ತಾಲ್ಲೂಕಿನಾದ್ಯಂತ ಈಗಾಗಲೇ ಆಹಾರ ಇಲಾಖೆ ಯಿಂದ ಸಮೀಕ್ಷೆ ನಡೆಸಿ ಸರ್ಕಾರಿ ಅರೆ ಸರ್ಕಾರಿ ವ್ಯಕ್ತಿ ಗಳು ಬಿ ಪಿ ಎಲ್ ಪಡಿತರ ಚೀಟಿಗಳನ್ನು ಹೊಂದಿದ್ದನ್ನು ಪತ್ತೆ ಹಚ್ಚಿ ಸುಮಾರು 18ಲಕ್ಷ ದಷ್ಟು ದಂಡ ವಸೂಲಿ ಮಾಡಲಾಗಿದ್ದು ಇನ್ನೂ ಸುಮಾರಷ್ಟು ಅನರ್ಹ ವ್ಯಕ್ತಿ ಗಳು ಬಿ ಪಿ ಎಲ್ ಪಡಿತರ ಚೀಟಿಗಳನ್ನು ತಗೆದುಕೊಂಡಿರಿವುದು ಇಲಾಖೆಯ ಗಮನಕ್ಕೆ ಬಂದಿದೆ . ಅಂತಹವರು ತಾವೇ ಬಂದು ಪಡಿತರ ಚೀಟಿಗಳನ್ನು ಹಿಂದುರಿಗಿಸಲು ಮಾರ್ಚ್ 31 ಕೊನೆಯ ದಿನಾಂಕ ವಾಗಿದ್ದು ಅನರ್ಹ ಪಡಿತರ ಚೀಟಿಗಳನ್ನು ಪಡೆದುಕೊಂಡವರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಇಲ್ಲವಾದಲ್ಲಿ ಮುಂದೆ ಭಾರೀ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಶಿಕಾರಿಪುರ ತಾಲ್ಲೂಕು ದಂಡಾಧಿಕಾರಿಗಳಾದ ಎಂ ಪಿ ಕವಿರಾಜ್ ರವರು ಎಚ್ಚರಿಕೆ ನೀಡಿದರು .ತಾಲ್ಲೂಕು ಕಚೇರಿಯಲ್ಲಿ ಶಿರಾಳಕೊಪ್ಪ ಮತ್ತು ಶಿಕಾರಿಪುರ ಪಟ್ಟಣಗಳ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ಉದ್ದೇಶಿಸಿ ಮಾತನಾಡಿದ ಅವರು ಪಟ್ಟಣಗಳಲ್ಲಿ ಯಾರೆಲ್ಲ (ಬಿ ಪಿ ಎಲ್ ಕಾರ್ಡ್ಗಳು ಹೊಂದಿದ ) ಬಿಳಿ ಬೋರ್ಡ್ ಇರುವಂತಹ ಕಾರ್ ಮತ್ತು ಇತರೆ ನಾಲ್ಕು ಚಕ್ರದ ವಾಹನಗಳು ,1000 ಚದರ ಅಡಿಯ ತಾರಸಿ ಮನೆಗಳು ಮತ್ತು 1.20 ಲಕ್ಷ ಮೀರಿದ ವಾರ್ಷಿಕ ಆದಾಯ ಹೊಂದಿದ್ದಾರೆ ಅಂತಹವರ ಮಾಹಿತಿ ಇಲಾಖೆಗೆ ನೀಡ ಬೇಕೆಂದು ಆದೇಶ ನೀಡಿದರು.ಕರೋನಾ ಎರಡನೇ ಅಲೆ ಪ್ರಾರಂಭವಾದ ಕಾರಣ ನ್ಯಾಯ ಬೆಲೆ ಅಂಗಡಿಮಾಲೀಕರು ಕರೋನ ನಿಯಮಗಳನ್ನ ಪಾಲನೆ ಖಡ್ಡಾಯವಾಗಿ ಮಾಡಬೇಕು ಮತ್ತು ಸಮಾಜಿಕ ಅಂತರದೊಂದಿಗೆ ಪಡಿತರ ವಿತರಣೆ ಮಾಡಬೇಕೆಂದು ಸಹ ತಹಸೀಲ್ದಾರ್ ಅಂಗಡಿ ಮಾಲೀಕರಿಗೆ ಕರೆ ನೀಡಿದರು .
ಈ ಸಂಧರ್ಬದಲ್ಲಿ ಆಹಾರ ಇಲಾಖೆಯ ಸಿರಸ್ತೇದಾರರಾದ ಶ್ರೀಮತಿ ಗೀತಮ್ಮ , ಶ್ರೀಮತಿ ಬಸಮ್ಮ , ಮಂಜುನಾಥ್ ಮತ್ತು ಶಿಕಾರಿಪುರ , ಶಿರಾಳಕೊಪ್ಪ ಪಟ್ಟಣದ ನ್ಯಾಯಬೆಲೆ ಅಂಗಡಿ ಮಾಲೀಕರು ಉಪಸ್ತಿತರಿದ್ದರು.