೧) ಮೌರ್ಯರು:
- ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ನಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ
11 ಸ್ಥಳಗಳಲ್ಲಿ ಕಂಡು ಬಂದಿವೆ.
- ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.
- ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.
- ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು : ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ. ರಾಮೇಶ್ವರ.
- ರಾಯಚೂರು ಜಿಲ್ಲೆಯ ಗವಿಮಠ, ಮಸ್ಕಿ, ಪಾಲ್ಕಿಗುಂಡು, ಕೊಪ್ಪಳ.
- ಗುಲ್ಬರ್ಗಾ ಜಿಲ್ಲೆಯ ಸನ್ನತಿ
- ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದಯಗೊಳ್ಳಂ
● ೨) ಶಾತವಾಹನರು (ಕ್ರಿ.ಪೂ. 238 – ಕ್ರಿ.ಶ 225):*
- ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.
- ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.
- ಇವರ ಲಾಂಛನ: ವರುಣ.
- ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
- ಶಾತವಾಹನರ ಮೂಲ ಪುರುಷ : ಸಿಮುಖ.
- ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ * ಶಾತವಾಹನರನ್ನು ‘ ಶಾತಕರ್ಣಿಗಳೆಂದು ಕರೆಯುತ್ತಾರೆ.
● ೩) ಬನವಾಸಿಯ ಕದಂಬರು (ಕ್ರಿ.ಶ 345 – 540):
- ಈ ಸಂತತಿಯ ಸ್ಥಾಪಕ : ಮಯೂರವರ್ಮ (ಮಯೂರಶರ್ಮ) (345-360) * ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)
- ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
- ಇವರ ಲಾಂಛನ : ಸಿಂಹ.
- ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬರೆಂದು ಮೂರು ಶಾಖೆಗಳಿದ್ದವು.
- ಕದಂಬರ ಮೂಲದ ಬಗ್ಗೆ ‘ಶಾಂತಿವರ್ಮನ ತಾಳಗುಂದ ಶಾಸನ’ ತಿಳಿಸುತ್ತದೆ.
- ಕನ್ನಡದ ಪ್ರಪ್ರಥಮ ಶಾಸನ – ಕಾಕುತ್ಸವರ್ಮನ ಹಮ್ಮಿಡಿ ಶಾಸನ.
● ೪) ತಲಕಾಡಿನ ಗಂಗರು (ಕ್ರಿ.ಶ 350- 999):*
- ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
- ಈ ಸಂತತಿಯ ಮೊದಲ ದೊರೆ : ದಡಿಗ (ಕ್ರಿ.ಶ. 350 -400)
- ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ.
- ಇವರ ಎರಡನೆಯ ರಾಜಧಾನಿ : ತಲಕಾಡು
- ತಲಕಾಡಿನ ಮತ್ತೊಂದು ಹೆಸರು : ತಲವನಪುರ.
- ಇವರ ಮೂರನೇ ರಾಜಧಾನಿ : ಚನ್ನಪಟ್ಟಣ ಬಳಿಯ ಮಾಕುಂದ
- ಇವರ ಲಾಂಛನ : ಆನೆ(ಮದಗಜ)
- ಈ ಸಂತತಿಯ ಅತ್ಯಂತ ಪ್ರಸಿದ್ದ ದೊರೆ : ದುರ್ವಿನೀತ (540-600) ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
- ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.
● ೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757):*
- ಈ ಸಂತತಿಯ ಸ್ಥಾಪಕ : ಜಯಸಿಂಹ
- ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)
- ಈ ಸಂತತಿಯ ಅತ್ಯಂತ ಪ್ರಸಿದ್ದ ದೊರೆ : ಇಮ್ಮಡಿ ಪುಲಕೇಶಿ (609-642)
- ಇವರ ರಾಜ ಲಾಂಛನ : ವರಹ.
- ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.
- ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು ‘ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು’ ಎನ್ನುವರು.
● ೬) ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 – 540):*
- ಈ ಸಂತತಿಯ ಸ್ಥಾಪಕ : ದಂತಿದುರ್ಗ
- ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
- ಇವರ ಲಾಂಛನ : ಗರುಡ
- ಈ ಸಂತತಿಯ ಅತ್ಯಂತ ಹೆಸರಾಂತ ದೊರೆ : ಅಮೋಘವರ್ಷ ನೃಪತುಂಗ (814-878).
- ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.
● ೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 273-1156 ಹಾಗೂ 1183 1200):*
ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
- ಇವರ ರಾಜಧಾನಿ : ಕಲ್ಯಾಣ
- ಈ ಸಂತತಿಯ ಅತ್ಯಂತ ಪ್ರಮುಖ ದೊರೆ: 6ನೇ ವಿಕ್ರಮಾದಿತ್ಯ (1076-1126)
- 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200ರ ವರೆಗೆ ರಾಜ್ಯಭಾರ ನಡೆಸಿದರು.
● ೮) ಕಲ್ಯಾಣಿಯ ಕಲಚೂರಿಗಳು (ಕ್ರಿ.ಶ 1156 – 1183):*
- ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.
- ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.
● ೯) ದ್ವಾರಸಮುದ್ರದ ಹೊಯ್ಸಳರು (ಕ್ರಿ.ಶ 985 – 1346):*
- ಈ ಸಂತತಿಯು ಮೂಲ ಪುರುಷ : ಸಳ.
- ಇವರ ರಾಜಧಾನಿ : ಹಳೆಬೀಡು ಅಥವಾ ದ್ವಾರಸಮುದ್ರವಾಗಿತ್ತು.
- ಈ ಸಂತತಿಯ ಅತ್ಯಂತ ಪ್ರಮುಖ ದೊರೆ ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152).
- ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.
● 10) ವಿಜಯನಗರ ಸಾರ್ಮಾಜ್ಯ (ಕ್ರಿ.ಶ 1336 – 1565):*
ವಿದ್ಯಾರಣ್ಯರ ಸಹಾಯದಿಂದ ಹಕ್ಕ ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.
- ಇವರ ರಾಜಧಾನಿ : ಹಂಪಿ
- ತುಳುವ ಸಂತತಿಯ ಕೃಷ್ಣದೇವರಾಯ (1519 – 1529) ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.
- 1565ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.
● ೧೧) ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 – 1527):*
- ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
- ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು : ಗುಲ್ಬರ್ಗಾ ಹಾಗೂ ಬೀದರ್.