ನವದೆಹಲಿಯ ಕರ್ನಾಟಕ ಭವನದಲ್ಲಿ ಗ್ರೂಪ್ ಸಿ ಮತ್ತು
ಡಿ ವೃಂದದ ಹುದ್ದೆಗಳನ್ನು(ಉಳಿಕೆ ಮೂಲ ವೃಂದದ – 25
ಮತ್ತು ಹೈದ್ರಾಬಾದ್ ಕರ್ನಾಟಕ ವೃಂದದ -07) ಕರ್ನಾಟಕ
ಭವನ (ಆತಿಥ್ಯ ಸಂಸ್ಥೆಯಲ್ಲಿನ ಕೆಲವು
ಹುದ್ದೆಗಳಿಗೆ – ಕರ್ನಾಟಕ ಭವನ (ವಿಶೇಷ) ನಿಯಮಗಳು,
2020 ರನ್ವಯ ನೇರ ನೇಮಕಾತಿ ಮುಖಾಂತರ ಭರ್ತಿ
ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ : ಸಹಾಯಕ ವ್ಯವಸ್ಥಾಪಕರು ಗ್ರೂಪ್ ಸಿ
ಉಳಿಕೆ ಮೂಲ ವೃಂದ 01 ಹೈದ್ರಾಬಾದ್ ಕರ್ನಾಟಕ ವೃಂದ 01 ಒಟ್ಟು
02 ಹುದ್ದೆಗಳು. ಸ್ವಾಗತಕಾರರು/ದೂರವಾಣಿ
ಪ್ರವರ್ಧಕರು ಗ್ರೂಪ್ ಸಿ ಉಳಿಕೆ ಮೂಲ ವೃಂದ 02
ಹೈದ್ರಾಬಾದ್ ಕರ್ನಾಟಕ 01 ಒಟ್ಟು 03. ಕಿಚನ್‍ಮೇಟ್ ಗ್ರೂಪ್ ಡಿ ಉಳಿಕೆ
ಮೂಲ ವೃಂದ 07 ಹೈದ್ರಾಬಾದ್ ಕರ್ನಾಟಕ 02 ಒಟ್ಟು 09. ಪ್ಯೂನ್
ಕಂ ವಾಚ್‍ಮನ್ ಗ್ರೂಪ್ ಡಿ ಉಳಿಕೆ ವೃಂದ 05 ಹೈದ್ರಾಬಾದ್ ಕರ್ನಾಟಕ
ವೃಂದ 01 ಒಟ್ಟು 06. ಗಾರ್ಡನರ್ ಕಂ ಸ್ವೀಪರ್ ಗ್ರೂಪ್ ಡಿ ಉಳಿಕೆ
ಮೂಲ 02 ಒಟ್ಟು 02. ರೂಂ ಬಾಯ್/ಬೇರರ್ ಗ್ರೂಪ್ ಡಿ ಉಳಿಕೆ
ಮೂಲ ವೃಂದ 08 ಹೈದ್ರಾಬಾದ್ ಕರ್ನಾಟಕ ವೃಂದ 02 ಒಟ್ಟು 32 ಈ
ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು
ನೇಮಕಾತಿ ಮಾರ್ಗಸೂಚಿ/ನಿಬಂಧನೆಗಳನ್ನು (ಅಧಿಸೂಚನೆ)
ಓದಿಕೊಂಡು ನಂತರ ಅಗತ್ಯ ದಾಖಲೆಗಳೊಂದಿಗೆ ಆನ್‍ಲೈನ್
ಮೂಲಕ ಅರ್ಜಿ ಸಲ್ಲಿಸತಕ್ಕದ್ದು, ಶೈಕ್ಷಣಿಕ ವಿದ್ಯಾರ್ಹತೆ
ಕುರಿತು ಅಧಿಸೂಚನೆಯಲ್ಲಿ ವಿವರವಾದ ಮಾಹಿತಿಯನ್ನು
ನೀಡಲಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು
ನವದೆಹಲಿಯಲ್ಲಿನ ಕರ್ನಾಟಕ ಭವನದಲ್ಲಿಯೇ
ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ.
ಹೆಚ್ಚಿನ
ಮಾಹಿತಿಗಾಗಿ ತಿತಿತಿ.ಞಚಿಡಿಟಿಚಿಣಚಿಞಚಿbhಚಿvಚಿಟಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‍ಸೈಟ್‍ನ್ನು
ಸಂಪರ್ಕಿಸಬಹುದು. ಈ ವೆಬೆಸೈಟ್‍ನ ಮೂಲಕ ಅರ್ಜಿ ಸಲ್ಲಿಸಬೇಕು.
ಮಾರ್ಚ್ 31 ಕಡೆಯ ದಿನಾಂಕವಾಗಿದ್ದು ಏಪ್ರಿಲ್ 7 ಶುಲ್ಕ ಪಾವತಿಸಲು
ಕಡೆಯ ದಿನವಾಗಿದೆ ಎಂದು ನವದೆಹಲಿ ಕರ್ನಾಟಕ ಭವನದ ನಿವಾಸಿ
ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.