ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆಯಿಂದಾಗಿ
ಆಗುತ್ತಿರುವ ಸಾವು-ನೋವು ತಡೆಯುವ ಉದ್ದೇಶದಿಂದ
ಮಾರ್ಚ್ 16 ರಿಂದ 31 ರವರೆಗೆ ವಿವಿಧ ದಿನಗಳಲ್ಲಿ ಪೋಷಣ್
ಅಭಿಯಾನ ಯೋಜನೆಯಡಿ ಪೋಷಣ್ ಪಕ್ವಾಡ್
ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿ.ಪಂ
ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಹೇಳಿದರು.
ಮಂಗಳವಾರ ಜಿ.ಪಂ ಮುಖ್ಯ ಸಭಾಂಗಣದಲ್ಲಿ ಕೆಡಿಪಿ ಸಭೆಗೂ
ಮುನ್ನ ಆಯೋಜಿಸಲಾಗಿದ್ದ ಪೋಷಣ್ ಪಕ್ವಾಡ್
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರು
ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇವರಿಗೆ ಪೌಷ್ಟಿಕ ಆಹಾರ
ನೀಡುವ ಮೂಲಕ ಅವರನ್ನು ರಕ್ತಹೀನತೆ ಮತ್ತು ಇತರೆ
ಆರೋಗ್ಯ ಸಮಸ್ಯೆಯಿಂದ ಕಾಪಾಡಬೇಕಿದೆ. ಗ್ರಾಮಗಳಿಗೆ
ಮೊದಲನೇ ಆದ್ಯತೆ ನೀಡಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕು.
ತೋಟಗಾರಿಕೆ ಇಲಾಖೆಯಿಂದ ಪೌಷ್ಟಿಕಾಂಶಯುಕ್ತ ಹಣ್ಣು,
ತರಕಾರಿ ಗಿಡಗಳನ್ನು ನೀಡಲಾಗುವುದು. ಈ ಗಿಡಗಳನ್ನು
ನೆಟ್ಟು ಪೋಷಿಸಿ ಫಲ ಪಡೆಯಬೇಕು. ಹಾಗೂ ಅಧಿಕಾರಿಗಳು
ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪೋಷಣ್ ಅಭಿಯಾನದ ಕುರಿತು
ಅರಿವು ಮೂಡಿಸಬೇಕೆಂದರು.
ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ
ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿಯರಿಗೆ ಅಗತ್ಯ
ಪೋಷಕಾಂಶಗಳನ್ನು ನೀಡಿ ರಕ್ತಹೀನತೆಯಿಂದ ಕಾಪಾಡಲು
ಪೋಷಣ್ ಅಭಿಯಾನ ಯೋಜನೆಯಡಿ ಮಾರ್ಚ್ 16 ರಿಂದ 31
ರವರೆಗೆ ವಿವಿಧ ದಿನಗಳಲ್ಲಿ ಜಿಲ್ಲೆಯಾದ್ಯಂತ ಪೋಷಣ್
ಪಕ್ವಾಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಕಡಿಮೆ
ಮಾಡುವ ಉದ್ದೇಶದಿಂದ ಈ ಅಭಿಯಾನವನ್ನು ಆರೋಗ್ಯ,
ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,
ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ
ಕೈಗೊಳ್ಳಲಾಗಿದೆ.
ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕಾಂಶ ಸುಧಾರಣೆಗಾಗಿ 2018
ರಿಂದ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು

ನಡೆಸಲಾಗುತ್ತಿದೆ. ಕಬ್ಬಿಣ ಮತ್ತು ವಿಟಮಿನ್ ಮಾತ್ರೆಗಳನ್ನು
180 ದಿನಗಳ ಕಾಲ ನೀಡಲಾಗುವುದು ಎಂದರು.
ಅಂಗನವಾಡಿ ಆವರಣದಲ್ಲಿ ಔಷಧೀಯ ಹಾಗೂ ಹಣ್ಣಿನ
ಕನಿಷ್ಟ 4 ಗಿಡಗಳನ್ನು ನೆಡಬೇಕು ಮತ್ತು ಗರ್ಭಿಣಿ
ಬಾಣಂತಿಯರಿಗೂ ನೀಡಬೇಕು. ನಮ್ಮ ಭಾಗಕ್ಕೆ
ಸೂಕ್ತವೆನಿಸುವ ಗಿಡಗಳನ್ನು ನೆಡಲಾಗುವುದು. ಹಾಗೂ
ಅಪೌಷ್ಟಿಕತೆ ದುಷ್ಪರಿಣಮಗಳ ಕುರಿತು ಅರಿವು ಮೂಡಿಸಬೇಕು.
ಆಯುಷ್ ಇಲಾಖೆಯಿಂದ ಯೋಗದ ಮಹತ್ವದ ಬಗ್ಗೆ
ತಿಳಸಬೇಕು ಎಂದ ಅವರು ಜನಾಂದೋಲನ ವೆಬ್‍ಸೈಟ್
ಡ್ಯಾಶ್‍ಬೋರ್ಡ್‍ನಲ್ಲಿ ಪೋಷಣ್ ಪಕ್ವಾಡ್ ಕುರಿತು ದಿನನಿತ್ಯದ
ಪ್ರಗತಿಯನ್ನು ದಾಖಲಿಸಬೇಕು ಎಂದರು.
ಆಜಾದಿ ಕೆ ಅಮೃತ ಮಹೋತ್ಸವ : ಸ್ವಾತಂತ್ರ್ಯ ಲಭಿಸಿ 75 ವರ್ಷ
ಸಂದ ಹಿನ್ನೆಲೆಯಲ್ಲಿ ‘ಆಜಾದಿ ಕಿ ಅಮೃತ ಮಹೋತ್ಸವ
ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯದ 4 ಜಿಲ್ಲಾ
ಪಂಚಾಯ್ತಿಗಳು ಈ ಮಹೋತ್ಸವ ಕಾರ್ಯಕ್ರಮ ನಡೆಸಲು
ಆಯ್ಕೆಯಾಗಿದ್ದು, ಇದರಲ್ಲಿ ದಾವಣಗೆರೆ ಜಿಲ್ಲೆ ಕೂಡ ಒಂದಾಗಿದೆ.
2019 ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ವಿಶೇಷ ಸಾಧನೆ
ಆಧಾರದಲ್ಲಿ ದಾವಣಗೆರೆ ಜಿ.ಪಂ ನ್ನು ಆಯ್ಕೆ ಮಾಡಲಾಗಿದ್ದು ಈ
ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯ್ತಿಗಳಲ್ಲಿ ಏನೆಲ್ಲ
ಕಾರ್ಯಕ್ರಮಗಳನ್ನು ಮಾಡಬೇಕೆಂಬ ಯೋಜನೆ
ರೂಪಿಸುತ್ತಿದ್ದೇವೆ.
ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳನ್ನು ಬ್ರಾಂಡ್
ಅಂಬಾಸಿಡರ್ ಆಗಿ ಆಯ್ಕೆ ಮಾಡಬೇಕಿದೆ. ಕುಡಿಯುವ ನೀರು,
ಇಂಧನ ನವೀಕರಣ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ವಿಶೇಷ
ಗ್ರಾಮ ಸಭೆಗಳನ್ನು ಆಯೋಜಿಸಬೇಕು. ಜೊತೆಗೆ ಈ
ಸಭೆಯಲ್ಲಿ ಗ್ರಾ.ಪಂ ಅಭಿವೃದ್ದಿ ಯೋಜನೆಗಳ ಕ್ರಿಯಾ
ಯೋಜನೆ ಸಿದ್ದಪಡಿಸಬೇಕಿದೆ. ಹಾಗೂ ಆಜಾದಿ ಕಿ ಅಮೃತ್
ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪಾದಯಾತ್ರೆ,
ಯೋಗಥಾನ್ ಮತ್ತು ಮ್ಯಾರಥಾನ್‍ಗಳನ್ನು ಆಯೋಜಿಸಲು
ಕ್ರಿಯಾ ಯೋಜನೆ ಮಾಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಉಪನಿರ್ದೇಶಕ ವಿಜಯಕುಮಾರ್ ಅವರು ಪೋಷಣ್
ಅಭಿಯಾನದ ರೂಪರೇಷೆಗಳನ್ನು ವಿವರಿಸಿದರು. ಜಿಲ್ಲಾ
ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯಕ್,
ಜಿಲ್ಲಾ ಪಂಚಾಯತ್ ಸ್ಥಾಯಿಸಮಿತಿ ಅಧ್ಯಕ್ಷರುಗಳಾದ
ವೀರಶೇಖರಪ್ಪ, ಲೋಕೇಶ್ವರ, ಫಕೀರಪ್ಪ ಈ
ಸಂದರ್ಭದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *