ಕೋವಿಡ್-19 ಎರಡನೇ ಅಲೆ ವ್ಯಾಪಕ
ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಬರುವ
ಯಾವುದೇ ಹಬ್ಬ ಆಚರಣೆಗಳ ಪ್ರಯುಕ್ತ
ನಡೆಸಬಹುದಾದ ಸಭೆ-ಸಮಾರಂಭಗಳು ಸೇರಿದಂತೆ
ಸಾರ್ವಜನಿಕರು ಸೇರಬಹುದಾದ ಇತರ ಚಟುವಟಿಕೆಗಳನ್ನು
ನಿಷೇಧಿಸಲಾಗಿದೆ.
ಹೋಳಿ ಹಬ್ಬ, ಷಬ್-ಎ-ಬರಾತ್, ಗುಡ್ ಪ್ರೈಡೇ ಸೇರಿದಂತೆ
ಇತ್ಯಾದಿ ಹಬ್ಬಗಳ ಸಂದರ್ಭದಲ್ಲಿ ನಡೆಯಬಹುದಾದ
ಸಮಾರಂಭಗಳು, ಆಚರಣೆಗಳು ಹಾಗೂ ಸಾರ್ವಜನಿಕರು

ಗುಂಪು ಸೇರಬಹುದಾದ ಇತರ ಚಟುವಟಿಕೆಗಳು ಸೋಂಕು
ಹರಡುವಿಕೆಯನ್ನು ಹೆಚ್ಚಿಸಬಹುದಾದ ಆತಂಕವಿದ್ದು,
ಇಲ್ಲಿಯವರೆಗೂ ಕೋವಿಡ್-19ರ ಹರಡುವಿಕೆಯ
ನಿಯಂತ್ರಣದಲ್ಲಿ ಈವರೆಗೆ ಸಾಧಿಸಲಾಗಿರುವ ಲಾಭಕ್ಕೆ
ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ನಿಟ್ಟಿನಲ್ಲಿ ಮುಂಬರುವ ಹಬ್ಬಗಳ ಸಂದರ್ಭದಲ್ಲಿ
ಮೈದಾನ, ಉದ್ಯಾನವವನ, ಮಾರುಕಟ್ಟೆಗಳು, ಧಾರ್ಮಿಕ
ಪ್ರದೇಶಗಳು ಇತ್ಯಾದಿ ಸಾರ್ವಜನಿಕ ಸಾರ್ವಜನಿಕ ಸ್ಥಳಗಳಲ್ಲಿ
ಯಾವುದೇ ರೀತಿಯ ಆಚರಣೆಗಳು, ಸಭೆ-
ಸಮಾರಂಭಗಳನ್ನು ಆಚರಿಸಬಾರದು.
ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ
ನಿಯಮಗಳನ್ನು ಸಾರ್ವಜನಿಕರು ನಿರ್ಲಕ್ಷಿಸಿದರೆ ಅಂತಹವರ
ವಿರುದ್ಧ ಕಾನೂನಾತ್ಮಕವಾಗಿ ಕ್ರಮ
ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *