ಸಾಸ್ವೆಹಳ್ಳಿ : ಜನರು ಸರ್ಕಾರದ ಕೆಲಸಗಳಿಗೆ ತಮ್ಮ ದಿನ
ನಿತ್ಯದ ಕಾರ್ಯಗಳನ್ನ ಬಿಟ್ಟು ಕಚೇರಿಗಳಿಗೆ
ಅಲೆಯುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಡಳಿವನ್ನ ತಮ್ಮ
ಗ್ರಾಮದ ಕಡೆ ಕರೆತಂದು ವಾಸ್ತವ್ಯದ ರೂಪದಲ್ಲಿ
ಫಲಾನುಭವಿಗಳಿಗೆ ಸ್ಥಳದಲ್ಲೇ ಪರಿಹಾರ ಹಾಗೂ
ಮಾಹಿತಿಯನ್ನ ನೀಡುವುದರಿಂದ ಇಂತಹ
ಕಾರ್ಯಕ್ರಮಗಳು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆ
ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.
ರೇಣುಕಾಚಾರ್ಯ ತಿಳಿಸಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ
ತಾಲ್ಲೂಕು ದಂಡಾಧಿಕಾರಿಗಳ ವಾಸ್ತವ್ಯ ಕಾರ್ಯಕ್ರಮದ
ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ
ಅಧಿಕಾರಿಗಳು ಕೆಲಸಕ್ಕಾಗಿ ಬಂದ ಫಲಾನುಭವಿಗಳಿಗೆ
ದರ್ಪತೋರಬೇಡಿ ಸಹನೆಯಿಂದ ಸಮಸ್ಯೆಗಳನ್ನ ಆಲಿಸಿ ಪರಿಹಾರ
ತಿಳಿಸಬೇಕು ಅಧಿಕಾರ ಶಾಶ್ವತ ಅಲ್ಲ ನಾವು ಜನರ ಸೇವಕರಾಗಿ
ಕೆಲಸ ಮಾಡಿದಾಗ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ
ಯೋಜನೆ ನೇರವಾಗಿ ತಲುಪಬೇಕು ಎಂದರು.
ತಾಲ್ಲೂಕು ದಂಡಾಧಿಕಾರಿ ಬಸವನಗೌಡ ಕೊಟ್ಟೂರ
ಮಾತನಾಡಿ ಜಿಲ್ಲಾಧಿಕಾರಿಗಳು ತಿಂಗಳಿನ 3ನೇ ಶನಿವಾರ ಗ್ರಾಮ
ವಾಸ್ತವ್ಯವನ್ನು ಹಮ್ಮಿಕೊಂಡಿದ್ದು ಅದೇ ರೀತಿ ಈ
ಗ್ರಾಮದಲ್ಲಿಯೂ ಸಹ ಗ್ರಾಮ ವಾಸ್ತವ್ಯವನ್ನ ಅವರ
ಅನುಪಸ್ಥಿತಿಯಲ್ಲಿ ನಿರ್ವಹಿಸುತ್ತಿದ್ದು ಬಹಳ ದಿನಗಳಿಂದ
ನೆನೆಗುದಿಗೆ ಬಿದ್ದಿರುವ ಪೌತಿಖಾತೆ ಬದಲಾವಣೆ ವಿಧವಾ ವೇತನ,
ಅಂಗವಿಕಲರ ವೇತನ ಸೇರಿದಂತೆ ಸಾಮಾಜಿಕ ಭದ್ರತೆಯ
ಯೋಜನೆಗಳ ಆದೇಶ ಪತ್ರವನ್ನ 33 ಫಲಾನುಭವಿಗಳಿಗೆ
ನೀಡಿದ್ದು ಉಳಿದ ಫಲಾನುಭವಿಗಳನ್ನ ಗುರುತಿಸಿ
ನೀಡಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ
ಹೊರವಲಯದ ಶ್ರೀ ವೆಂಕಟೇಶ್ವರ ದೇವಸ್ಥಾನದ
ಆವರಣದಿಂದ ತೆರೆದ ಎತ್ತಿನ ಗಾಡಿಯಲ್ಲಿ
ಕುಂಭಮೇಳಗಳೊಂದಿಗೆ ಮೆರವಣಿಗೆಯನ್ನ ಕೇರಿಗಳ
ಮುಖಾಂತರ ಸಾಗಿ ಶ್ರೀ ಬೃಹನ್ಮಠಕ್ಕೆ ತಲುಪಿ ಅನಂತರ ಶ್ರೀ
ಹಾಲಸ್ವಾಮಿ ಸಮುದಾಯ ಭವನದಲ್ಲಿ ಕಾರ್ಯಕ್ರಮಕ್ಕೆ
ಭಾಗವಹಿಸಿದರು. ಮಧ್ಯಾಹ್ನ ಬುಳ್ಳಾಪುರದ ಪ್ರತಿ
ಮನೆಗಳನ್ನು ಭೇಟಿ ನೀಡಿ ಸಮಸ್ಯೆಗಳನ್ನು ಅಲ್ಲಿಯೇ ಆಲಿಸಿ
ಅರ್ಜಿ ಪಡೆದು ಸಮಸ್ಯೆ ಬಗೆಹರಿಸುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ,
ಉಪಾಧ್ಯಕ್ಷ ಎಚ್.ಟಿ. ರಮೇಶ್, ಸದಸ್ಯರಾದ ಶ್ರೀನಿವಾಸ್, ರೇಖಾ

ಸೇರಿದಮತೆ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಫೋಟೋ ಸುದ್ದಿ 1 : ರಾಂಪುರ ಗ್ರಾಮದ ಶ್ರೀ
ಹಾಲಸ್ವಾಮಿ ಸಮುದಾಯ ಭವನದಲ್ಲಿ ಗ್ರಾಮ ವಾಸ್ತವ್ಯದ
ಕಾರ್ಯಕ್ರಮದಲ್ಲಿ 33 ಫಲಾನುಭವಿಗಳಿಗೆ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.
ರೇಣುಕಾಚಾರ್ಯ ಸಾಮಾಜಿಕ ಭದ್ರತಾ ಪತ್ರಗಳನ್ನ
ವಿತರಿಸಿದರು.

Leave a Reply

Your email address will not be published. Required fields are marked *