ದಾವಣಗೆರೆ ತಾಲ್ಲೂಕಿನ ಅವಧಿ ಪೂರ್ಣಗೊಂಡಿರುವ ಹಾಗೂ
ತೆರವಾದ ಗ್ರಾ.ಪಂ. ಸದಸ್ಯರ ಸ್ಥಾನಗಳನ್ನು ತುಂಬಲು ಮಾ.
29 ರಂದು ಮತದಾನ ನಡೆಯಲಿರುವ ಗ್ರಾ.ಪಂ ವ್ಯಾಪ್ತಿಯಲ್ಲಿ
ಮಾ.27 ರ ಸಂಜೆ 5 ಗಂಟೆಯಿಂದ ಮಾ.29 ರ ಸಂಜೆ 5
ಗಂಟೆವರೆಗೆ ಶುಷ್ಕ ದಿನ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು
ಆದೇಶಿಸಿರುತ್ತಾರೆ.
ದಾವಣಗೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಅವಧಿ
ಪೂರ್ಣಗೊಂಡಿರುವ ಸ್ಥಾನಗಳಾದದ ಗ್ರಾಮ ಪಂಚಾಯತಿ
ಸಂಖ್ಯೆ 37-ಬೇತೂರು, 40-ಕನಗೊಂಡನಹಳ್ಳಿ, 41-
ಕುಕ್ಕವಾಡ ಹಾಗೂ ಹೊನ್ನಾಳಿ ತಾಲ್ಲೂಕಿಗೆ ಸಂಬಂಧಿಸಿದಂತೆ
ಅಭ್ಯರ್ಥಿ ಮರಣದಿಂದ ತೆರವಾದ ಸಂಖ್ಯೆ 7-ಅರಬಗಟ್ಟೆ ಗ್ರಾಮ
ಪಂಚಾಯತಿಗಳಲ್ಲಿ ಸದಸ್ಯರ ಸ್ಥಾನ ತುಂಬಲು ಮಾ.29
ರಂದು ಚುನಾವಣೆ ನಡೆಯಲಿದ್ದು ಈ ವ್ಯಾಪ್ತಿಯಲ್ಲಿ ಮಾ. 27 ರ
ಸಂಜೆ 5 ಗಂಟೆಯಿಂದ 29 ರಂದು ಸಂಜೆ 5 ಗಂಟೆವರೆಗೆ
ಶುಷ್ಕ ದಿನವೆಂದು ಘೋಷಿಸಿದ್ದು, ಈ ಅವಧಿಯಲ್ಲಿ ಎಲ್ಲಾ ಮದ್ಯ
ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ
ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು
ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು
ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ
ಕೀಯನ್ನು ಸಂಬಂಧಿಸಿದ ತಾಲ್ಲೂಕಿನ ಕಾರ್ಯ ನಿರ್ವಾಹಕ
ಮ್ಯಾಜಿಸ್ಟ್ರೇಟ್‍ರಿಗೆ ಒಪ್ಪಿಸತಕ್ಕದ್ದು.
ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ
ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಂಡಿರುವುದು ಅಥವಾ
ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು
ಕಂಡು ಬಂದರೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣೆ
ಮುಕ್ತಾಯವಾಗುವವರೆಗೆ ಅಂತಹವರನ್ನು
ಕಸ್ಟಡಿಯಲ್ಲಿಡತಕ್ಕದ್ದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ
ದಂಡಾಧಿಕಾರಿಯಾದ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *