್ನು ಕೂಗುತ್ತಾ ತಾಲೂಕು ಆಪೀಸನವರೆಗೆ ತೆರಳಿ ತಾಲೂಕು ದಂಡಾಧಿಕಾರಿಗಳಾದ ಬಸವರಾಜ ಕೊಟೊರೂರವರಿಗೆ
ರಾಜ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರಿಗೆ ಈ ಮನವಿಪತ್ರವನ್ನು ತಲುಪಿಸುವಂತೆ ಮನವಿ ಮಾಡಿಕೊಂಡರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆನಕನಹಳ್ಳಿ ವೀರಣ್ಣನವರು ವಹಿಸಿದ್ದರು ಮುಖಂಡರುಗಳಾದ ಜಿಎಸ್ ಚನಬಸಪ್ಪ ಬೆನಕನಹಳ್ಳಿ ಪಟ್ಟಣಶೆಟ್ಟಿ ವಿಜಯಣ್ಣ ಎಸ್ಕೆ ಗಣೇಶಪ್ಪ ಕಾಯಿ ಬಸರಾಜ್ ಪ್ರಶಾಂತ ಯುವ ಘಟಕದ ಅಧ್ಯಕ್ಷರಾದ ಗಿರೀಶ್ ಶೆಟ್ಟಿ ಬಸವರಾಜಪ್ಪ ಇನ್ನೂ ಅನೇಕ ಮುಖಂಡರು ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು