ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,
ಸ್ಲಲಂ ಜನಾಂದೋಲನ ಕರ್ನಾಟಕ, ದಾವಣಗೆರೆ ಇವರುಗಳ
ಸಂಯುಕ್ತಾಶ್ರಯದಲ್ಲಿ ಡಾ.ಅಂಬೇಡ್ಕರ್ ಜಯಂತಿ
ಕಾರ್ಯಕ್ರಮ ಏ.14 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ, ಎಡಿಆರ್ ಕಟ್ಟಡ, (ಹಳೇ
ನ್ಯಾಯಾಲಯದ ಸಂಕೀರ್ಣ) ದಾವಣಗೆರೆ ಇಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು 1ನೇ ಹೆಚ್ಚುವರಿ ಜಿಲ್ಲಾ
ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ಅವರು
ನೆರವೇರಿಸುವರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
ಡಿ.ಪಿ.ಬಸವರಾಜು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ
ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ನಾಯಕ್, ರಾಜ್ಯ
ಕಾನೂನು ಸೇವಾ ಪ್ರಾಧಿಕಾರ, ಸದಸ್ಯ ಎಲ್.ಹೆಚ್. ಅರುಣ್
ಕುಮಾರ್, ಹಿರಿಯ ವಕೀಲ ಅನೀಸ್ ಪಾಷ, ಸ್ಲಲಂ ಜನಾಂದೋಲನ
ಕರ್ನಾಟಕ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ,
ಹಿರಿಯ ವಕೀಲ ಆಂಜನೇಯ ಗುರೂಜಿ ಅವರು
ಪಾಲ್ಗೊಳ್ಳುವರು.