ಹೊನ್ನಾಳಿ ತಾಲ್ಲೂಕಿನ ಬೆನಕನಹಳ್ಳಿಯ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆ ಮತ್ತು ಗ್ರಾಮ ಪಂಚಾಯ್ತಿ
ಗ್ರಂಥಾಲಯಗಳಿಗೆ ರಾಜ್ಯ ಸಾರ್ವಜನಿಕ ಗ್ರಂಥಾಲಯ
ಇಲಾಖೆಯಿಂದ ತಲಾ 500 ಪುಸ್ತಕಗಳನ್ನು ಒದಗಿಸಲಾಗಿದೆ.
ಎರಡು ವರ್ಷಗಳ ಹಿಂದೆ ಬೆನಕನಹಳ್ಳಿ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ
ನೆರವಿನಿಂದ ರೂ.1 ಲಕ್ಷ ವೆಚ್ಚದಲ್ಲಿ ಪಾಠೋಪಕರಣ ಮತ್ತು
ಪೀಠೋಪಕರಣಗಳನ್ನು ಒದಗಿಸಲು ಶ್ರಮಿಸಿದ್ದನ್ನು ಈ
ವೇಳೆ ಸ್ಮರಿಸಿ, ತಮ್ಮದೇ ನೆಲೆಯಲ್ಲಿ ಪ್ರಭಾವ ಬೀರಿ ನೆರವಾದ
ಹಿರಿಯ ಪತ್ರಕರ್ತ ಬೆನಕನಹಳ್ಳಿ ಶೇಖರಗೌಡ ಅವರಿಗೆ
ಗ್ರಾಮಸ್ಥರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ತಮ್ಮ ಸ್ವಗ್ರಾಮದ ಶಾಲೆಯ ಮಕ್ಕಳ ಹಿತಕ್ಕಾಗಿ
ಶ್ರಮಿಸುತ್ತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ
ವಿದ್ಯಾರ್ಥಿಯೂ ಆದ ಬೆನಕನಹಳ್ಳಿ ಶೇಖರಗೌಡ ಅವರನ್ನು
ಮಾಜಿ ಶಾಸಕ ಡಿ.ಜಿ. ಶಾಂತನಗೌಡ, ಹಿರಿಯ ಸಮಾಜ ಸೇವಕ ಪಿ.
ವೀರಣ್ಣ, ಹಿರಿಯ ಪ್ರಾಥಮಿಕ ಶಾಲೆಯ
ಮುಖ್ಯೋಪಾಧ್ಯಾಯರಾದ ಕೋಟಪ್ಪ, ಗ್ರಾಪಂ.
ಗ್ರಂಥಾಲಯ ಸಹಾಯಕರಾದ ಪುಷ್ಪಪಂಚಾಕ್ಷರಿ
ಮತ್ತಿತರು ಅಭಿನಂದನೆ ಸಲ್ಲಿಸಿದ್ದು, ಅವರ ಸೇವೆ ಇದೇ ರೀತಿ
ಮುಂದುವರೆಯಲಿ ಎಂದು ಆಶಿಸಿದ್ದಾರೆ.
ತಮ್ಮ ಕೋರಿಕೆಯನ್ನು ಮನ್ನಿಸಿ ತಮ್ಮೂರಿನ ಶಾಲೆ
ಮತ್ತು ಗ್ರಂಥಾಲಯಕ್ಕೆ 1000 ಪುಸ್ತಕಗಳನ್ನು ನೀಡಿದ
ರಾಜ್ಯ ಗ್ರಂಥಾಲಯ ನಿರ್ದೇಶಕರನ್ನು ಪತ್ರಕರ್ತ
ಬೆನಕನಹಳ್ಳಿ ಶೇಖರಗೌಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.