ನಗರದಲ್ಲಿ ಕೊರೋನ ಜಾಗೃತಿ – ಮಾಸ್ಕ್ ವಿತರಣೆ
ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸಲು
ಮತ್ತು ಮಾಸ್ಕ್ ಧರಿಸುವಿಕೆ ಬಗ್ಗೆ ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ, ಎಸ್.ಪಿ. ಹನುಮಂತರಾಯ, ಸಿಇಒ ವಿಜಯ ಮಹಾಂತೇಶ
ದಾನಮ್ಮನವರ್ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದಲ್ಲದೇ ಮಾಸ್ಕ್
ಧರಿಸದವರಿಗೆ ತಾವೇ ಮುಂದೆ ನಿಂತು ಮಾಸ್ಕ್ ನೀಡಿ ಜಾಗೃತಿ
ಮೂಡಿಸಿದರು.
ಅಧಿಕಾರಿಗಳ ತಂಡದೊಂದಿಗೆ ನಗರದ ಗುಂಡಿ
ಸರ್ಕಲ್ಯಿಂದ ಹೊರಟು ರಾಮ್ ಅಂಡ್ ಕೋ ಸರ್ಕಲ್, ಕೆ.ಎಸ್.ಆರ್.ಟಿ.ಸಿ
ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಗಡಿಯಾರದ ಕಂಬದ ಮುಖಾಂತರ
ಸಾಗಿದ ಅಧಿಕಾರಿಗಳು ಕೊರೋನ ಎರಡನೇ ಅಲೆ ಸಾಧ್ಯತೆ
ಇದ್ದು ಒಂದು ವೇಳೆ ಕೊರೋನ ಎರಡನೇ ಅಲೆ ಅಪ್ಪಳಿಸಿದರೆ
ಮತ್ತೊಮ್ಮೆ ಲಾಕ್ಡೌನ್ ಸಂಕಷ್ಟಕ್ಕೆ
ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಗಡಿ ಹಾಗೂ ಬಸ್ ಮಾಲೀಕರಿಗೆ ನಿರ್ದೇಶನ ನೀಡಿದ
ಜಿಲ್ಲಾಧಿಕಾರಿಗಳು ತಮ್ಮಲ್ಲಿ ಬರುವ ಗ್ರಾಹಕರಿಗೆ
ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು. ಒಂದು
ವೇಳೆ ಮಾಸ್ಕ್ ಧರಿಸದೆ ಇದ್ದಲ್ಲಿ ತಾವೇ
ಜವಬ್ದಾರರಾಗಬೇಕಾಗುತ್ತದೆ. ಹಾಗೂ ತಮ್ಮ
ಅಂಗಡಿಗಳನ್ನು ಮುಲಾಜಿಲ್ಲದೆ ಮುಚ್ಚಿಸಬೇಕಾಗುತ್ತದೆ.
ಇದು ಕೇವಲ ಸರ್ಕಾರದ ಕರ್ತವ್ಯವಲ್ಲ. ಪ್ರತಿಯೊಬ್ಬರು
ತಮ್ಮ ಜೀವ ಉಳಿಸಿಕೊಳ್ಳುವುದು ತಮ್ಮ ಜವಬ್ದಾರಿ. ತಾವು
ನಿಯಮಗಳನ್ನು ಪಾಲಿಸುವುದರ ಮೂಲಕ ತಮ್ಮ
ಕುಟುಂಬದವರನ್ನು ರಕ್ಷಿಸಿಕೊಳ್ಳಿ. ಮತ್ತೆ ಲಾಕ್ಡೌನ್ನಂತಹ
ಪರಿಸ್ಥಿತಿ ಉಂಟಾದ್ದಲ್ಲಿ ವ್ಯಾಪಾರ ವಹಿವಾಟು ಏರುಪೇರಾಗಲಿದ್ದು
ಇದನ್ನು ನಂಬಿಕೊಂಡಿರುವವರ ಜೀವನ ದುಸ್ಥರವಾಗಲಿದೆ.
ಹಾಗಾಗಿ ಕೋವಿಡ್ ನಿಯಮಗಳಾದ ಸಾಮಾಜಿಕ ಅಂತರ,
ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಬಳಸುವುದು ಜನಜಂಗುಳಿ
ಇರುವೆಡೆ ಹೋಗದೆ ಇರುವುದು ಸರ್ಕಾರ ನಿಗದಿ ಪಡಿಸಿರುವ
ನಿರ್ದಿಷ್ಟ ಸಂಖ್ಯೆಯ ಪ್ರಕಾರವೇ ಕಾರ್ಯಕ್ರಮ
ಆಯೋಜಿಸುವುದು ಮುಂತಾದವುಗಳನ್ನು ಪಾಲಿಸುವ
ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಂದರು. ಅಲ್ಲದೇ
ಸಂಚಾರ ಪೊಲೀಸರಿಗೆ ದಂಡ ವಿಧಿಸುವಂತೆ ಸೂಚಿಸಿದರು.
ಸೂಪರ್ ಮಾರ್ಕೆಟ್ ಪ್ರದೇಶಕ್ಕೂ ಭೇಟಿ ಕೊಟ್ಟು, ಮಾಸ್ಕ್
ಹಾಕದೆ ತಿರುಗಾಡುತ್ತಿದ್ದ ಜನರಿಗೆ ಕೋವಿಡ್ನ 2ನೇ ಅಲೆ
ಶುರುವಾಗುತ್ತಿದೆ. ಸೋಂಕಿನ ಕುರಿತಾದ ಭಯ ಇಲ್ಲದೇ
ಮಾಸ್ಕ್ ಧರಿಸುವುದನ್ನು ತಿರಸ್ಕರಿಸಿದ್ದಿರಾ. ನಿಮ್ಮ ಮಾಸ್ಕ್ ಎಲ್ಲಿದೆ?
ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದರು. ಮಾಸ್ಕ್ ಇಲ್ಲದವರಿಗೆ ಮಾಸ್ಕ್
ವಿತರಿಸಿದರು.
ಈ ವೇಳೆ ಡಿಹೆಚ್ಒ ಡಾ.ನಾಗರಾಜ್, ಡಿವೈಎಸ್ಪಿ ನಾಗೇಶ ಐತಾಳ್,
ಆರಕ್ಷಕ ಸಿಬ್ಬಂದಿ, ಕಮಾಂಡೋ ವಾಹನ ಸಿಬ್ಬಂದಿಗಳು ಇದ್ದರು.