ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಇವರು ಮಾ.19
ರಿಂದ 21 ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.20 ರಂದು ಬೆಳಿಗ್ಗೆ 9 ರಿಂದ 10.30 ರವರೆಗೆ
ಹೊನ್ನಾಳಿಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳ
ಅಹವಾಲುಗಳನ್ನು ಸ್ವೀಕರಿಸುವರು.ಬೆಳಿಗ್ಗೆ 10.30 ಕ್ಕೆ
ಹಿರೇಕಲ್ಮಠದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ
ನಡೆಯುವ ರಾಜ್ಯ ಮಟ್ಟದ ಬಾಲಕಿಯರ ಕ್ರೀಡಾ ತರಬೇತಿ
ಹಾಗೂ ಆಯ್ಕೆ ಶಿಬಿರದ ಉದ್ಘಾಟನೆ ನೆರವೇರಿಸುವರು. ಬೆಳಿಗ್ಗೆ 11
ಗಂಟೆಗೆ ನ್ಯಾಮತಿ ಪಟ್ಟಣದ ಮಹಾಂತೇಶ ಕಲ್ಯಾಣ ಮಂಟಪದಲ್ಲಿ
ನಡೆಯುವ ಭಾರತೀಯ ಜನತಾ ಪಕ್ಷದ ವತಿಯಿಂದ
ಆಯೋಜಿಸಿರುವ ಹೊನ್ನಾಳಿ ಮಂಡಲದ ಪ್ರಶಿಕ್ಷಣ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.15ಕ್ಕೆ
ನ್ಯಾಮತಿ ತಾಲ್ಲೂಕಿನ ಕೊನಾಯಕನಹಳ್ಳಿಯ ಗ್ರಾಮದ
ಶಾಲೆಯಿಂದ ದೇವಸ್ಥಾನದ ಮುಂಭಾಗದವರೆಗೆ ಸಿ.ಸಿ ರಸ್ತೆ
ನಿರ್ಮಾಣ ಕಾಮಗಾರಿಯ ಉದ್ಘಾಟನೆ ಹಾಗೂ ತುಂಗಭದ್ರಾ ನದಿಗೆ
ಹೊಳೆಮೆಟ್ಟಿಲು ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ನೆರೆವೇರಿಸುವರು. 12.45ಕ್ಕೆ ಬಳ್ಳೇಶ್ವರ ಗ್ರಾಮದ
ಬಾಳಲಿಂಗೇಶ್ವರ ದೇವಸ್ಥಾನದಿಂದ ಶಾಲೆ ರಸ್ತೆಯವರೆಗೆ
ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಯ ಉದ್ಘಾಟಿಸುವರು ಹಾಗೂ
ತುಂಗಾಭದ್ರಾ ನದಿಗೆ ಹೊಳೆಮೆಟ್ಟಿಲು ಕಾಮಗಾರಿಗೆ
ಶಂಕುಸ್ಥಾಪನೆ ನೆರವೇರಿಸುವರು. 1.15ಕ್ಕೆ
ಹೊಳೆಹರಳಹಳ್ಳಿ ಗ್ರಾಮದ ಪ.ಜಾತಿ ಕಾಲೋನಿಯಲ್ಲಿ ಸಿ.ಸಿ
ರಸ್ತೆ &ಚಿmಠಿ; ಸಿ.ಸಿ ಚರಂಡಿ ಮತ್ತು ಪ.ಪಂ ಕಾಲೋನಿಯಲ್ಲಿ ಸಿ.ಸಿ.ರಸ್ತೆ
ನಿರ್ಮಾಣ, ಸರ್ಕಾರಿ ಉರ್ದು ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ
ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ
ನಿರ್ಮಾಣ ಕಾಮಗಾರಿಗಳ ಉದ್ಘಾಟನೆಯನ್ನು ನೆರೆವೇರಿಸುವರು.
ಮಧ್ಯಾಹ್ನ 1.45ಕ್ಕೆ ಬಲಮುರಿ ಗ್ರಾಮದ ರಸ್ತೆಗಳಿಗೆ
ಸಿ.ಸಿ.ರಸ್ತೆ ನಿರ್ಮಾಣ ಹಾಗೂ ಗ್ರಾಮ ಪ.ಪಂ ಕಾಲೋನಿಯಲ್ಲಿ ಸಿ.ಸಿ
ರಸ್ತೆ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸುವರು. 3.15ಕ್ಕೆ
ಸೋಮನಮಲ್ಲಾಪುರ ಗ್ರಾಮದಲ್ಲಿ ಸಾರ್ವಜನಿಕ
ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ
ನೆರೆವೇರಿಸುವರು. 3.45ಕ್ಕೆ ದೊಡ್ಡೇರಹಳ್ಳಿ ಗ್ರಾಮದ
ಮಳೆಯಿಂದ ಹಾನಿಗೊಳಗಾದ ರಸ್ತೆಗಳಿಗೆ ಸಿ.ಸಿ.ರಸ್ತೆ ನಿರ್ಮಾಣ
ಹಾಗೂ ಪ.ಪಂಗಡದ ಕಾಲೋನಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣ
ಕಾಮಗಾರಿಯ ಉದ್ಘಾಟಿಸುವರು. 4.15ಕ್ಕೆ ಹತ್ತೂರು ಗ್ರಾಮದ
ಕಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ
ಕಾಮಗಾರಿಯ ಉದ್ಘಾಟಿಸುವರು. ಸಂಜೆ 6 ಗಂಟೆಗೆ ಹೊನ್ನಾಳಿಗೆ
ತೆರಳಿ ವಾಸ್ತವ್ಯ ಮಾಡುವರು.
ಮಾ.21 ರಂದು ಹೊನ್ನಾಳಿಯಲ್ಲಿ ಬೆಳಿಗ್ಗೆ 9 ಗಂಟೆಗೆ
ಸಾರ್ವಜನಿಕರ ಕುಂದುಕೊರತೆಗಳ ಆಹ್ವಾಲುಗಳನ್ನು
ಸ್ವೀಕರಿಸುವರು. 10 ಗಂಟೆಗೆ ಹಿರೇಕಲ್ಮಠದಲ್ಲಿ ವೀರಶೈವ
ಪುರೋಹಿತ ಸಂಘದ ವತಿಯಿಂದ ಆಯೋಜಿಸಿರುವ
ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.30ಕ್ಕೆ
ಗೊಲ್ಲರಹಳ್ಳಿ ಗ್ರಾಮದಲ್ಲಿ ಸಿ.ಸಿ ರಸ್ತೆ ನಿರ್ಮಾಣ
ಕಾಮಗಾರಿಯನ್ನು ಉದ್ಘಾಟಿಸುವರು. ಬೆಳಿಗ್ಗೆ 11 ಗಂಟೆಗೆ
ಮಾಸಡಿ ಗ್ರಾಮದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿಯ ಉದ್ಘಾಟನೆ
ನೆರವೇರಿಸುವರು. ಬೆಳಿಗ್ಗೆ 11.30 ಕ್ಕೆ ಅರಕೆರೆ ಗ್ರಾಮದಲ್ಲಿ ಸಿ.ಸಿ.
ರಸ್ತೆ ನಿರ್ಮಾಣ ಕಾಮಗಾರಿಯ ಉದ್ಘಾಟನೆ ನೆರವೇರಿಸುವರು.
ಮಧ್ಯಾಹ್ನ 12 ಗಂಟೆಗೆ ನರಸಗೊಂಡನಹಳ್ಳಿ ಗ್ರಾಮದಲ್ಲಿ
ಮಳೆಯಿಂದ ಹಾನಿಗೊಳಗಾದ ರಸ್ತೆಗಳಿಗೆ ಸಿ.ಸಿ.ರಸ್ತೆ ನಿರ್ಮಾಣ
ಕಾಮಗಾರಿಯ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 1.30 ಕ್ಕೆ
ಕೆಂಗಲಹಳ್ಳಿಯಲ್ಲಿ ಶ್ರೀ ಚಂದ್ರಣ್ಣ ಇವರ ಮನೆಗೆ ಭೇಟಿ
ನೀಡುವರು. ಮಧ್ಯಾಹ್ನ 3 ಗಂಟೆಗೆ ನ್ಯಾಮತಿ ಪಟ್ಟಣದ
ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನಡೆಯುವ ಭಾರತೀಯ
ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಹೊನ್ನಾಳಿ
ಮಂಡಲದ ಪ್ರಶಿಕ್ಷಣ ಕಾರ್ಯಕ್ರಮದ ಸಮಾರೋಪ
ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4.30 ಕ್ಕೆ
ಹೊನ್ನಾಳಿಗೆ ಪ್ರಯಾಣಿಸುವರು. ಸಂಜೆ 5 ಗಂಟೆಗೆ
ಹೊನ್ನಾಳಿಯಿಂದ ಹೊರಟು ರಾತ್ರಿ 10 ಗಂಟೆಗೆ ಬೆಂಗಳೂರು
ತಲುಪುವರು ಎಂದು ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳ ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.