ಅಗತ್ಯ : ಚಿಕ್ಕಮ್ಮ ಬಸವರಾಜ್

ಬಾಲಭವನದ ಅಭಿವೃದ್ಧಿಗೆ ವಿವಿಧ ಕಾರಣಗಳಿಂದ
ಅನುದಾನದ ಕೊರತೆಯಿದ್ದು, ಅಭಿವೃದ್ಧಿ ಕುಂಟುತ್ತಾ ಸಾಗಿದ್ದು
ಅಧಿಕಾರಿಗಳು ದಾನಿಗಳಿಂದ ಸಹಾಯ ಪಡೆದು ಬಾಲಭವನ
ಮತ್ತು ಪಾರ್ಕ್ ಅನ್ನು ಅಭಿವೃದ್ಧಿ ಪಡಿಸುವಲ್ಲಿ ವಿಶೇಷ ಆಸಕ್ತಿ
ತೋರಿದಲ್ಲಿ ಬಾಲಭವನದ ಮೂಲ ಉದ್ಧೇಶ ಸಾಧಿಸಬಹುದು
ಎಂದು ರಾಜ್ಯ ಬಾಲ ಭವನ ಸೊಸೈಟಿಯ ಅಧ್ಯಕ್ಷೆ ಚಿಕ್ಕಮ್ಮ
ಬಸವರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆ.ಹೆಚ್.ಪಟೇಲ್ ಬಡಾವಣೆಯ ಜಿಲ್ಲಾ ಬಾಲಭವನದಲ್ಲಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ
ಬಾಲಭವನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದಾವಣಗೆರೆ
ಸಹಯೋಗದಲ್ಲಿ ಬುಧವಾರ ಕರೆಯಲಾಗಿದ್ದ ಬಾಲಭವನದ
ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು ಬಾಲಭವನ ಮಕ್ಕಳನ್ನು ಆಕರ್ಷಿಸುವ
ಕೇಂದ್ರವಾಗಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆ,
ಮಹಾನಗರಪಾಲಿಕೆ, ದೂಡಾ, ಹಾಗೂ ಸಮಾಜ ಕಲ್ಯಾಣ ಇಲಾಖೆ,
ಮುಖ್ಯವಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸಹಾಯದ ಅಗತ್ಯವಿದೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕೈ ಜೋಡಿಸಿದರೆ
ಬಾಲಭವನವು ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹಾಕಲು
ಬಾಲಭವನ ಮುಕ್ತ ವೇದಿಕೆಯನ್ನು ನಿರ್ಮಾಣ ಮಾಡಲಿದೆ.
ಅದಕ್ಕಿಂತಲೂ ಹೆಚ್ಚಾಗಿ ಅವಕಾಶಗಳಿಂದ ವಂಚಿತಗೊಂಡಿರುವ
ಮಕ್ಕಳಿಗೆ ಎಲ್ಲಾ ರಂಗದಲ್ಲೂ ಭಾಗವಹಿಸಲು ಅವಕಾಶÀ ನೀಡಿ
ಪ್ರತಿಭೆಗೆ ಉತ್ತೇಜನ ನೀಡುತ್ತದೆ. ವಿಶೇಷಚೇತನ
ಮಕ್ಕಳಲ್ಲಿನ ಬೌದ್ಧಿಕ ಸಾರ್ಮಥ್ಯವನ್ನು ಹೆಚ್ಚಿಸುವುದು,
ಮಕ್ಕಳ ಮನರಂಜನೆ, ಹಾಗೂ ಕಲಿಕಾ ಗುಣಮಟ್ಟವನ್ನು
ಅಭಿವೃದ್ಧಿ ಪಡಿಸುವುದು ಬಾಲಭವನದ ಮುಖ್ಯ ಉದ್ದೇಶವಾಗಿದೆ
ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ
ಉಪನಿರ್ದೇಶಕ ಕೆ.ಹೆಚ್ ವಿಜಯಕುಮಾರ್ ಮಾತನಾಡಿ,
ಬಾಲಭವನದಲ್ಲಿ ಮಕ್ಕಳಿಗಾಗಿ ಆಟಿಕೆಗಳು, ರಂಗಮಂದಿರ,
ಬಾಲವೇದಿಕೆ, ಶೌಚಾಲಯ ಹಾಗು ನೀರಿನ ವ್ಯವಸ್ಥೆಯ
ಅವಶ್ಯಕತೆಯಿದ್ದು, ಈ ಎಲ್ಲಾ ಕಾಮಗಾರಿಗಳು ತ್ವರಿತವಾಗಿ
ಆರಂಭವಾದರೆ ಮಕ್ಕಳಿಗೆ ಅನುಕೂಲವಾಗಲಿದೆ. ಯಾವುದೇ

ಪಾರ್ಕ್‍ಗಳಲ್ಲಿ ಮೂಲಭೂತ ಸೌಕರ್ಯಗಳು ಇದ್ದರೆ
ಮಾತ್ರ ಅಲ್ಲಿ ಸಾರ್ವಜನಿಕರು ಆಸಕ್ತಿಯಿಂದ ಭೇಟಿ ನೀಡುತ್ತಾರೆ.
ಹಾಗೂ ಬಡಾವಣೆಗೆ ಸಾರಿಗೆ ಸಂಪರ್ಕದ ಅಗತ್ಯವಿದ್ದು ಸರ್ಕಾರಿ
ಬಸ್‍ಗಳನ್ನು ಈ ಬಡಾವಣೆಗೆ ಸಂಚರಿಸುವಂತೆ ಕ್ರಮ
ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ
ಸಿ.ಆರ್.ಪರಮೇಶ್ವರಪ್ಪ, ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ,
ಮಹಾನಗರಪಾಲಿಕೆಯ ಉಪ ಆಯುಕ್ತೆ ಜಿ.ನಳಿನ, ನಿರ್ಮಿತಿ
ಕೇಂದ್ರದ ಯೋಜನಾ ವ್ಯವಸ್ಥಾಪಕ ಎಸ್.ಒ.ರವಿ, ದಾವಣಗೆರೆ
ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ನಿರಂಜನ
ಮೂರ್ತಿ,  ದಾವಣಗೆರೆ ಉತ್ತರ ವಲಯದ ಕ್ಷೇತ್ರ
ಶಿಕ್ಷಣಾಧಿಕಾರಿ ಕೆ.ಭೈರಪ್ಪ, ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕಿ ಕೌಸರ್ ರೇಷ್ಮಾ, ಸಿಡಿಪಿಒ ಸದಾನಂದ, ದೂಡಾ
ವ್ಯವಸ್ಥಾಪಕ ಕೃಷ್ಣ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *