ಮಟ್ಟದ ಅಡ್ವೋಕಸಿ ಕಾರ್ಯಾಗಾರ
ಮಕ್ಕಳ ಸ್ನೇಹಿ ಅಧಿಕಾರಿಗಳಿಗೆ ಸನ್ಮಾನ ಸಮಾರಂಭ
ಮತ್ತು ಸಿಆರ್‍ಇಎಎಂ ಯೋಜನೆಯ ಅನುಷ್ಠಾನದಲ್ಲಿ ಇಲಾಖೆಗಳ
ಸಮನ್ವಯತೆ ಕುರಿತು ಜಿಲ್ಲಾ ಮಟ್ಟದ ಅಡ್ವೋಕಸಿ
ಕಾರ್ಯಾಗಾರವನ್ನು ಏ.09 ರಂದು ಬೆಳಿಗ್ಗೆ 11.30ಕ್ಕೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,
ಬೆಂಗಳೂರು. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ದಾವಣಗೆರೆ ಬ್ರೆಡ್ಸ್
ಸಂಸ್ಥೆ, ಬೆಂಗಳೂರು. ಡಾನ್ ಬೊಸ್ಕೋ ಬಾಲಕಾರ್ಮಿಕರ ಮಿಷನ್
ಕ್ರೀಮ್ ಯೋಜನೆ ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಉದ್ಘಾಟನೆ ನೆರವೇರಿಸುವುದರ ಜೊತೆಗೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಜೆ.ಜೆ.ಬಿ ನ್ಯಾಯಾಧೀಶರು ಮತ್ತು
ಬಾಲನ್ಯಾಯ ಮಂಡಳಿಯ ಅಧ್ಯಕ್ಷ ಪ್ರಭು.ಎನ್.ಬಡಿಗೇರ್,
ಪೊಲೀಸ್ ಅಧೀಕ್ಷಕ ಹನುಮಂತರಾಯ, ಜಿ.ಪಂ
ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ್
ದಾನಮ್ಮನವರ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ
ವೈ.ರಾಮನಾಯ್ಕ್, ಬಳ್ಳಾರಿ ವಿಭಾಗದ ಕಾರ್ಮಿಕ ಇಲಾಖೆಯ
ಸಹಾಯಕ ಆಯುಕ್ತ ಮೊಹಮದ್ ಜಹೀರ್ ಭಾಷಾ,
ಮಹಾನಗರಪಾಲಿಕೆಯ ಆಯುಕ್ತ ವಿಶ್ವನಾಥ್ ಮುದ್ದಜ್ಜಿ,
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ ಸೇರಿದಂತೆ
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು