ಮೊಬೈಲ್ ಆ್ಯಪ್ ಲೋಕಾರ್ಪಣೆ
ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳ, ಆಸ್ಪತ್ರೆಗಳ,
ಯಾತ್ರಾಸ್ಥಳ, ಜನೌಷದಿ ಇತ್ಯಾದಿ ಸ್ಥಳ, ವಿಳಾಸ ಮತ್ತು ಇತರ
ಮಾಹಿತಿಯನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ
‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್ನ್ನು ಜಿಲ್ಲೆಯ ಎನ್ಐಸಿ
ಅಧಿಕಾರಿಗಳು ಅಭಿವೃದ್ದಿಪಡಿಸಿದ್ದು, ಸಾರ್ವಜನಿಕರು ಇದರ
ಉಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಹೇಳಿದರು.
ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ
ನ್ಯಾಷನಲ್ ಇನ್ಫರ್ಮಾಟಿಕ್ಸ್ ಸೆಂಟರ್(ಎನ್ಐಸಿ) ಅಧಿಕಾರಿಗಳು
ಅಭಿವೃದ್ದಿಪಡಿಸಿರುವ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆ್ಯಪ್ಗೆ
ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಅಧಿಕೃತವಾಗಿ ಚಾಲನೆ
ನೀಡಿ, ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಲು
ಆಯೋಜಿಸದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ,
ರಾಜ್ಯದಲ್ಲೇ ಈ ಆ್ಯಪ್ನ್ನು ಲೋಕಾರ್ಪಣೆಗೊಳಿಸಿದ ಮೊದಲ ಜಿಲ್ಲೆ
ನಮ್ಮದು ಎಂದರು.
ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳಿಗೆ ಮಾ.29 ರೊಳಗೆ ಈ
ರೀತಿ ಆಪ್ ಪ್ರಕಟಿಸಲು ಸಮಯ ನಿಗದಿಗೊಳಿಸಲಾಗಿದ್ದು,
ರಾಜ್ಯದಲ್ಲೇ ಮೊದಲನೆಯದಾಗಿ ನಮ್ಮ ಜಿಲ್ಲೆಯಲ್ಲಿ ಈ ಆಪ್ನ್ನು
ಅಭಿವೃದ್ದಿಪಡಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.
‘ದಾವಣಗೆರೆ ಆನ್ ಮ್ಯಾಪ್’ ಒಂದು ವಿಶಿಷ್ಟವಾದ ಮೊಬೈಲ್ ಆ್ಯಪ್
ಆಗಿದೆ. ಡಿಸ್ಟ್ರಿಕ್ಟ್ ಗವರ್ನೆನ್ಸ್ ಮೊಬೈಲ್ ಚಾಲೆಂಜ್ ಅಡಿಯಲ್ಲಿ ದೇಶದ
ಎಲ್ಲಾ ಜಿಲ್ಲೆಗಳ ಎನ್ಐಸಿ ಅಧಿಕಾರಿಗಳು ಈ ಸ್ಪರ್ಧೆಯಲ್ಲಿ
ಭಾಗವಹಿಸಿದ್ದು, ಇದರ ಅಂಗವಾಗಿ ‘ದಾವಣಗೆರೆ ಆನ್ ಮ್ಯಾಪ್
ಮೊಬೈಲ್ ಆಪ್ನ್ನು ಕೇವಲ 15 ರಿಂದ 20 ದಿನಗಳಲ್ಲಿ ನಮ್ಮ
ಅಧಿಕಾರಿಗಳು ಅಭಿವೃದ್ದಿಪಡಿಸಿದ್ದಾರೆ ಎಂದರು.
ಆರು ಸೇವೆ ಮಾಹಿತಿ ಅಳವಡಿಕೆ : ಇದು ಮುಖ್ಯವಾಗಿ
ಜನಸಾಮಾನ್ಯರಿಗೆ ಒಂದು ಯುಟಿಲಿಟಿ ಆಗಿ ಹೆಚ್ಚು ಉಪಯೋಗ
ಆಗಲಿದ್ದು, ಇದರಲ್ಲಿ ದಾವಣಗೆರೆ ಜಿಲ್ಲೆಯ ಆರು ಪ್ರಮುಖ
ಮಾಹಿತಿಗಳನ್ನು ಅಳವಡಿಸಲಾಗಿದೆ. ಅವುಗಳೆಂದರೆ
ಆಸ್ಪತ್ರೆಗಳು, ಜನೌಷಧ ಕೇಂದ್ರಗಳು, ಪೊಲೀಸ್
ಸ್ಟೇಷನ್ಗಳು, ಪೆಟ್ರೋಲ್ ಬಂಕ್ಗಳು, ಗ್ರಾಮ ಒನ್
ಕೇಂದ್ರಗಳು ಮತ್ತು ಯಾತ್ರಾ ಸ್ಥಳಗಳು.
ಉದಾಹರಣೆಗೆ ಆಸ್ಪತ್ರೆಗಳು ಆಯ್ಕೆ ಮಾಡಿದಾಗ
ಇವುಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಗೂಗಲ್ ಮ್ಯಾಪ್
ನಲ್ಲಿ ನೋಡಿಕೊಳ್ಳಬಹುದು.