ಚಾಲನೆ

ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ತುಂಬಿದ
ಹಿನ್ನೆಲೆಯಲ್ಲಿ ದೇಶಾದ್ಯಂತ ‘ಆಜಾದಿ ಕ ಅಮೃತ ಮಹೋತ್ಸವ’
ಎಂಬ ಕಾರ್ಯಕ್ರಮವನ್ನು 75 ವಾರಗಳ ಕಾಲ
ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ತ್ಯಾಗ, ಬಲಿದಾನಗೈದ
ಸೇನಾನಿಗಳನ್ನು ನೆನಪಿಸಿಕೊಳ್ಳಲು, ಸ್ವಾತಂತ್ರ್ಯ
ಹೋರಾಟಗಳು ನಡೆದ ವಿವಿಧ ಪ್ರದೇಶಗಳಲ್ಲಿ ವಿನೂತನ
ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ
ಕಾರ್ಯಕ್ರಮಕ್ಕೆ ದಾವಣೆಗೆರೆ ಜಿಲ್ಲೆಯಲ್ಲಿ ಏಪ್ರಿಲ್ 2 ರಂದು
ಚಾಲನೆ ನೀಡಲಾಗುವುದು.
ದಾವಣಗೆರೆ ನಗರ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ
ಕೇಂದ್ರಗಳಲ್ಲಿ ಈ ಸಂಬಂಧ ವಿವಿಧ ಕಾರ್ಯಕ್ರಮಗಳಿಗೆ
ಅಂದು ಚಾಲನೆ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು
ಭಾಗವಹಿಸುತ್ತಿದ್ದು ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ
ಸಂಸ್ಥೆಗಳ ಪ್ರತಿನಿಧಿಗಳು, ಸಂಘಟನೆಗಳು
ಪಾಲ್ಗೊಳ್ಳುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಸ್ವಾತಂತ್ರ್ಯ
ಅಮೃತೋತ್ಸವ ಉದ್ಘಾಟನಾ ಸಮಾರಂಭದ ಅಂಗವಾಗಿ ಏ.2
ರಂದು ಸೈಕಲ್ ಜಾಥಾ ಏರ್ಪಡಿಸಲಾಗಿದೆ.
ಸೈಕಲ್ ಜಾಥಾ ಬೆಳಿಗ್ಗೆ 8.30 ಕ್ಕೆ ನಗರದ ಡಿಸಿ ಸರ್ಕಲ್‍ನಿಂದ
ಹೊರಟು ಗುಂಡಿ ಸರ್ಕಲ್, ವಿದ್ಯಾರ್ಥಿ ಭವನ, ಜಯದೇವ ಸರ್ಕಲ್,
ಎಸಿ ಕಚೇರಿ, ರೈಲ್ವೇ ಸ್ಟೇಷನ್ ಮುಖಾಂತರ
ಮಹಾನಗರಪಾಲಿಕೆಯ ಹುತಾತ್ಮ ಸ್ತಂಭದ ಬಳಿ ತಲುಪಲಿದೆ.
ನಂತರ ಮಹಾನಗರಪಾಲಿಕೆ ಆವರಣದಲ್ಲಿರುವ
ಮಹಾತ್ಮಾಗಾಂಧಿ, ಅಂಬೇಡ್ಕರ್, ಬಾಬು ಜಗಜೀವನರಾಂ ಹಾಗೂ
ರೈಲ್ವೇ ಸ್ಟೇಷನ್ ಮುಂಭಾಗದಲ್ಲಿರುವ ಭಗತ್ ಸಿಂಗ್
ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
ಬೆಳಿಗ್ಗೆ 9.30 ಕ್ಕೆ ಮಹಾನಗರಪಾಲಿಕೆ ಆವರಣದಲ್ಲಿ ವೇದಿಕೆ
ಕಾರ್ಯಕ್ರಮ ನಡೆಯಲಿದ್ದು, ಸ್ವಾತಂತ್ರ್ಯ ಚಳವಳಿಯ
ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *