ವಾಸ್ತವ್ಯ
ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ
ಕಡೆ ಕಾರ್ಯಕ್ರಮದಡಿ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ
ಇಲಾಖೆಯ ಇತರೆ ಅಧಿಕಾರಿಗಳ ಗ್ರಾಮ ವಾಸ್ತವ್ಯ
ಕಾರ್ಯಕ್ರಮವನ್ನು ಏ.17 ರಂದು ನ್ಯಾಮತಿ ತಾಲ್ಲೂಕಿನ
ಬೆಳಗುತ್ತಿ ಗ್ರಾಮದ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು
ಕಂದಾಯ ಇಲಾಖೆಯ ವಿವಿಧ ಸೇವೆಗಳು, ಯೋಜನೆಗಳಾದ
ಪೌತಿ ಖಾತೆ ಬದಲಾವಣೆ, ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ
ಸೌಲಭ್ಯ, ಅತಿವೃಷ್ಟಿ, ಬರ ಪರಿಹಾರ, ಪಡಿತರ ಚೀಟಿ, ಪಹಣಿ
ಲೋಪದೋಷ ತಿದ್ದುಪಡಿ, ಸೌಲಭ್ಯಗಳನ್ನು
ಪಡೆದುಕೊಳ್ಳಬಹುದು. ಹಾಗೂ ಈಗಾಗಲೇ ಸಾರ್ವಜನಿಕರಿಂದ
ಸ್ವೀಕರಿಸಲಾಗಿರುವ ಅರ್ಜಿಗಳನ್ನು ಅಂದು
ಇತ್ಯರ್ಥಪಡಿಸಲಾಗುವುದು.
ಉಳಿದಂತೆ ಹೊನ್ನಾಳಿ ತಾಲ್ಲೂಕಿನ ಕಸಬಾ ಹೋಬಳಿಯ
ಸೊರಟೂರು, ಜಗಳೂರು ತಾಲ್ಲೂಕಿನ ಕಸಬಾ ಹೋಬಳಿಯ
ಹಾಲೇಹಳ್ಳಿ, ದಾವಣಗೆರೆ ತಾಲ್ಲೂಕಿನ ಕಸಬಾ ಹೋಬಳಿಯ
ಪುಟಗನಾಳು, ಹರಿಹರ ತಾಲ್ಲೂಕಿನ ಮಲೆಬೆನ್ನೂರು
ಹೋಬಳಿಯ ಯಲವಟ್ಟಿ, ಹಾಗೂ ಚನ್ನಗಿರಿ ತಾಲ್ಲೂಕಿನ
ಬಸವಾಪಟ್ಟಣ-2 ಹೋಬಳಿಯ ನಲ್ಕುದುರೆ ಗ್ರಾಮಗಳಲ್ಲಿ
ತಹಶೀಲ್ದಾರರು ಹಾಗೂ ತಾಲ್ಲೂಕು ಮಟ್ಟದ ಇತರ
ಅಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.