ಏಪ್ರಿಲ್ 2 ಕ್ಕೆ ಚಾಲನೆ
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ
ಅಂಗವಾಗಿ ದೇಶಾದ್ಯಂತ 75 ವಾರಗಳ ಕಾಲ ನಿರಂತರ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು,
ದಾವಣಗೆರೆ ನಗರದ ಪಾಲಿಕೆ ಆವರಣದಲ್ಲಿ ಏಪ್ರಿಲ್ 2 ರಂದು
ಸ್ವಾತಂತ್ರ್ಯದ ಸಂದೇಶ ಸಾರುವ ಅರ್ಥಪೂರ್ಣ
ಕಾರ್ಯಕ್ರಮದೊಂದಿಗೆ ಅಮೃತ ಮಹೋತ್ಸವಕ್ಕೆ ಚಾಲನೆ
ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಸೋಮವಾರ ಜಿಲ್ಲಾಡಳಿತ ಕಚೇರ ಸಭಾಂಗಣದಲ್ಲ ಆಜಾದಿ ಕಿ
ಅಮೃತ ಮಹೋತ್ಸವವನ್ನು ಜಿಲ್ಲೆ ಮತ್ತು ತಾಲ್ಲೂಕು
ಮಟ್ಟದಲ್ಲಿ ಆಚರಿಸುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲು
ಕರೆಯಲಾಗಿದ್ದ ಪೂರ್ವಸಿದ್ದತೆ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಹ ಒಟ್ಟು 75 ಕಾರ್ಯಕ್ರಮಗಳನ್ನು
ನಡೆಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ವಿವಿಧ
ಇಲಾಖೆಗಳಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಏಪ್ರಿಲ್ 2 ರಂದು
ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಜಿಲ್ಲಾ ಕೇಂದ್ರ
ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಚಾಲನೆ
ನೀಡಲಾಗುವುದು. ಅಂದು ನಗರದ ಡಿಸಿ ಕಚೇರಿಯಿಂದ
ಅಧಿಕಾರಿಗಳನ್ನೊಳಗೊಂಡಂತೆ ಸುಮಾರು 75
ಸೈಕಲ್ಗಳಲ್ಲಿ ಸೈಕಲ್ ಜಾಥಾ ಹೊರಟು ಗುಂಡಿ ಸರ್ಕಲ್,
ವಿದ್ಯಾನಗರ, ಎಸಿ ಕಚೇರಿ ಮಾರ್ಗವಾಗಿ ಪಾಲಿಕೆ ಆವರಣ ತಲುಪಿ
ಗಾಂಧೀಜಿ ಮತ್ತು ಹುತಾತ್ಮರ ಧ್ವಜಸ್ತಂಭ, ಅಂಬೇಡ್ಕರ್
ಮತ್ತು ಭಗತ್ ಸಿಂಗ್ ಇವರುಗಳ ಪ್ರತಿಮೆಗೆ ಮಾಲಾರ್ಪಣೆ
ಮಾಡಿ, ಸ್ವಾತಂತ್ರ್ಯ ಹೋರಾಟದ ಕುರಿತು ಜಾಗೃತಿ
ಮೂಡಿಸುವಂತಹ ವೇದಿಕೆ ಕಾರ್ಯಕ್ರಮದಲ್ಲಿ
ಪಾಲ್ಗೊಳ್ಳಲಾಗುವುದು ಎಂದರು.
ಇಂದಿನ ತಾಂತ್ರಿಕ ಜಗತ್ತಿನ ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ
ಹೋರಾಟ, ತ್ಯಾಗ ಬಲಿದಾನದ ಬಗ್ಗೆ ತಿಳಿಸುವ, ಸಂದೇಶ ನೀಡುವ
ಅಗತ್ಯವಿದ್ದು, ಈ ನಿಟ್ಟಿನಲ್ಲಿ ಅಂದು ಕಲಾವಿದರಿಂದ ಕನ್ನಡ
ದೇಶಭಕ್ತಿ ಗೀತ ಗಾಯನ ಏರ್ಪಡಿಸಲಾಗುವುದು. ಹಾಗೂ
ಮುಂದಿನ ಕಾರ್ಯಕ್ರಮಗಳು ಸಹ ಈ ನಿಟ್ಟಿನಲ್ಲಿ ನಡೆಯಲು
ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ. ಅಂದು ಇತರೆ
ತಾಲ್ಲೂಕುಗಳಲ್ಲಿ ಸಹ ಇದೇ ರೀತಿಯ ಚಟುವಟಿಕೆಗಳು
ನಡೆಸಲು ಸೂಚನೆ ನೀಡಲಾಗಿದೆ ಎಂದರು.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ
ವಿವಿಧ ಕನ್ನಡಪರ ಸಂಘಟನೆಗಳು, ರೋಟರಿ, ಲಯನ್ಸ್, ಸ್ಕೌಟ್ಸ್,
ಗೈಡ್ಸ್ ಎನ್ಎಸ್ಎಸ್, ಎನ್ಸಿಸಿ ಸೇರಿದಂತೆ ಸಂಘಟನೆಗಳ
ಸಹಯೋಗದಲ್ಲಿ ಸ್ವಚ್ಚತೆ ಕಾರ್ಯಕ್ರಮ ಸೇರಿದಂತೆ ವಿವಿಧ
ಕಾರ್ಯಕ್ರಮ ನಡೆಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ
ಹೆಚ್ಚು ಜನರನ್ನು ಸೇರಿಸದೆ ಅರ್ಥಪೂರ್ಣವಾಗಿ ಕಾರ್ಯಕ್ರಮ
ಹಮ್ಮಿಕೊಳ್ಳಲಾಗುವುದು ಎಂದರು.
ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್
ಮಾತನಾಡಿ, ಕಳೆದ ಸಾಲಿನಲ್ಲಿ ನಮ್ಮ ಜಿಲ್ಲಾ ಪಂಚಾಯ್ತಿಗೆ
ಅತ್ಯುತ್ತಮ ಜಿ.ಪಂ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಆಜಾದಿ ಕಿ
ಅಮೃತಮಹೋತ್ಸವ ಸಂದರ್ಭದಲ್ಲಿ ಜಿಲ್ಲೆಯಲ್ಲಿ 75
ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಲಾಗಿದ್ದು,
ಗ್ರಾ.ಪಂ, ತಾ.ಪಂ ಮಟ್ಟದಲ್ಲೂ ನಿರಂತರವಾಗಿ
ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ,
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಡಿಪಿಐ
ಪರಮೇಶ್ವರಪ್ಪ, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ,
ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆಯ ಸಹಾಯಕ
ನಿರ್ದೇಶಕ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ
ಸಹಾಯಕ ನಿರ್ದೇಶಕ ರವಿಚಂದ್ರ, ವಾರ್ತಾಧಿಕಾರಿ
ಡಿ.ಅಶೋಕಕುಮಾರ್, ಇತರೆ ಅಧಿಕಾರಿಗಳು ಇದ್ದರು.