ಅರ್ಜಿ ಆಹ್ವಾನ
ದಾವಣಗೆರೆ, ಮಾ.22
ತೋಟಗಾರಿಕೆ ಇಲಾಖೆಯು ಚಿತ್ರದುರ್ಗ ಜಿಲ್ಲೆಯ
ಹಿರೆಗುಂಟನೂರು ಹೋಬಳಿ ವ್ಯಾಪ್ತಿಯ ಐಯ್ಯನಹಳ್ಳಿ
ಗ್ರಾಮದಲ್ಲಿನ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ
ಕೇಂದ್ರದಲ್ಲಿ 2020-22 ನೇ ಸಾಲಿನಲ್ಲಿ 2021 ರ ಮೇ 03 ರಿಂದ 2022 ರ
ಫೆಬ್ರವರಿವರೆಗೆ 10 ತಿಂಗಳ ಅವಧಿಗೆ ವಸತಿ ಸಹಿತವಾಗಿ ರೈತರ
ಮಕ್ಕಳಿಗೆ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಿದೆ.
ಆಯ್ಕೆಯಾದ ಪುರುಷ ಶಿಬಿರಾರ್ಥಿಗಳಿಗೆ ಜಿಲ್ಲೆಯ
ಐಯ್ಯನಹಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಮತ್ತು
ಮಹಿಳಾ ಶಿಬಿರಾರ್ಥಿಗಳಿಗೆ ಮೈಸೂರು ಜಿಲ್ಲೆಯ
ರಂಗಸಮುದ್ರದಲ್ಲಿರುವ ಪ್ರತ್ಯೇಕ ಮಹಿಳಾ ತರಬೇತಿ
ಕೇಂದ್ರದಲ್ಲಿ ತರಬೇತಿ ನೀಡಲಾಗುವುದು.
ತರಬೇತಿಗೆ ದಾವಣಗೆರೆ ಜಿಲ್ಲೆಗೆ ಪುರುಷ ವಿಭಾದಲ್ಲಿ ಇತರೆ 05
ಮತ್ತು ಪರಿಶಿಷ್ಟ ಜಾತಿ 02 ಒಟ್ಟು 07 ಹಾಗೂ ಮಹಿಳಾ ವಿಭಾಗದಲ್ಲಿ
ಇತರೆ 02 ಮತ್ತು ಪರಿಶಿಷ್ಟ ಜಾತಿ 01 ಒಟ್ಟು 03 ಗುರಿ
ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಕನಿಷ್ಟ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು.
ತರಬೇತಿ ಬಯಸುವ ಅಭ್ಯರ್ಥಿಯ
ತಂದೆ/ತಾಯ/ಪೋಷಕರು ಕಡ್ಡಾಯವಾಗಿ ಜಮೀನು
ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ
ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು
ಕಡ್ಡಾಯವಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ
ಪಂಗಡದವರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 33 ವರ್ಷ
ಹಾಗೂ ಇತರರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಟ 30 ವರ್ಷ
ವಯೋಮಿತಿ ನಿಗದಿಗೊಳಿಸಲಾಗಿದೆ.
ಅರ್ಜಿಗಳನ್ನು ತೋಟಗಾರಿಕೆ ಉಪ ನಿರ್ದೇಶಕರು(ಜಿ.ಪಂ)
ದಾವಣಗೆರೆ/ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
(ರಾವ) ದಾವಣಗೆರೆ ಇವರ ಕಚೇರಿಯಲ್ಲಿ ಅಥವಾ ಇಲಾಖೆಯ
ವೆಬ್ಸೈಟ್ hಣಣಠಿs://hoಡಿಣiಛಿuಟಣuಡಿeಜiಡಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಮಾರ್ಚ್ 24 ರಿಂದ
ಏಪ್ರಿಲ್ 17 ರವರೆಗೆ ಕಚೇರಿ ವೇಳೆಯಲ್ಲಿ ಪಡೆಯಬಹುದು.
ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ30, ಪರಿಶಿಷ್ಟ
ಜಾತಿ/ಪಂಗಡದ ಅಭ್ಯರ್ಥಿಗಳಿಗೆ ರೂ.15 ನ್ನು ಇಂಡಿಯನ್
ಪೋಸ್ಟಲ್ ಆರ್ಡರ್(ಐಪಿಓ)/ಡಿಮ್ಯಾಂಡ್ ಡ್ರಾಫ್ಟ್(ಡಿಡಿ) ಅನ್ನು ಆeಠಿuಣಥಿ
ಆiಡಿeಛಿಣoಡಿ oಜಿ ಊoಡಿಣiಛಿuಟಣuಡಿe (ZP), ಆಚಿvಚಿಟಿಚಿgeಡಿe ಇವರ ಹೆಸರಿನಲ್ಲಿ ಪಡೆದು
ಉಪನಿರ್ದೇಶಕರ ಕಛೆರಿ/ಹಿರಿಯ ಸಹಾಯಕ ನಿರ್ದೇಶಕರ
ಕಚೇರಿ, ದಾವಣಗೆರೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ರಾವ),
ದಾವಣಗೆರೆ ಇವರು ಕಚೇರಿಯನ್ನು ಕಚೇರಿ ವೇಳೆಯಲ್ಲಿ
ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕ
ಲಕ್ಷ್ಮೀಕಾಂತ್ ಬೊಮ್ಮೊನ್ನಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.