4912 ಅನರ್ಹ ಬಿಪಿಎಲ್ ಕಾರ್ಡ್ ರದ್ದು : ಆಹಾರ ಇಲಾಖೆ ಸಹಾಯಕ
ನಿರ್ದೇಶಕ ಸೈಯದ್ ಖಲೀಮುಲ್ಲ ಮಾತನಾಡಿ, ಜಿಲ್ಲೆಯಲ್ಲಿ ಬಿಪಿಎಲ್
ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚಿ ಕ್ರಮ
ಜರುಗಿಸಲು ಇಲಾಖೆ ಆಂದೋಲನ ಕೈಗೊಂಡಿದ್ದು, ಈವರೆಗೆ
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಆರ್ಥಿಕವಾಗಿ ಉತ್ತಮ
ಸ್ಥಿತಿಯಲ್ಲಿರುವವರನ್ನು ಪತ್ತೆಹಚ್ಚಿ 4912 ಕಾರ್ಡ್
ರದ್ದುಪಡಿಸಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ
ಪ್ರಸಕ್ತ ವರ್ಷ ನೊಂದಣಿಗೊಂಡ ನಾಲ್ಕುಚಕ್ರ ವಾಹನಗಳ
ಮಾಲೀಕರ ಹೆಸರು, ಆಧಾರ್ ಸಂಖ್ಯೆಯ ವಿವರ ಪಡೆದು,
ಅಂತಹವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಪತ್ತೆ ಹಚ್ಚಿ, ಬಿಪಿಎಲ್ ಕಾರ್ಡ್
ರದ್ದುಪಡಿಸುವ ಕಾರ್ಯವನ್ನು ಆಹಾರ ಇಲಾಖೆ ಪ್ರಾರಂಭಿಸಿದೆ.
ಪಡಿತರ ವಿತರಣೆಯಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ 8
ನ್ಯಾಯಬೆಲೆ ಅಂಗಡಿ ಪರವಾನಿಗೆ ಅಮಾನತುಗೊಳಿಸಿದ್ದು, 3

ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲಾಗಿದೆ.
ನ್ಯಾಯಬೆಲೆ ಅಂಗಡಿಕಾರರೊಂದಿಗೆ ಸಭೆ ನಡೆಸಿ, ತಿಂಗಳ ಎಲ್ಲ
ದಿನಗಳಲ್ಲೂ ಅಂಗಡಿಗಳನ್ನು ತೆರೆದು, ಪಡಿತರ
ಸಮರ್ಪಕ ವಿತರಣೆಗೆ ಸೂಚನೆ ನೀಡಲಾಗಿದೆ ಎಂದರು. ಜಿ.ಪಂ.
ಅಧ್ಯಕ್ಷರು ಪ್ರತಿಕ್ರಿಯಿಸಿ, ಬಿಪಿಎಲ್ ಕಾರ್ಡ್‍ದಾರರು ಸತತ
ಎರಡು ತಿಂಗಳು ಪಡಿತರ ಪಡೆಯದಿದ್ದರೆ ಅಂತಹವರಿಗೆ
ನ್ಯಾಯಬೆಲೆ ಅಂಗಡಿಯವರು ನಿಮಗೆ ಪಡಿತರ ರದ್ದಾಗಿದೆ
ಎಂದು ತಿಳಿಸಿ ವಾಪಸ್ ಕಳುಹಿಸುತ್ತಿರುವ ಬಗ್ಗೆ ದೂರುಗಳು
ಬರುತ್ತಿವೆ ಎಂದರು. ಇದಕ್ಕೆ ಉತ್ತರಿಸಿದ ಖಲೀಮುಲ್ಲ ಅವರು,
ಬಿಪಿಎಲ್ ಕಾರ್ಡ್‍ದಾರರು ಸತತವಾಗಿ 6 ತಿಂಗಳು ಪಡಿತರ
ಪಡೆಯದಿದ್ದಲ್ಲಿ ಮಾತ್ರ, ಅಂತಹವರಿಗೆ ಮುಂದಿನ ತಿಂಗಳ
ಪಡಿತರ ಮಂಜೂರಾಗುವುದಿಲ್ಲ ಎಂದರು.
