ಬಿ.ಎಸ್.ಯಡಿಯೂರಪ್ಪ

ಹಲವು ರಾಜ್ಯಗಳು ಮೀಸಲಾತಿ ಹೆಚ್ಚಳ ಸಂಬಂಧ
ಸುಪ್ರೀಂಕೋರ್ಟ್‍ಗೆ ಅಫಿಡೆವಿಟ್ ಸಲ್ಲಿಸಿದ್ದು ನಾವು ಕೂಡ
ಮೀಸಲಾತಿ ಹೆಚ್ಚಳಕ್ಕಾಗಿ ಸುಪ್ರೀಂ ಕೋರ್ಟ್‍ಗೆ ಅಫಿಡೆವಿಟ್
ಸಲ್ಲಿಸಿದ್ದೇವೆ. ಎಸ್.ಟಿ. ಮೀಸಲಾತಿ ಹೆಚ್ಚಳ ಹಿನ್ನೆಲೆಯಲ್ಲಿ ಉನ್ನತ
ಮಟದ ಸಮಿತಿ ರಚಿಸಲಾಗಿದ್ದು ಸಮಿತಿ ವರದಿಯನ್ನಾಧರಿಸಿ
ಮೀಸಲಾತಿ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗುವುದು,
ಮೀಸಲಾತಿ ಹೆಚ್ಚಳ ಸಂಬಂಧ ಮಾಜಿ ಅಡ್ವೋಕೇಟ್ ಜನರಲ್
ಹಾಗೂ ಹಾಲಿ ಅಡ್ವೋಕೇಟ್ ಜನರಲ್ ಇವರುಗಳ ಅಭಿಪ್ರಾಯ
ತೆಗೆದುಕೊಳ್ಳಲಾಗಿದೆ ಎಂದರು.
ಹರಿಹರ ತಾಲ್ಲೂಕು ಬೆಳ್ಳೂಡಿ ಗ್ರಾಮದ ಶ್ರೀಕಾಗಿನೆಲೆ
ಮಹಾಸಂಸ್ಥಾನ ಕನಕ ಗುರುಪೀಠ ಶಾಖಾಮಠದ ಶ್ರೀಪೀಠದ
ಆವರಣದಲ್ಲಿ ಏರ್ಪಡಿಸಲಾಗಿದ್ದ ವಿದ್ಯಾರ್ಥಿನಿಲಯ, ಸಮುದಾಯ
ಭವನ ಮತ್ತು ಮುಖ್ಯಮಹಾದ್ವಾರ ಉದ್ಘಾಟನೆ, ಹಾಗೂ ನೂತನ
ಹೊರಬೀರದೇವರ ಪ್ರಾಣಪ್ರತಿಷ್ಠಾಪನೆ
ಮಹಾಕುಂಭಾಭಿಷೇಕ ಶಾಖಾಮಠದ 5ನೇ ವಾರ್ಷಿಕೋತ್ಸವ
ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.
ಎಲ್ಲರ ಏಳಿಗೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು ಸಮಾಜದ
ಕಟ್ಟಕಡೆಯ ವ್ಯಕ್ತಿಯು ಮೀಸಲಾತಿ ಸೌಲಭ್ಯವನ್ನು
ಅನುಭವಿಸಬೇಕು. ಈ ಹಿನ್ನೆಲೆಯಲ್ಲಿ ಎಸ್.ಟಿ.ಮೀಸಲಾತಿ ಕಾನೂನು
ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಹೊಸದುರ್ಗ ಶಾಖಾಮಠದ ಕನಕದಾಸರ ಏಕಶಿಲಾ
ಪುತ್ಥಳಿ ನಿರ್ಮಾಣಕ್ಕೆ ರೂ.5 ಕೋಟಿ ಬಿಡುಗಡೆ ಮಾಡಲಾಗಿದೆ.
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 30 ಕೋಟಿ
ಬಿಡುಗಡೆ ಬಾಕಿ ಇದ್ದು ಹಂತಹಂತವಾಗಿ ಹಣ ಬಿಡುಗಡೆ
ಮಾಡಲಾಗುವುದು ಎಂದರು.
ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಕನಕದಾಸರ
ಕೊಡುಗೆ ಮಹತ್ತರವಾದದ್ದು. ಅವರೊಬ್ಬ ಆಧ್ಯಾತ್ಮದ
ಮೇರು ಶಿಖರ. ಉನ್ನತ ಮೌಲ್ಯ ಸಾರಿದ ಚಿಂತಕ. ಅನ್ಯಾಯ ಹಾಗೂ
ಡಾಂಭಿಕತೆಗಳನ್ನು ಟೀಕಿಸಿ ಜೀವನದ ಸರಳ
ಮೌಲ್ಯಗಳನ್ನು ತಿಳಿಸಿದ ಮೇರು ಕವಿ. ಅವರು ಬರೆದಿರುವ
ಹರಿಭಕ್ತಸಾರ, ಮೋಹನ ತರಂಗಿನಿ, ರಾಮಚರಿತ ಮಾನಸ
ಪ್ರಮುಖ ಕೃತಿಗಳಾಗಿದ್ದು ಸಮಾಜದ ಅಂಕು
ಡೊಂಕುಗಳನ್ನು ತಿದ್ದುವಲ್ಲಿ ಮಹತ್ತರ ಪಾತ್ರ ವಹಿಸಿವೆ.
ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ಸಿದ್ದಗಂಗಾ
ಮಠದ ಅಧ್ಯಕ್ಷ ಸಿದ್ದಲಿಂಗಮಹಾಸ್ವಾಮೀಜಿ ದಿವ್ಯ ಸಾನಿಧ್ಯ
ವಹಿಸಿದ್ದರು. ಶ್ರೀಕಾಗಿನಲೆ ಮಹಾಸಂಸ್ಥಾನ ಕನಕ
ಗುರುಪೀಠದ ನಿರಂಜನಾನಂದಪುರಿ ಶ್ರೀಗಳು ಪ್ರಾಸ್ತಾವಿಕವಾಗಿ
ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ,
ಗ್ರಾಮೀಣಾಭಿವೃದ್ಧಿ ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ,
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ
ಜಿ.ಎಂ.ಸಿದ್ದೇಶ್ವರ, ರೇಷ್ಮೆ ಮತ್ತು ತೋಟಗಾರಿಕೆ ಸಚಿವ
ಆರ್.ಶಂಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಎಂ.ಪಿ.ರೇಣುಕಾಚಾರ್ಯ, ಕಾಗಿನಲೆ ಮಹಾಸಂಸ್ಥಾನ ಕನಕ
ಗುರುಪೀಠ ಸಿದ್ಧರಾಮನಂದಪುರಿ ಮಹಾಸ್ವಾಮಿಗಳು,
ಶಾಸಕರಾದ ಮಾಡಳ್ ವಿರುಪಾಕ್ಷಪ್ಪ, ಎಸ್.ರಾಮಪ್ಪ,
ಎಸ್.ವಿ.ರಾಮಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಪ್ರೊ.ಲಿಂಗಣ್ಣ,
ಅರುಣ್‍ಕುಮಾರ್ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ
ಕೆ.ಈ.ಕಾಂತೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *