ದಾವಣಗೆರೆ ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಬ್ಯಾಂಕಿಗೆ ಇಂದು ತೆರವಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬ್ಯಾಂಕಿನ ಸರ್ವ ನಿರ್ದೇಶಕರುಗಳ ಒಪ್ಪಿಗೆ ಮೇರೆಗೆ ಚುನಾವಣೆ ಅಧಿಕಾರಿಗಳಾದ ರಮೇಶ ಆರ್ ರವರು ಆದೇಶದ ಹಿನ್ನಲೆಯಲ್ಲಿ ಅಧ್ಯಕ್ಷರಾಗಿ ಶ್ರೀ ಜೆ ಶ್ರೀಕಾಂತ(ಕಾಂತರಾಜ್) ನ್ಯಾಮತಿ ಮತ್ತು ಉಪಾಧ್ಯಕ್ಷರಾಗಿ ಕುಂದೂರಿನ ಶ್ರೀಎಸ್ ನಾಗರಾಜ್‍ಪ್ಪ ಇವರಗಳನ್ನು ಆಯ್ಕೆ ಮಾಡಲಾಯಿತು.
ನೂತನವಾಗಿ ಅಧ್ಯಕ್ಷರಾದ ನ್ಯಾಮತಿ ಕಾಂತರಾಜ್‍ರವರು ಮಾತನಾಡಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಿಕ್ಕೆ ಸಹಕರಿಸಿದ ಮಾಜಿ ಶಾಸಕರಾದ ಡಿ.ಜಿ.
ಶಾಂತನಗೌಡ್ರು ರವರಿಗೂ ಮತ್ತು ನಮ್ಮ ಶಿವ ಬ್ಯಾಂಕಿನ ಸರ್ವ ನಿರ್ದೇಶಕರಿಗಳಿಗೂ ಹಾಗೂ ಪತ್ಯಕ್ಷ ಮತ್ತುಪರೋಕ್ಷವಾಗಿ ಸಹಕರಿಸಿದ ಸ್ನೇಹಿತರುಗಳಿಗೆ ಧನ್ಯವಾದವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಾಧುವೀರಶೈವ ಸಮಾಜದ ಅಧ್ಯಕ್ಷರುಗಳಾದ ಕೆ.ಕರೇಗೌಡ್ರು ಮತ್ತು ಜಿ ಶಿವಪ್ಪನವರು ಹಾಗೂ ಡಿ.ಎಸ್ ಪ್ರದೀಪ್‍ಗೌಡ್ರು ಚುನಾವಣೆಧಿಕಾರಿಯಾದ ರಮೇಶ್ ಆರ್, ಬ್ಯಾಂಕಿನ ನಿರ್ದೇಶಕರುಗಳಾದ ಕೆ.ಎಂ ಬಸವಲಿಂಗಪ್ಪ,ಎಸ್.ಎಂ ಶಕುಂತಲಾ,ಪಿ.ಬಿ.ಶೈಲೇಶ್ ಕೆ.ಎಸ್ ಶಿವುಕುಮಾರ್, ಆರ್.ಸಿ ಶಂಕರೇಗೌಡ, ಎಂ.ಜಿ ಬಸವರಾಜಪ್ಪ ಹಾಗೂ ಕಾರ್ಯದರ್ಶಿಯವರಾದ ಹೆಚ್.ಎನ್ ರುದ್ರೇಶ್ವರು ಸಹ ಬಾಗಿಯಾಗಿದ್ದರು.

Leave a Reply

Your email address will not be published. Required fields are marked *