ದಾವಣಗೆರೆ : ರಾಜ್ಯ ಸೇರಿದಂತೆ ಪ್ರಪಂಚದಲ್ಲಿ ವಿಕೋಪಗಳು ಬಂದಾಗ ಪ್ರಾಣ ಒತ್ತೆ ಇಟ್ಟು, ಇನ್ನೊಬ್ಬರ ಪ್ರಾಣ ಕಾಪಾಡುವರೇ ಫೈರ್‌ಮನ್ ಎಂದು ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಜಯರಾಮ್ ಹೇಳಿದರು.
ನಗರದಲ್ಲಿನ ಅಗ್ನಿಶಾಮಕ ಇಲಾಖೆಯಲ್ಲಿ ಬುಧವಾರ ನಡೆದ ಅಗ್ನಿಶಾಮಕದಳದ ಹುತಾತ್ಮ ದಿನಾಚರಣೆಯಲ್ಲಿ ಗೌರವವಂದನೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಅಗ್ನಿಶಾಮಕ ಠಾಣೆಗಳಲ್ಲಿ ಏಪ್ರಿಲ್-14 ರಂದು ದಿಟ್ಟತನ ತ್ಯಾಗ ಬಲಿದಾನವನ್ನು ಮರೆತು ಕರ್ತವ್ಯೃದಲ್ಲಿ ಮಡಿದವರ ಸ್ಮರಣಾರ್ಥವಾಗಿ ಅಗ್ನಿಶಾಮಕ ಸೇವಾ ಸಪ್ತಾಹ ಏರ್ಪಡಿಸಲಾಗಿದೆ ಅಂತೆಯೇ ಇಲ್ಲಿ ಹುತಾತ್ಮ ದಿನಾಚರಣೆ ಮಾಡಲಾಗಿದೆ ಎಂದರು.
ಲಾಕ್‌ಡೌನ್ ಸಮಯದಲ್ಲಿ ನಮ್ಮ ಸಿಬ್ಬಂದಿಗಳು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡಿದ್ದಾರೆ. ಹಲವು ಲಾಡ್ಜ್ ಸೇರಿದಂತೆ ಇನ್ನಿತರ ಕಡೆ ಸ್ಯಾನಿಟೈಸ್ ಮಾಡಿದ್ದಾರೆ. ಅಲ್ಲದೇ ಸ್ಮಶಾನದಲ್ಲಿ ಜೆಸಿಬಿ ಮೂಲಕ ಹೂಳು ತೆಗೆಸಿದ್ದಾರೆ. ಹೀಗೆ ಹತ್ತಾರು ಕೆಲಸಗಳನ್ನು ಮಾಡುವವರು ನಮ್ಮ ಅಗ್ನಿ ಶಾಮಕದಳದ ಸಿಬ್ಬಂದಿ ಎಂದು ಇಲಾಖೆ ಸಿಬ್ಬಂದಿಗಳನ್ನು ಪ್ರಶಂಸಿದರು.
ಅಗ್ನಿಶಾಮಕ ಸಿಬ್ಬಂದಿಯು ಪ್ರತಿಯೊಂದು ತುರ್ತು ಸಂರ್ಭದಲ್ಲಿ ಅಂದರೆ ಅಗ್ನಿ ಅನಾಹುತ, ರಸ್ತೆ ಅಪಘಾತ, ಕ್ರೂರ ಮೃಗಗಳ ದಾಳಿ, ಕಟ್ಟಡಕುಸಿತ, ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭದಲ್ಲಿ ಎದೆ ಗುಂದದರೆ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಇಂತಹವರನ್ನು ಪ್ರಶಂಸಬೇಕು ಎಂದು ಹೇಳಿದರು.
ವಿಕೋಪಗಳು ಸಂಭವಿಸಿದ ಸಮಯದಲ್ಲಿ ಅವುಗಳನ್ನು ತಡೆಗಟ್ಟಲು ಮತ್ತು ತಮ್ಮ ಪ್ರಾಣವನ್ನು ಅರ್ಪಿಸಿದ ಸೇವಾ ಸಿಬ್ಬಂದಿಗಳ ಸ್ಮರಣಾರ್ಥವಾಗಿ ಏ.14ರಂದು ಭಾವ ಪೂರ್ಣ ಶೃದ್ಧಾಂಜಲಿ ಹಾಗೂ ಅವರುಗಳ ನೆನಪಿಗಾಗಿ ಈ ಸೇವಾ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
ಅಗ್ನಿ ಶಮನ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿಯವರು ದಿಟ್ಟತನ, ಪ್ರಾಣ, ತ್ಯಾಗ, ಬಲಿದಾನದಿಂದ ತಮ್ಮ ವೈಯಕ್ತಿಕ ಜೀವವನ್ನು ಬಲಿಕೊಟು ಸಾರ್ವಜನಿಕರ ಪ್ರಾಣ, ಆಸಿ ಮಾನ ರಕ್ಷಣೆ ಮಾಡಿದ್ದಾರೆ. ವೀರಮರಣವನ್ನಪ್ಪಿದ ಸಿಬ್ಬಂದಿಗಳ ಆತ್ಮಕ್ಕೆ ಶಾಂತಿ ಮತ್ತು ಗೌರವ ಹಾಗೂ ಅವರ ಕುಟುಂಬಕ್ಕೆ ಒಂದು ಸಾಂತ್ವಾನದ ಜತೆಗೆ ನಾವು ಕೂಡ ಕಷ್ಟದಲ್ಲಿ ಭಾಗಿಯಾಗುತ್ತೇವೆ ಎಂದು ಹೇಳುವ ಉದ್ದೇಶದಿಂದ ಈ ಸೇವಾ ಸಪ್ತಾಹವನ್ನು ದೇಶಾದ್ಯಂತ ಆಚರಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

ಅಗ್ನಿ ಶಾಮಕ ಸಿಬ್ಬಂದಿಗಳ ಭಾವನಾತ್ಮಕ ಮತ್ತು ಮಾನಸಿಕ ಭದ್ರತೆ ಒದಗಿಸಲು ಸಾಮಾಜಿಕ ಚಿಂತಕರು ಪ್ರಯತ್ನಶೀಲರಾಗಬೇಕು. ಜೊತೆಗೆ ಸಾರ್ವಜನಿಕರು ಇನ್ನೂ ಹೆಚ್ಚಿನದಾಗಿ ಅಗ್ನಿಶಾಮಕ ಇಲಾಖೆಗೆ ಪ್ರೋತ್ಸಾಹ ಸಹಕಾರ ನೀಡುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು.

ನನಗೆ ಸಾರ್ವಜನಿಕರ ಸೇವೆ ಮಾಡಲು ಶಕ್ತಿ ಕೊಡು, ಮಕ್ಕಳು, ವದ್ದರನ್ನು ರಕ್ಷಿಸಲು ಆತ್ಮಸ್ಥೆ ರ್ಯ ಕೊಡು ಅಂತಹ ಸಂದರ್ಭದಲ್ಲಿ ನಾನು ಮಡಿದರೆ ನನ್ನ ಕುಟುಂಬಕ್ಕೆ ನೀನೆ ದಾರಿ ತೋರಿಸು ಎಂದು ಪ್ರಾರ್ಥಿಸಿ ಮುನ್ನುಗ್ಗುತ್ತಾರೆ.

– ಜಯರಾಮ್, ಅಗ್ನಿ ಶಾಮಕದಳದ ಪ್ರಾದೇಶಿಕ ಅಧಿಕಾರಿ

ಯಾಕಾಗಿ ಹುತಾತ್ಮ ದಿನಾಚರಣೆ : ಎರಡನೇ ವಿಶ್ವ ಮಹಾಯುದ್ದದ ಸಂದರ್ಭದಲ್ಲಿ ಇಂಗ್ಲೇಡಿನಿಂದ ಭಾರತಕ್ಕೆ ಭಾರಿ ಸ್ಪೋಟಕ ವಸ್ತುಗಳು, ಚಿನ್ನದ ಗಟ್ಟಿ ಹಾಗೂ ಇತ್ಯಾದಿ ವಸ್ತುಗಳನ್ನು ಸಾಗಿಸುತ್ತಿದ್ದ ಎಸ್.ಎಸ್ .ಎಸ್. ಪೋರ್ಟ್ ಸ್ಟೈ ಕಿನ್ ಎಂಬ ಹಡಗು ವಿಕ್ಟೋರಿಯಾ ಡಕ್ (ಮುಂಬೈ) ಬಾಂಬೆಯಲ್ಲಿ ಸ್ಪೋಟಗೊಂಡಿತು. ಆಗ ಬೆಂಕಿ ಉಂಟಾದ ಕಾರಣ ಈ ಬೆಂಕಿಯನ್ನು ನಂದಿಸಲು
ಹೋದ ಮುಂಬಯಿ ಅಗ್ನಿಶಾಮಕ ದಳದ ಸುಮಾರು 66 ದಕ್ಷ ಅಗ್ನಿಶಾಮಕರು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿರುತ್ತಾರೆ. ಈ ದುರ್ಘಟನೆಯಲ್ಲಿ ಸುಮಾರು 800 ಸಾರ್ವಜನಿಕರು ಸಾವನ್ನಪ್ಪಿ, 3000 ಜನರು ಗಾಯಗೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಹುತಾತ್ಮ ದಿನಾಚರಣೆ ಆಚರಿಸಲಾಗುತ್ತದೆ.

Leave a Reply

Your email address will not be published. Required fields are marked *