ದಾವಣಗೆರೆ.ಮಾ.20
ಮಹಾನಗರಪಾಲಿಕೆಯ ವಾರ್ಡ್ ನಂ.20 ಮತ್ತು 22 ರಲ್ಲಿ
ರಾಜೀನಾಮೆಯಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ
ಚುನಾವಣೆ ನಡೆಸಲಾಗುತ್ತಿದ್ದು, 02 ಸ್ಥಾನಗಳಿಗೆ ಒಟ್ಟು 07
ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಂತಾಗಿದೆ.
ವಾರ್ಡ್ ಸಂಖ್ಯೆ 20 ರಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ ಪಕ್ಷದ
ಅಭ್ಯರ್ಥಿಗಳು ಸೇರಿದಂತೆ ಒಟ್ಟು 02 ಅಭ್ಯರ್ಥಿಗಳು ಚುನಾವಣಾ
ಕಣದಲ್ಲಿದ್ದಾರೆ.
ವಾರ್ಡ್ ಸಂಖ್ಯೆ 22 ರಲ್ಲಿ ಅಭ್ಯರ್ಥಿಗಳು ಕಾಂಗ್ರೆಸ್-01, ಬಿ.ಜೆ.ಪಿ-01,
ಎ.ಐ.ಎಂ.ಇ.ಐ.ಎಂ-01, ಪಕ್ಷೇತರ-02 ಸೇರಿದಂತೆ ಒಟ್ಟು 05
ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನ ಮಾ. 29 ರಂದು ಬೆಳಿಗ್ಗೆ 07 ರಿಂದ ಸಂಜೆ 5
ಗಂಟೆಯವರೆಗೆ ನಡೆಯಲಿದೆ ಎಂದು ಅಪರ
ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.