ದಾವಣಗೆರೆ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಅಂಗವಾಗಿ
ಮಾ.28 ರ ಸಂಜೆ 5 ಗಂಟೆಯಿಂದ ಮಾ.29ರ ಸಂಜೆ 5
ಗಂಟೆಯವರೆಗೆ ಮದ್ಯ ಮಾರಾಟ ಹಾಗೂ ಮದ್ಯ
ಸರಬರಾಜನ್ನು ನಿಷೇಧಿಸಲಾಗಿದೆ.
ಮಾ.28ರಂದು ಕಾಮದಹನ, ಮುಸ್ಲಿಂ ಸಮಾಜದವರು
ಷಬ್-ಎ-ಬರಾತ್ ಆಚರಣೆ ಹಾಗೂ ಮಾ.29 ರಂದು ಹಿಂದು
ಸಮಾಜದವರು ಹೋಳಿ ಹಬ್ಬ ಆಚರಣೆಯನ್ನು
ಹಮ್ಮಿಕೊಂಡಿದ್ದು, ಹಬ್ಬಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು
ಕಾಪಾಡುವ ಸಲುವಾಗಿ ಮುಂಜಾಗ್ರತಾ ದೃಷ್ಟಿಯಿಂದ ಜಿಲ್ಲಾದ್ಯಂತ
ಮದ್ಯ ಮಾರಾಟ ಮತ್ತು ಮದ್ಯ ಸರವರಾಜನ್ನು
ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಆದೇಶಿಸಿದ್ದಾರೆ.