ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ
ನೌಕರರಾದ ಡಿ.ಮಂಜುನಾಥ್, ಎರಡನೇ ದರ್ಜೆ ಸಹಾಯಕ
ಹಾಗೂ ಹೆಚ್.ಗುರುಸಿದ್ದಪ್ಪ, ವರ್ಕ್ ಇನ್ಸ್‍ಪೆಕ್ಟರ್ ಇವರು
ವಯೋ ನಿವೃತ್ತಿ ಹೊಂದಿದ್ದು, ಪ್ರಾಧಿಕಾರದ ವತಿಯಿಂದ ಮಾ.31
ರಂದು ಬೀಳ್ಕೋಡುಗೆ ಸಮಾರಂಭದಲ್ಲಿ ಪ್ರಾಧಿಕಾರದ
ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಇವರು ಅಧ್ಯಕ್ಷತೆ
ವಹಿಸಿಲಿದ್ದಾರೆ.
ಸಮಾರಂಭದಲ್ಲಿ ಆಯುಕ್ತರಾದ ಬಿ.ಟಿ. ಕುಮಾರಸ್ವಾಮಿ,
ಪ್ರಾಧಿಕಾರದ ಸದಸ್ಯರಾದ ಡಿ.ವಿ.ಜಯರುದ್ರಪ್ಪ, ಜಂಟಿ
ನಿರ್ದೇಶಕರು/ ನಗರ ಯೋಜನಾ ಸದಸ್ಯರಾದ ಎಂ.ಅಣ್ಣಪ್ಪ,
ಸಹಾಯಕ ನಿರ್ದೇಶಕರಾದ ಬಿ.ರೇಣುಕಾ ಪ್ರಸಾದ್,
ಸಹಾಯಕ ಕಾರ್ಯಪಾಲಕ ಅಭಿಯಂತರರಾದ
ಕೆ.ಹೆಚ್.ಶ್ರೀಕರ್ ಇವರು ಹಾಗೂ ಅಧಿಕಾರಿಗಳು,
ಸಿಬ್ಬಂದಿಗಳೊಂದಿಗೆ ಸನ್ಮಾನಿಸಿ ಬೀಳ್ಕೋಡಲಾಯಿತು.