ಸಾಗರÀÀ(ಶಿವಮೊಗ್ಗ),ಏ.10:ಮನುಷ್ಯ ಜನ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ
ಸ್ವ-ಕಲ್ಯಾಣದ ಜೊತೆಗೆ ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ
ಧರ್ಮಮಾರ್ಗದಲ್ಲಿ ನಡೆಯುವಂತೆ ಸೋಂದಾ ಶ್ರಿ ಜೈನ ಮಠಧ ಸ್ವಸ್ತಿ
ಶ್ರೀ ಭಟ್ಟಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಕರೆ
ನೀಡಿದರು.
ಅವರು ತಾಲ್ಲೂಕಿನ ಕರೂರು ಹೋಬಳಿಯ ಚನ್ನಗೊಂಡ
ಗ್ರಾಮಪಂಚಾಯಿತಿ ವ್ಯಾಪ್ತಿ ವಗೆಕೆರೆ ಶ್ರಿ ಪಾಶ್ರ್ವನಾತ ಬಸದಿ ಆವರಣದಲ್ಲಿ
ವಗೆಕೆರೆ ಶ್ರೀ ಪಾಶ್ರ್ವನಾಥ ದಿಗಂಬರ ಜೈನ್ ಸೇವಾ ಟ್ರಸ್ಟ್ ಆಶ್ರಯದಲ್ಲಿ
ಜೈನ್‍ಮಿಲನ್,ಸ್ವಸ್ತಿಶ್ರೀ ಮಹಿಳಾ ಸಮಾಜದ ಇವರುಗಳ
ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರಿ ಕಲಿಕುಂಡ ಆರಾಧನೆ
ಮತ್ತು ಸಾಮೂಹಿಕ ವೃತೋಪದೇಶ ಹಾಗೂ ಅಭಿನಂದನಾ
ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಮನುಷ್ಯನಿಗೆ ಇಂದ್ರಿಯಗಳ ಕ್ಷಣಿಕ ಭೋಗ ಸುಖಕ್ಕಿಂತ
ಮೋಕ್ಷಕಲ್ಯಾಣದಂತಹ ಶಾಶ್ವತ ಸುಖದತ್ತ ಹೆಜ್ಜೆ ಹಾಕಿದಾಗ
ಸಾರ್ಥಕವಾಗುತ್ತದೆ.ಧರ್ಮಾಚರಣೆಯಿಂದ ಭಕ್ತಿ ಮತ್ತು ಶ್ರದ್ದೆಯ
ಮಾರ್ಗದಲ್ಲಿ ಕರ್ಮಗಳ ನಿವಾರಣೆಯಾಗುತ್ತದೆ.ಆದ್ದರಿಂದ ಧರ್ಮ
ಕರ್ಮಗಳ ಜೊತೆಗೆ ಆಚರಣೆಯ ಕುರಿತು ಅರಿವು ಮೂಡಿದಾಗ ಪರಿಪೂರ್ಣ
ವ್ಯಕ್ತಿಯಾಗಿ ಮಾರ್ಗದರ್ಶಕರಾಗಬಹುದು ಎಂದರು.
ಸಮಾಜದಲ್ಲಿ ಸಂಘಟನಾ ಶಕ್ತಿಯಿಂದ
ಕ್ರಿಯಾಶೀಲರಾಗಬೇಕು.ವಿಶಾಲಮನೋಭಾವನೆಯಿಂದ
ವಿಸ್ತಾರಗೊಳ್ಳಬೇಕು.ಸಂಕುಚಿತಗೊಳ್ಳದೆ ಸಮಾಜಮುಖಿಯಾಗಿ
ನಾಯಕತ್ವದ ಗುಣಗಳಿಂದ ಧಾ,ರ್ಮಿಕ,ಸಾಮಾಜಿಕ ಕ್ಷೇತ್ರದಲ್ಲಿ
ಬೆಳೆಯಬೇಕು ಎಂದು ಕರೆ ನೀಡಿದರು.
ದೇವ-ಗುರು-ಶಾಸ್ತ್ರಗಳ ಕುರಿತು ಅರಿವು ಮೂಡಿಸುವುದು
ವೃತೋಪದೇಶ ಪಡೆದು ನಿರಂತರ ಪೂಜೆ ಪುನಸ್ಕಾರಗಳ ಮೂಲಕ
ಸಾತ್ವಿಕತೆಯಿಂದ ಬದುಕನ್ನು ಸನ್ಮಾರ್ಗದತ್ತ ಸಾಗಿಸಬೇಕು ಎಂದರು.