ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಇಲಾಖೆ, ದಾವಣಗೆರೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳು
ಇವರ ಸಂಯುಕ್ತಾಶ್ರಯದಲ್ಲಿ ಮಾ.24 ರಂದು ಬೆಳಿಗ್ಗೆ 10.30
ಕ್ಕೆ ಕುವೆಂಪು ಕನ್ನಡ ಭವನ ದಾವಣಗೆರೆ ಇಲ್ಲಿ ವಿಶ್ವ
ಕ್ಷಯರೋಗ ದಿನ-2021ನ್ನು ಆಯೋಜಿಸಲಾಗಿದೆ.
 ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಧಿಕಾರಿ ಡಾ.ನಾಗರಾಜ ಅಧ್ಯಕ್ಷತೆ ವಹಿಸುವರು. ಜಿ.ಪಂ.ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ ಮಹಾಂತೇಶ ಬಿ
ದಾನಮ್ಮನವರ ಐ.ಇ.ಸಿ ಸಾಮಾಗ್ರಿ ಬಿಡುಗಡೆ ಮತ್ತು ಟಿ.ಬಿ
ಚಾಂಪಿಯನ್ಸ್‍ಗಳನ್ನು ಸನ್ಮಾನಿಸುವರು.

  ಮುಖ್ಯ ಅತಿಥಿಗಳಾಗಿ ಮಹಾನಗರಪಾಲಿಕೆಯ ಮಹಾಪೌರರಾದ
ಎಸ್.ಟಿ.ವೀರೇಶ್, ದಾವಣಗೆರೆ ಹರಿಹರ ನಗರ ಅಭಿವೃದ್ದಿ
ಪ್ರಾಧಿಕಾರದ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಸಿ.ಜಿ.
ಆಸ್ಪತ್ರೆಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ
ಡಾ.ಜಯಪ್ರಕಾಶ.ಎನ್, ಜೆ.ಜೆ.ಎಂ ವೈದ್ಯಕೀಯ
ಮಹಾವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರು
ಮತ್ತು ನೋಡೆಲ್ ಅಧಿಕಾರಿ ಹಾಗೂ ಸ್ಟೇಟ್ ಟಾಸ್ಕ್ ಪೊರ್ಸ್(ಟಿ.ಬಿ)
ಅಧ್ಯಕ್ಷರಾದ ಡಾ.ಬಾಲು.ಪಿ.ಎಸ್, ಮಹಿಳಾ ಮತ್ತು ಮಕ್ಕಳ
ಆಸ್ಪತ್ರೆಯ ಅಧೀಕ್ಷಕರಾದ ಡಾ.ನೀಲಕಂಠ, ಜಿಲ್ಲಾ ಆಯುಷ್
ಅಧಿಕಾರಿ ಡಾ.ಶಂಕರಗೌಡ ಪಾಲ್ಗೊಳ್ಳುವರು ಎಂದು ಜಿಲ್ಲಾ
ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಕೆ.ಹೆಚ್.ಗಂಗಾಧರ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *