ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ಡಿ ಜಿ ಶಾಂತನಗೌಡ್ರುರವರು ಹಾಗೂ ಅವರ ಧರ್ಮಪತ್ನಿ ವರಾದ ಶ್ರೀಮತಿ ಶ್ರೀ ಡಿ ಜಿ ರತ್ನಮ್ಮ ನವರು ಹೊನ್ನಾಳಿಯ 100 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸಮೇತರಾಗಿ ಬಂದು
ಕೋ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡರು .ತದನಂತರ ಡಿ ಜಿ ಶಾಂತನಗೌಡ್ರು
ಮಾತನಾಡಿ ನಾನು ವೈಯಕ್ತಿಕವಾಗಿ ಹೇಳುವುದೇನೆಂದರೆ ನಮ್ಮ ರಾಜ್ಯದ ಪ್ರತಿಯೊಬ್ಬ ಜನರು
ಈ ಕೋ ವ್ಯಾಕ್ಸಿನ್ ಲಸಿಕೆ ಹಾಕಿಸಿಕೊಂಡರೆ ಎರಡನೇ ಹಂತದ ಕೊರನಾ ರೋಗವನ್ನು ಸಹ ತಡೆಗಟ್ಟಬಹುದು .
ಇದರ ಜೊತೆಗೆ ಪ್ರತಿಯೊಬ್ಬರು ಮಾಸ್ಕನ್ನು ಧರಿಸಿದರೆ ಸ್ಯಾನಿಟೈಸರ್ ಅನ್ನು ಬಳಸಿದರೆ ಜನಗಳ ಮಧ್ಯೆ ಅಂತರವನ್ನು ಕಾಪಾಡಿಕೊಂಡಾಗ
ಈ ಕೊರೋನಾ ರೋಗದಿಂದ
ಮುಕ್ತರಾಗಬಹುದು ಯಾರೂ ಕೂಡ ಭಯಪಡುವ ಅವಶ್ಯಕತೆ ಇರುವುದಿಲ್ಲ. ಭಯಬೇಡ ಎಚ್ಚರಿಕೆ ಇರಲಿ ಎಂದು ರಾಜ್ಯದ ಜನಗಳಿಗೆ ಈ ಮೂಲಕ ಸಂದೇಶವನ್ನು ಕೊಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ
ಶಾಂತನ ಗೌಡ್ರು ಆರೋಗ್ಯ ಇಲಾಖೆಯ ಆರೋಗ್ಯ ಅಧಿಕಾರಿ ಚಂದ್ರಪ್ಪನವರು ಲಸಿಕೆಯನ್ನು ಹಾಕಿದಂತಹ ದಾದಿಯರು ಸಹ ಭಾಗಿಯಾಗಿದ್ದರು