ಸಾರಿಗೆ ನೌಕರರ 6ನೇ ವೇತನ ಪರಿಷ್ಕರಣೆ ಸಂಬದಿಸಿದಂತೆ 3 ದಿನಗಳಿಂದ ಕಾರ್ಮಿಕ ಒಕ್ಕೂಟಗಳು ಅನಿರ್ಧಾಷ್ಟವಧಿ ಮುಸ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಕಳೆದ ಮೂರು ತಿಂಗಳಿಂದ ಕಾರ್ಮಿಕರ ಜೊತೆ ಕಣ್ಣುಮುಚ್ಚಾಲೆ ಆಡುತ್ತಾ ಕೊಟ್ಟ ಮಾತಿನಂತೆ ನಡೆಯದೆ ಕಾರ್ಮಿಕರನ್ನು ಶೋಷಣೆ ಮಾಡುತ್ತಿದೆ. ಸರ್ಕಾರ ಕನಿಷ್ಟ ನಿಗದಿತ ವೇತನವನ್ನು ನೀಡದೇ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ, ಪ್ರಸ್ತುತ ಈ ದಿನಗಳಲ್ಲಿ ಬೆಲೆ ಏರಿಕೆಯ ಪರಿಣಾಮದಿಂದಾಗಿ ಈಗ ನೀಡವ ವೇತನದಿಂದ ಜೀವನ ನಡೆಸುವುದು ಕಷ್ಟಕರವಾಗಿರುವ ಹಿನ್ನಲೆಯಲ್ಲಿ, ಸರ್ಕಾರವು ಕೂಡಲೇ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತೆನೆ.ಎಂದು ಮಾತನ್ನು ಮುಂದುವರಿಸಿ,
ಸಾರಿಗೆ ಮುಸ್ಕರದಿಂದ ರಾಜ್ಯಾದಂತ ಸಾರ್ವಜನಿಕರು ನಿತ್ಯ ಸಾರಿಗೆಯನ್ನು ಆವಲಂಬಿಸಿ ದುಡಿಯುವ ವರ್ಗಗಳಿಗೆ ಕೂಲಿ
ಕಾರ್ಮಿಕರಿಗೆ ಹಾಗೂ ವಿದ್ಯಾರ್ಧಿಳಿಗೆ ಮತ್ತು ಇತರೇ ಸರ್ಕಾರಿ ಇಲಾಖೆಗಳ ನೌಕರರಿಗೆ ತೂಂದರೆಯಾಗುತ್ತಿದೆ, ಸರ್ಕಾರವು ಕೂಡಲೇ ಸಾರ್ವಜನಿಕರ ತೊಂದರೆಯನ್ನು ಗಮನದಲ್ಲಿಟ್ಟಿಕೊಂಡು ಸಾರಿಗೆ ಇಲಾಖೆಯ ಮುಖಂಡರ ಜೊತೆ ಚರ್ಚಿಸಿ ಮುಸ್ಕರವಾಪಾಸ ಪಡೆಯುವಂತೆ, ಅವರ ಮನವೂಲಿಸಿ ಅವರ ಬೇಡಿಕೆಗಳನ್ನು ಬೇಗನೆ ಈಡೇರಿಸಬೇಕೆಂದು ಆಗ್ರಹಿಸಿದರು .