ವಿಕಲಚೇತನರ ಬೇಡಿಕೆ ಆಧಾರದ ಸಮೀಕ್ಷೆ : ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ
ಮಹಾಂತೇಶ್ ದಾನಮ್ಮನವರ್ ಮಾತನಾಡಿ, ಜಿಲ್ಲೆಯಲ್ಲಿ
ವಿಕಲಚೇತನರಿಗೆ ಕೇವಲ ವಾಹನ, ಸಾಧನ ಸಲಕರಣೆ
ನೀಡುತ್ತಿರುವುದು ಸರಿಯಲ್ಲ. ಗ್ರಾಮೀಣ ವಿಕಲಚೇತನರ
ಪುನರ್ವಸತಿ ಕಾರ್ಯಕರ್ತರ ನೆರವಿನೊಂದಿಗೆ, ಪ್ರತಿ
ಗ್ರಾಮಗಳಲ್ಲಿ ವಿಕಲಚೇತನರ ಬೇಡಿಕೆಗಳು, ವಸತಿ
ಸೌಕರ್ಯ, ವೃತ್ತಿ ತರಬೇತಿ, ಕೌಶಲ್ಯ ಮುಂತಾದ ಬೇಡಿಕೆ
ಆಧಾರದ ಸಮೀಕ್ಷೆ ಕೈಗೊಂಡು, ವರದಿ ಪಡೆಯಬೇಕು. ಈ
ವರದಿಯನ್ನು ಕ್ರೋಢೀಕರಿಸಿ, ಕ್ರಿಯಾ ಯೋಜನೆ
ರೂಪಿಸಬೇಕು. ವಿಕಲಚೇತನರಿಗೆ ಆದಾಯ ತರುವಂತಹ
ವೃತ್ತಿ ಆಧಾರಿತ ತರಬೇತಿ ಕೊಡಿಸುವುದು, ವಸತಿ ರಹಿತರಿಗೆ
ಮನೆ ಒದಗಿಸುವುದು, ಸಾಲ ಸೌಲಭ್ಯ ನೀಡಿಕೆಗೆ ಕ್ರಮ
ಕೈಗೊಳ್ಳಬೇಕು. ಸರ್ಕಾರಿ ಸೌಲಭ್ಯವನ್ನು ಪದೇ ಪದೇ
ಒಂದೇ ಫಲಾನುಭವಿಗೆ ನೀಡುವಂತಾಗಬಾರದು. ಕಳೆದ 10
ವರ್ಷಗಳಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳ ಪಟ್ಟಿ
ಇಲಾಖೆಯಲ್ಲಿ ಲಭ್ಯವಿರಬೇಕು ಎಂದು ಜಿಲ್ಲಾ ಅಂಗವಿಕಲರ
ಕಲ್ಯಾಣಾಧಿಕಾರಿ ಶಶಿಧರ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.
ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ, ಅಧಿಕಾರಿಗಳು
ಕಚೇರಿಯಲ್ಲಿ ಸಾರ್ವಜನಿಕರಿಗೆ ದೊರಕುತ್ತಿಲ್ಲ, ಇದ್ದರೂ,
ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿಲ್ಲ, ಅಹವಾಲಗಳನ್ನು
ಆಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಅಧಿಕಾರಿಗಳಿಗೆ ಪ್ರತಿ ಸೋಮವಾರ ಯಾವುದೇ ಸಭೆ
ನಡೆಸುವುದಿಲ್ಲ, ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು,
ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯರಿರಬೇಕು. ಅವರ
ಮನವಿಗೆ ಸ್ಪಂದಿಸಬೇಕು. ವಿನಾಕಾರಣ ಕಚೇರಿಗಳಿಗೆ
ಸಾರ್ವಜನಿಕರನ್ನು ಅಲೆದಾಡಿಸಬೇಡಿ. ಪ್ರಸಕ್ತ ವರ್ಷದಲ್ಲಿ ಆಯಾ
ಇಲಾಖೆಯವರು ಯೋಜನೆ, ಕಾಮಗಾರಿಗಳಿಗೆ
ಬಿಡುಗಡೆಯಾದ ಅನುದಾನ ವ್ಯಪಗತವಾಗದಂತೆ ಎಚ್ಚರಿಕೆ
ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ
ಗಂಗಾಧರ ನಾಯಕ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ
ಸಮಿತಿ ಅಧ್ಯಕ್ಷ ವೀರ ಶೇಖರಪ್ಪ, ಕೃಷಿ ಮತ್ತು ಕೈಗಾರಿಕೆ

ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ
ಸಮಿತಿ ಅಧ್ಯಕ್ಷ ಲೋಕೇಶ್ವರ ಸೇರಿದಂತೆ ಜಿಲ್ಲಾ ಮಟ್ಟದ
ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *