ಕೋವಿಡ್ ಹೋಮ್ ಐಸೋಲೆಷನ್ ಇರುವ ಮನೆಗೆ ಸ್ಟಿಕರ್

ಅಂಟಿಸಲು ಡಿ.ಸಿ ಸೂಚನೆ

ಕೋವಿಡ್ ವ್ಯಾಪಕ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ
ಸೋಂಕು ದೃಢಪಟ್ಟು ಹೋಂ ಐಸೋಲೇಷನ್‍ನಲ್ಲಿ ಇರುವವರ
ಮನೆಗೆ ‘ಕೋವಿಡ್ ಹೋಂ ಐಸೋಲೇಷನ್’ ಎಂಬ ಬರಹವಳ್ಳ ಸ್ಟಿಕರ್
ಅಂಟುಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕಚೇರಿ ಸಭಾಂಗದಲ್ಲಿ ಮಂಗಳವಾರ
ಏರ್ಪಡಿಸಿದ ಜಿಲ್ಲೆಯ ವೈದ್ಯಕೀಯ ತಜ್ಞರ ಸಮಿತಿ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ದಾವಣಗೆರೆ ನಗರದಲ್ಲಿ ಕೋವಿಡ್ ಸೋಂಕು
ದೃಢಪಟ್ಟ 28 ಜನ ಹೋಂ ಐಸೋಲೇಷನ್‍ನಲ್ಲಿ ಇದ್ದು, ಇವರು
ಹೊರಗಡೆ ಎಲ್ಲಿಯೂ ಓಡಾಡದೆ, ಸಮರ್ಪಕವಾಗಿ ಹೋಂ
ಕ್ವಾರಂಟೈನ್‍ನಲ್ಲಿ ಇರಬೇಕು. ಇವರಿಂದ ಬೇರೆಯವರಿಗೆ
ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ
ಕೈಗೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಎಚ್ಚರಿಕೆ ವಹಿಸುವ
ಸಲುವಾಗಿ, ಹಾಗೂ ಆರೋಗ್ಯ ಕಾರ್ಯಕರ್ತರು ಸಮರ್ಪಕ
ವೈದ್ಯಕೀಯ ನೆರವು ನೀಡುವ ಸಲುವಾಗಿ, ಹೋಂ ಐಸೋಲೇಷನ್
ಇರುವವರ ಮನೆಗೆ ‘ಕೋವಿಡ್ ಹೋಂ ಐಸೋಲೇಷನ್’ ಎಂಬ
ಬರಹವುಳ್ಳ ಸ್ಟಿಕರ್ ಅಂಟಿಸುವಂತೆ ಜಿಲ್ಲಾಧಿಕಾರಿಗಳು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಸಿಟಿವಿಟಿ ಹೆಚ್ಚಳ ಆತಂಕ : ಕಳೆದ ತಿಂಗಳು ಕಡಿಮೆ
ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಕೋವಿಡ್ ಸೋಂಕು
ಪ್ರಕರಣಗಳು ಮಾರ್ಚ್ ಮೂರನೆ ವಾರದಲ್ಲಿ
ಹೆಚ್ಚಳವಾಗಿರುವುದು ಕಂಡುಬಂದಿದೆ. ಮಾರ್ಚ್ ಎರಡನೆ ವಾದಲ್ಲಿ
ಕೋವಿಡ್ ಪಾಸಿಟಿವ್ ಪ್ರಕರಣಗಳು 23 ವರದಿಯಾಗಿದ್ದು, ಪಾಸಿಟಿವಿಟಿ
ಪ್ರಮಾಣ ಶೇ. 0.19 ರಷ್ಟು ಇತ್ತು. ಇದೀಗ ಮಾರ್ಚ್ ಮೂರನೆ
ವಾರದಲ್ಲಿ 40 ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ಪ್ರಮಾಣ
0.29 ಕ್ಕೆ ಹೆಚ್ಚಳವಾಗಿರುವುದು ಆತಂಕಕಾರಿಯಾಗಿದೆ. ಜಿಲ್ಲೆಯಲ್ಲಿ
ನಿಗದಿಗಿಂತಲೂ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು
ನಡೆಸಲಾಗುತ್ತಿದೆ. ರೋಗ ಲಕ್ಷಣ ಇರುವವರು ಪರೀಕ್ಷೆಗೆ
ಒಳಪಡುತ್ತಿದ್ದಾರೆ ಹೀಗಾಗಿ ಪರೀಕ್ಷೆಯಲ್ಲಿ ಯಾವುದೇ

ತೊಂದರೆ ಇಲ್ಲ. ಶಾಲಾ ಮಕ್ಕಳು ಮತ್ತು ಹಾಸ್ಟೆಲ್ ಮಕ್ಕಳಿಗೆ
ನಿಯಮಿತವಾಗಿ ಕೋವಿಡ್ ಪರೀಕ್ಷೆ ನಡೆಸುವಂತೆ ಸರ್ಕಾರ
ಸೂಚನೆ ನೀಡಿದ್ದು, ಅದರಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ
ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಹೇಳಿದರು. ಪ್ರತಿಕ್ರಿಯಿಸಿದ
ಜಿಲ್ಲಾಧಿಕಾರಿಗಳು, ಪರೀಕ್ಷೆಗೆ ಮಾದರಿಯನ್ನು ಸಮರ್ಪಕವಾಗಿ,
ಕ್ರಮಬದ್ಧವಾಗಿ ಸಂಗ್ರಹಿಸುತ್ತಿಲ್ಲ ಎಂಬ ದೂರು ಇದೆ. ಹೀಗಾಗಿ
ಮಾದರಿ ಸಂಗ್ರಹಿಸುವವರು, ಕ್ರಮಬದ್ಧವಾಗಿ ಪರೀಕ್ಷೆಗೆ ಮಾದರಿ
ಸಂಗ್ರಹಿಸುವಂತೆ ಕ್ರಮ ಕೈಗೊಳ್ಳಬೇಕು. ಸೋಂಕಿತರ
ಕನಿಷ್ಟ 15 ಜನ ಪ್ರಾಥಮಿಕ ಹಾಗೂ ಕನಿಷ್ಟ 40 ದ್ವಿತೀಯ
ಸಂಪರ್ಕಿತರ ಪರೀಕ್ಷೆ ಮಾಡಬೇಕು. ಸೋಂಕಿತರ ಪ್ರಯಾಣ
ವಿವರವನ್ನು ಸಂಗ್ರಹಿಸಬೇಕು. ಒಂದು ವೇಳೆ ವಿವರ ನೀಡಲು
ನಿರಾಕರಿಸಿದರೆ ಅಥವಾ ಅಸಹಾಕಾರ ತೋರಿದರೆ ಪೊಲೀಸ್ ನೆರವು
ಪಡೆಯುವಂತೆ ಸೂಚನೆ ನೀಡಿದರು.
ರೋಗ ಲಕ್ಷಣಗಳಿದ್ದಲ್ಲಿ ಕೂಡಲೆ ಪರೀಕ್ಷೆಗೆ ಒಳಪಡಿ :
ಜ್ವರ, ಕೆಮ್ಮು, ನೆಗಡಿ, ಎದೆ ಉರಿ, ಎದೆನೋವು ಮುಂತಾದ ರೋಗ
ಲಕ್ಷಣ ಕಂಡುಬಂದಲ್ಲಿ, ಸಾರ್ವಜನಿಕರು ನಿರ್ಲಕ್ಷ್ಯ ಮಾಡದೆ ಅಥವಾ
ಸಾಮಾನ್ಯ ಚಿಕಿತ್ಸೆಗೆ ಒಳಗಾಗದೆ, ಕೂಡಲೆ ಸಮೀಪದ
ಆಸ್ಪತ್ರೆಗೆ ತೆರಳಿ ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಬೇಕು. ನಿರ್ಲಕ್ಷ್ಯ
ತೋರಿ, ತಡವಾಗಿ ಆಸ್ಪತ್ರೆಗೆ ಬಂದಲ್ಲಿ, ಅಂತಹವರು ತೀವ್ರ
ಆರೋಗ್ಯ ಸಮಸ್ಯೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ.
ಹೀಗಾಗಿ ಸಾರ್ವಜನಿಕರು ನಿರ್ಲಕ್ಷ್ಯ ತೋರಬಾರದು. ಜಿಲ್ಲೆಯಲ್ಲಿ
ಯಾವುದೇ ಮರಣ ಪ್ರಕರಣ ಸಂಭವಿಸಬಾರದು ಎಂಬುದು
ಜಿಲ್ಲಾಡಳಿತದ ಆಶಯವಾಗಿದ್ದು, ಸಾರ್ವಜನಿಕರು ಪರೀಕ್ಷೆಗೆ
ಒಳಗಾಗಲು ಮುಂದಾಗಬೇಕು, ತಪ್ಪದೆ ಮಾಸ್ಕ್ ಧರಿಸಬೇಕು,
ಜನನಿಬಿಡ ಸ್ಥಳಗಳಿಂದ ಆದಷ್ಟು ದೂರವಿರಬೇಕು ಎಂದು
ಮನವಿ ಮಾಡಿದರು.
ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ : ಕೋವಿಡ್
ಪ್ರಕರಣಗಳು ರಾಜ್ಯ ಹಾಗೂ ದೇಶದ ವಿವಿಧೆಡೆ
ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಎಂತಹದೇ ಪರಿಸ್ಥಿತಿ ಬಂದರೂ,
ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕಿದೆ.
ಕಳೆದ ವರ್ಷ ಹೆಚ್ಚು ಪ್ರಕರಣಗಳು ವರದಿಯಾಗುವ
ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನೇ
ಮತ್ತೆ ಕೈಗೊಳ್ಳಬೇಕಾಗಿ ಬರಬಹುದಾಗಿದ್ದು, ಎಲ್ಲ
ಆಸ್ಪತ್ರೆಗಳು ತಮ್ಮ ಗರಿಷ್ಠ ಚಿಕಿತ್ಸಾ ಸಾಮಥ್ರ್ಯವನ್ನು
ಸಿದ್ಧವಾಗಿರಿಸಿಕೊಳ್ಳಬೇಕು. ಜಿಲ್ಲಾ ಆಸ್ಪತ್ರೆಗೆ ಕಳೆದ ಬಾರಿ ಕೋಟಿ
ಗಟ್ಟಲೆ ಹಣ ಖರ್ಚು ಮಾಡಿ ವಿವಿಧ ಉಪಕರಣಗಳನ್ನು
ಪೂರೈಸಿದ್ದು, ಅವು ಎಲ್ಲವೂ ಸುಸ್ಥಿತಿಯಲ್ಲಿರುವಂತೆ
ನೋಡಿಕೊಳ್ಳಬೇಕು. ಇಲ್ಲಿನ ಬಾಪೂಜಿ, ಎಸ್‍ಎಸ್., ಸಿಟಿ, ಆರೈಕೆ,
ಆಶ್ರಯ, ಸಂಜೀವಿನಿ, ಸುಕ್ಷೇಮ ಸೇರಿದಂತೆ ವಿವಿಧ ಆಸ್ಪತ್ರೆಗಳು
ಕೂಡ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು ಎಂದು ಮನವಿ
ಮಾಡಿದರು.
ಔಷಧಿ ಕೊರತೆಯಾಗಬಾರದು : ಜಿಲ್ಲಾ ಆಸ್ಪತ್ರೆಯ ಕೆಲ ತಜ್ಞ
ವೈದ್ಯರು, ಆಸ್ಪತ್ರೆಯಲ್ಲಿ ಕೆಲ ಔಷಧಿಗಳ ಕೊರತೆ ಇದೆ,
ಸ್ಯಾನಿಟೈಸರ್ ಪೂರೈಕೆ ಸಮರ್ಪಕವಾಗಿ ದೊರೆಯಬೇಕು
ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು
ಪ್ರತಿಕ್ರಿಯಿಸಿ, ಯಾವುದೇ ಔಷಧಿಯ ಕೊರತೆ ಆಸ್ಪತ್ರೆಯಲ್ಲಿ
ಕಂಡುಬರಬಾರದು, ಸಾಕಷ್ಟು ಅಗತ್ಯ ಔಷಧಿ ದಾಸ್ತಾನು

ಮಾಡಿಟ್ಟುಕೊಳ್ಳಬೇಕು. ಬರುವ ದಿನಗಳಲ್ಲಿ ಯಾವುದೇ ಔಷಧಿ
ಕೊರತೆ ಬಗ್ಗೆ ದೂರು ಬಂದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರ ವಿರುದ್ಧ
ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ
ನೀಡಿದರು. ಜಿಲ್ಲೆಯಲ್ಲಿರುವ ಸಕ್ರಿಯ ಕೋವಿಡ್ ಸೋಂಕು
ರೋಗಿಗಳ ಆರೋಗ್ಯ ಸ್ಥಿತಿಗತಿಯ ದೈನಂದಿನ
ವರದಿಯನ್ನು ಡಿಹೆಚ್‍ಒ ಅವರು ನಿತ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಪಂ
ಸಿಇಒ ಗೆ ಸಲ್ಲಿಸುವುದು ಕಡ್ಡಾಯ ಎಂದು ತಾಕೀತು ಮಾಡಿದರು.
ದಂಡ ವಿಧಿಸಲು ಗುರಿ ನಿಗದಿ : ಕೋವಿಡ್ ಹರಡುವುದನ್ನು
ತಡೆಗಟ್ಟಲು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ್ದು,
ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದವರನ್ನು ಪತ್ತೆಹಚ್ಚಿ
ದಂಡ ವಿಧಿಸಲು ಜಿಲ್ಲಾಧಿಕಾರಿಗಳು ಗುರಿ ನಿಗದಿಪಡಿಸಿ ಸೂಚನೆ
ನೀಡಿದರು. ಪ್ರತಿ ಪೊಲೀಸ್ ಠಾಣೆಗೆ ನಿತ್ಯ 100 ಜನ ಮಾಸ್ಕ್
ರಹಿತರನ್ನು ಪತ್ತೆಹಚ್ಚಿ ದಂಡ ವಿಧಿಸಲು ಗುರಿ
ನಿಗದಿಪಡಿಸಲಾಯಿತು. ಅದೇ ರೀತಿ ಪ್ರತಿ ವಾರ್ಡ್‍ಗೆ 10, ಪಟ್ಟಣ
ಪ್ರದೇಶದಲ್ಲಿ ನಿತ್ಯ 100, ಗ್ರಾಮ ಪಂಚಾಯತ್ ಮಟ್ಟದಲ್ಲೂ
ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಅಗತ್ಯ ಕ್ರಮ
ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ್, ಕೋವಿಡ್ ಜಿಲ್ಲಾ
ನೋಡಲ್ ಅಧಿಕಾರಿ ಪ್ರಮೋದ್, ಅಪರ ಜಿಲ್ಲಾಧಿಕಾರಿ ಪೂಜಾರ್
ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್,
ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಚಿಗಟೇರಿ ಜಿಲ್ಲಾ ಆಸ್ಪತ್ರೆ
ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್, ತಜ್ಞ ವೈದ್ಯರುಗಳಾದ ಡಾ.
ಬಾಲು, ಡಾ. ಸುರೇಂದ್ರ, ಸೇರಿದಂತೆ ವಿವಿಧ ಆಸ್ಪತ್ರೆಗಳ ತಜ್ಞ
ವೈದ್ಯರುಗಳು ಉಪಸ್ಥಿತರಿದ್ದು ಅಗತ್ಯ ಸಲಹೆಗಳನ್ನು
ನೀಡಿದರು.

Leave a Reply

Your email address will not be published. Required fields are marked *