ರಾಜ್ಯಮಟ್ಟದ ಕಾರ್ಯಾಗಾರ
ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರು, ಕೆಪೆಕ್,
ಬೆಂಗಳೂರು, ಕೃಷಿ ಮತ್ತು ತೋಟಗಾರಿಕೆ ಮಹಾ ವಿದ್ಯಾಲಯ,
ಶಿವಮೊಗ್ಗ, ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ,
ದಾವಣಗೆರೆ, ನಬಾರ್ಡ್ ಸಂಸ್ಥೆ, ದಾವಣಗೆರೆ, ಆತ್ಮ ಕಾರ್ಯಕ್ರಮ,
ದಾವಣಗೆರೆ, ತೋಟಗಾರಿಕೆ ಇಲಾಖೆ, ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ಬೆಂಗಳೂರು ವಿಭಾಗದ ರೈತ
ಉತ್ಪಾದಕ ಕಂಪನಿಗಳ ಪ್ರತಿನಿಧಿಗಳಿಗೆ ರಾಜ್ಯ ಮಟ್ಟದ
ಕಾರ್ಯಾಗಾರವನ್ನು ಮಾ.20 ರಂದು ಬೆಳಿಗ್ಗೆ 10 ಗಂಟೆಗೆ
ಕೃಷಿ ತಂತ್ರಜ್ಞರ ಸಂಸ್ಥೆ, ಶಾಮನೂರು ರಸ್ತೆ, ದಾವಣಗೆರೆ
ಇಲ್ಲಿ ಏರ್ಪಡಿಸಲಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದರಾದ
.ಜಿ.ಎಂ.ಸಿದ್ದೇಶ್ವರ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ
ಎಸ್.ಎ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ
ಹಾಗೂ ಕೃಷಿ ವಿಶ್ವ ವಿದ್ಯಾಲಯ ವಿಶ್ರಾಂತ ವಿಸ್ತರಣಾ ನಿರ್ದೇಶಕ
ಡಾ.ಜಿ.ಈಶ್ವರಪ್ಪ ಇವರು ನೂತನ ಕೃಷಿ ಕಾಯ್ದೆಗಳ ಹಸ್ತ
ಪ್ರತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ
ನಿರ್ದೇಶಕರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ರಾಜ್ಯ
ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ರೈತ ಉತ್ಪಾದಕಾ
ಸಂಸ್ಥೆ ಕುರಿತು ವಿವಿಧ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು
ತಾಂತ್ರಿಕ ಉಪನ್ಯಾಸ ನೀಡಲಿದ್ದಾರೆಂದು ಪ್ರಕಟಣೆ ತಿಳಿಸಿದೆ.